spot_img
spot_img

ತಿಮ್ಮಾಪುರದಲ್ಲಿ ಬಸವ ಜಯಂತಿಯ ನಿಮಿತ್ತ ಜೋಡೆತ್ತುಗಳ ಮೆರವಣಿಗೆ

Must Read

- Advertisement -

ತಿಮ್ಮಾಪೂರ(ತಾ||ಹುನಗುಂದ) ಗ್ರಾಮದಲ್ಲಿ ರೈತರು ವಿಶಿಷ್ಟ ರೀತಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸಂಭ್ರಮದಿoದ ಗ್ರಾಮದಲ್ಲಿ ಆಚರಿಸಿದರು.

ರೈತರ ಸಂಗಾತಿಗಳಾದ ಎತ್ತುಗಳನ್ನು ಬೆಳಿಗ್ಗೆಯಿಂದ ಶುಚಿಗೊಳಿಸಿ ಬಣ್ಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ನೀಡಲಾಯಿತು. ಮಾರುತೇಶ್ವರ ಓಣಿ, ಬಸವೇಶ್ವರ ಓಣಿ ಮತ್ತು ವಿವಿಧ ಓಣಿಯ ರೈತರು ೫ಕ್ಕೂ ಹೆಚ್ಚು ಜೋಡಿಗಳನ್ನು ಹಾಗೂ ಜಗಜ್ಯೋತಿ ಬಸವೇಶ್ವರರ ಬಾವಚಿತ್ರವನ್ನು ಗ್ರಾಮದಲ್ಲಿ ವಾದ್ಯ ಮೇಳದೊಂದಿಗೆ ವೈಭವದಿಂದ ಮೆರವಣಿಗೆ ಮಾಡಲಾಯಿತು.

ಇದಕ್ಕೆ ಮೊದಲು ಮಾರುತೇಶ್ವರ ಹಾಗೂ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಪ್ರಾರಂಭಗೊoಡು. ಸಾಯಂಕಾಲದವರೆಗೆ ಜರುಗಿದ ಜೋಡೆತ್ತುಗಳ ಮೆರವಣಿಗೆಯಲ್ಲಿ ಗ್ರಾಮದ ರೈತರು ಯುವಕರು ಭಾಗವಹಿಸಿದ್ದರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group