ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯಲ್ಲಿ ಬಸವ ಜಯಂತಿ ಅಂಗವಾಗಿ ಬೆಳಿಗ್ಗೆ ಶ್ರೀ ಬಸವೇಶ್ವರ ಭಾವಚಿತ್ರ ಮತ್ತು 60 ಜೋಡಿ ಎತ್ತುಗಳ ಬೃಹತ ಮೆರವಣಿಗೆಯನ್ನು ಏರ್ಪಡಿಸಿದ್ದರು.
ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ವೃಂದಗಳೊಂದಿಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮಲಿಂಗೇಶ್ವರ ದೇವರ ಅಲಂಕೃತ ಪಾಲಕಿಯೊಂದಿಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಜಗಜ್ಯೋತಿ ಬಸವೇಶ್ವರರರಿಗೆ ಜೈಕಾರಗಳನ್ನು ಹಾಕಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜೋಡಿ ಎತ್ತುಗಳ ರೈತರಿಗೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಿಂದ ಸ್ಟೀಲ್ ಬಕೆಟ್, ಬುಟ್ಟಿ ಮತ್ತು ಟೀಶರ್ಟಗಳನ್ನು ಸಂಘದ ಉಪಾಧ್ಯಕ್ಷ ಶಿವರುದ್ರಪ್ಪ ಬಿ. ಪಾಟೀಲ ವಿತರಿಸಿದರು.
ಮೆರವಣಿಗೆಯಲ್ಲಿ ಸಂಘದ ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಭೀಮಪ್ಪ ಸ. ಕಡಾಡಿ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹನಮಂತ ಪರಕನಟ್ಟಿ, ಸುಭಾಷ ಖಾನಾಪೂರ, ಬಸಪ್ಪ ಹೆಬ್ಬಾರ, ಬಾಳಣ್ಣ ಕಂಕಣವಾಡಿ, ಐ.ಎಸ್. ಹೆಬ್ಬಾಳ, ಪ್ರಕಾಶ ಕಲಾಲ, ಮಹ್ಮದಶಪಿ ಮೋಕಾಶಿ, ಕಲ್ಲೋಳೆಪ್ಪ ತೆಳಗಡೆ, ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ಇದ್ದರು.
ರಾಮಲಿಂಗೇಶ್ವ ದೇವಸ್ಥಾನದಿಂದ ರಸ್ತೆಗಳಲ್ಲಿ ಸಾಗಿ,
ಬುಟ್ಟಿ ಕೊಡಲಾಯಿತು. ವಿವಿಧ್ ವಾದ್ಯ, ರಾಮಲಿಂಗೇಶ್ವರ, ಭಾವಚಿತ್ರ ಮೆರವಣಿಗೆ.