ಹುನಗುಂದ: ತಾಲೂಕಿನ ತಿಮ್ಮಾಪುರ ಗ್ಗ್ರಾಮದಲ್ಲಿ ದಿ. 10 ರಂದು ಶುಕ್ರವಾರ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.
ಮುಂಜಾನೆ ಮಲ್ಲಮ್ಮನ ಮೂರ್ತಿಗೆ ಅಮರಯ್ಯ ಹಿರೇಮಠ, ವೀರಯ್ಯ ಸರಗಣಿ ಚಾರಿ, ವೀರಯ್ಯ ಶರಣಯ್ಯ ಹಿರೇಮಠ ರುದ್ರಾಭಿಷೇಕವನ್ನು ನೆರವೇರಿಸಿದರು ನಂತರ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸವನ್ನು ಗ್ರಾಮಸ್ಥರು ವಾದ್ಯ ಮೇಳದೊಂದಿಗೆ ವಿಶ್ವನಾಥ ಚನ್ನಪ್ಪ ಗೌಡ ಹನುಮಗೌಡರ ತೆರಳಿ ಅವರ ಮನೆಯಿಂದ ದೇವಸ್ಥಾನಕ್ಕೆ ತಂದು ಶಿಖರಕ್ಕೆ ಏರಿಸಲಾಯಿತು ಮಧ್ಯಾಹ್ನ ಜಂಗಮ ಪ್ರಸಾದ ನಂತರ ಅನ್ನ ಸಂತರ್ಪಣೆ ಜರುಗಿತು
ಭಾವಚಿತ್ರ ಮೆರವಣಿಗೆ: ಅಂದು ಸಾಯಂಕಾಲ ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡು ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜಿ ಸಲ್ಲಿಸಿದರು
ಹುಚ್ಚೆದ್ದು ಕುಣಿದ ಯುವಕರು ಇಳಕಲ್ ತಾಲೂಕಿನ ಬಲಕುಂದಿ ಹನುಮಾನ್ ಮ್ಯಾಜಿಕಲ್ ಬ್ಯಾಂಡ್ ಸೆಟ್ ವಿವಿಧ ಚಲನಚಿತ್ರ ಜಾನಪದ ಗೀತೆಗಳಿಗೆ ಹಿರಿಯರು ಹಾಗೂ ಯುವಕರು ಹೆಜ್ಜೆ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು