spot_img
spot_img

ಬಸವಣ್ಣ ಸಮಾನತೆಯನ್ನು ಸಾರಿದ ವಿಶ್ವ ಗುರುವೆನಿಸಿದ್ದಾರೆ – ಕುಲಪತಿ ಸಿ ಎಮ್ ತ್ಯಾಗರಾಜ

Must Read

- Advertisement -

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

ಮೂಡಲಗಿ –  ಸಾಕ್ರೇಟಿಸ್ ನಿಂದ ಬಸವಣ್ಣನ ವರೆಗಿನ ಜ್ಞಾನ ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿದೆ. ಕರ್ನಾಟಕ ಸಾಂಸ್ಕೃತಿಕ ನಾಯಕನಾದ ಬಸವಣ್ಣನವರು ತಾವು ಬೆಳೆಯುವ ಜೊತೆಗೆ ತಮ್ಮ ಸುತ್ತಲಿನ ಸಮಾಜವನ್ನು ವೈಚಾರಿಕ ಮತ್ತು ಆಧ್ಯಾತ್ಮಿಕವಾಗಿ ಬೆಳೆಸುವ ಮೂಲಕ ಅರಿವೇ ಗುರು ಎಂದು ಸಾರಿದರು. ಹೆಣ್ಣು –ಗಂಡು, ಮೇಲು-ಕೀಳು, ಬಡವ-ಬಲ್ಲಿದ ಈ ತಾರತಮ್ಯವನ್ನು ಒಡೆದು ಸಾಮಾಜಿಕ ನ್ಯಾಯವನ್ನು ಬಿತ್ತಿದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಹೇಳಿದರು.

ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ “ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ” ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ,, ಬಸವಣ್ಣನವರ ಅನೇಕ ವಚನಗಳನ್ನು ಉಲ್ಲೇಖಿಸುತ್ತ, ನಾವು ಎಲ್ಲಿದ್ದೇವೆ?, ಎಲ್ಲಿಗೆ ಸಾಗಬೇಕು?, ನಮ್ಮ ಕೆಲಸ ಆತ್ಮ ತೃಪ್ತಿಯಿಂದ ಕೂಡಿರಬೇಕೆ ವಿನಹ ಕಾಟಾಚಾರವಾಗಿರಬಾರದು. ತಾತ್ವಿಕವಾಗಿ ಬದುಕನ್ನು ಅರ್ಥೈಸಿಕೊಳ್ಳುವ ಮೂಲಕ ಇತರರಿಗೆ ಮಾದರಿ ಆಗಬೇಕು ಎಂದು ಹೇಳುತ್ತಾ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತರಿಸಬೇಕೆಂದರು.

- Advertisement -

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್.ಎಂ.ಗಂಗಾಧರಯ್ಯ ಆಶಯ ನುಡಿಗಳನ್ನಾಡುತ್ತಾ, ಬಸವಣ್ಣನವರ ಆದರ್ಶ ತತ್ವಗಳನ್ನು ಜಗತ್ತಿಗೆ ಪರಿಚಸುವ ಮಹಾನ್ ಆಶಯದೊಂದಿಗೆ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಹಾನ್ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ  ಬಸಗೌಡ ಪಾಟೀಲ ಅವರು ಮಾತನಾಡಿ, ವಿಶ್ವವಿದ್ಯಾಲಯವು ಗ್ರಾಮೀಣ ಭಾಗದ ಕಾಲೇಜುಗಳ ಜೊತೆಗೆ ಸಂಯೋಜನೆಗೊಂಡು ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ವಿಶೇಷ ಸಂಚಿಕೆಯ ಕುರಿತು ಅಕ್ಕಲಕೋಟ ಸಿ.ಬಿ.ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕರಾದ ಪ್ರೊ. ಗುರುಲಿಂಗಪ್ಪ ಧಬಾಲೆ ಮಾತನಾಡಿ, ಬಸವಣ್ಣನವರನ್ನು ಸಂಪೂರ್ಣವಾಗಿ ಇಂದಿಗೂ ಜನರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ ಕಾರ್ಯ ಇಂತಹ ವಿಚಾರ ಸಂಕಿರಣಗಳ ಮೂಲಕ ಆಗಬೇಕು ಎಂದು ನುಡಿದರು.

- Advertisement -

ಮಧ್ಯಾಹ್ನ ಜರುಗಿದ ವಿಚಾರ ಸಂಕಿರಣದ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ಸಂಶೋಧಕರು ಪ್ರಬಂಧಗಳನ್ನು ಮಂಡಿಸಿದರು. ಕಾರ್ಯಕ್ರಮದ ವಿವಿಧ ಗೋಷ್ಠಿಗಳ ಹಾರೂಗೇರಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ಎಸ್.ಮಾಳಿ, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಮಲ್ಲಿಕಾರ್ಜನ, ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಡಾ. ಹ.ಮಾ.ನಾಗಾರ್ಜುನ, ಬೆಳಗಾವಿ ಆರ್.ಪಿ.ಡಿ. ಕಾಲೇಜಿನ ಪ್ರಾಧ್ಯಾಪಕ ಡಾ. ಹರೀಶ ಕೋಲ್ಕಾರ ಅಧ್ಯಕ್ಷತೆಯನ್ನು ವಹಿಸಿ ಮೌಲ್ವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಬಿ.ಎಸ್.ಕಡಾಡಿ, ಎಸ್.ಎಂ.ಖಾನಾಪೂರ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಾಪಕರಾದ ಡಾ. ಪಿ. ನಾಗರಾಜ, ವಿಚಾರ ಸಂಕಿರಣದ ಸಲಹಾ ಸಮಿತಿ ಸದಸ್ಯರಾದ ಡಾ. ಆನಂದಕುಮಾರ ಜಕ್ಕನವರ, ಎಂ.ಬಿ.ಕೊಪ್ಪದ, ಎನ್.ಬಿ.ಸಂಗ್ರೇಜಿಕೊಪ್ಪ, ಕಾಲೇಜಿನ ಅಧ್ಯಾಪಕರುಗಳಾದ ಡಿ.ಎಸ್.ಹುಗ್ಗಿ, ಡಾ.ಕೆ.ಎಸ್.ಪರವ್ವಗೋಳ, ಆರ್.ಎಸ್.ಪಂಡಿತ, ಎಂ.ಬಿ.ಕುಲಮೂರ, ಬಿ.ಸಿ.ಮಾಳಿ, ವಿಲಾಸ ಕೆಳಗಡೆ, ಬಿ.ಬಿ.ವಾಲಿ. ಬಿ.ಕೆ.ಸೊಂಟನವರ, ರಾಜಶ್ರೀ ತೋಟಗಿ, ವಿ.ವಾಯ್.ಕಾಳೆ, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಶಿಕ್ಷಕರು, ಪ್ರಬಂಧ ಮಂಡನಕಾರರು ಮುಂತಾದವರು ಉಪಸ್ಥಿತರಿದ್ದರು.

ಕು. ಸುಪ್ರಿಯಾ ಮಠಪತಿ ಪ್ರಾರ್ಥಿಸಿದರು, ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಸ್ವಾಗತಿಸಿದರು. ಪ್ರೊ. ಶಂಕರ ನಿಂಗನೂರ ನಿರೂಪಿಸಿದರು, ವಿಚಾರ ಗೋಷ್ಠಿಯ ಸಹ ಸಂಯೋಜಕರಾದ ಡಾ ಗಜಾನನ ನಾಯ್ಕ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

ತಿರುವನಂತಪುರಂ - ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group