spot_img
spot_img

ತಿಮ್ಮಾಪುರ ಗ್ರಾಮದಲ್ಲಿ ಪರಂಪರೆಯ ವಾರ ಹಿಡಿಯುವ ಸಂಪ್ರದಾಯ ಮುಕ್ತಾಯ

Must Read

- Advertisement -

ತಿಮ್ಮಾಪೂರ:- ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಅಷ್ಟೇ ಅಲ್ಲದೇ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಸಂಪ್ರದಾಯದ ವಿಶೇಷತೆಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ. ಊರಿನ ಗ್ರಾಮ ದೇವಿಯ (ದ್ಯಾಮವ್ವ ದೇವಿ, ದುರ್ಗಾದೇವಿ ದೇವತೆಗಳ) ಹೆಸರಿನ ಮೇಲೆ ಐದು ಮಂಗಳವಾರಗಳನ್ನು ವೃತದ ರೂಪದಲ್ಲಿ ಪಾಲಿಸುವುದಾಗಿದೆ. ಕಾರಣ ಇಷ್ಟೇ ಊರಿನ ಸರ್ವ ಜನರೆಲ್ಲರೂ ನೆಮ್ಮದಿ, ನಿರ್ಭೀತಿ, ಆರೋಗ್ಯದಿಂದ ಬಾಳಲು ಈ ವೃತ್ತದ ಆಚರಣೆ ಚಾಲ್ತಿಯಲ್ಲಿದೆ. ಇಡೀ ಊರು ಯಾವುದೇ ತೊಂದರೆಗಳಿಲ್ಲದೆ ಸುಭಿಕ್ಷವಾಗಿ ನಡೆಯಬೇಕು ಎನ್ನುವುದು ಅದರ ಪ್ರಮುಖ ಧ್ಯೇಯವಾಗದೆ.

ಈ ಐದು ಮಂಗಳವಾರಗಳೆoದು ಊರಿನ ಪ್ರತಿ ಮನೆ ಮನೆಯಲ್ಲಿ ರೊಟ್ಟಿ ಬೇಯಿಸುವ ಹಾಗಿಲ್ಲ. ವ್ಯವಸಾಯದ ಚಟುವಟಿಕೆಗಳು ನಡೆಸೊಲ್ಲ, ಸಾಧ್ಯವಾದಷ್ಟು ತಮ್ಮ ಸ್ವಂತದ ಕೆಲಸಗಳಿಗೆ ರಜೆ ಹಾಕಿ ಈ ಪರಂಪರೆಯ ಭಾಗವಾಗುವುದು. ರೈತಾಪಿ ವರ್ಗದಲ್ಲಿ ಮನೆಯ ಕೆಲವರು ಮಂಗಳವಾರದoದು ಉಪವಾಸ ಸಹಿತ ಮಾಡುತ್ತಾರೆ.

ಮಂಗಳವಾರದoದು ಸ್ನಾನ ಮುಗಿದ ನಂತರ ನಮ್ಮ ಅಕ್ಕ ಪಕ್ಕದ ದೇವರಿಗೆ ತುಂಬಿದ ಕೊಡದ ನೀರನ್ನು ಹಾಕಿ, ಸಂಕಲ್ಪ ಮಾಡಿಕೊಂಡು ಬರುವುದು. ಐದನೇ ಮಂಗಳವಾರದoದು ಸಮಾಪ್ತಿಗಾಗಿ ಮನೆಯಿಂದ ಹಬ್ಬದ ರೀತಿಯಲ್ಲಿ ಗ್ರಾಮದ ಎಲ್ಲಾ ದೇವರಿಗೆ ನೈವೇದ್ಯಗಾಗಿ ಮನೆಯ ಅಡುಗೆಯನ್ನು ನೀಡುವುದು ವಾಡಿಕೆಯಲ್ಲಿದೆ.

- Advertisement -

ಈ ಸಂಪ್ರದಾಯವು ಪ್ರತಿ ವರ್ಷ ನಡೆಯುತ್ತದೆ. ಇದೇ ದಿನಾಂಕ ಅಂತ ಫಿಕ್ಸ್ ಇರುವುದಿಲ್ಲ. ಊರಿನ ಕೆಲವು ಪ್ರಮುಖರು ಯುಗಾದಿಯ ನಂತರ ಒಂದು ಕಾಲಮಿತಿಯಲ್ಲಿ ನಿಶ್ಚಯಿಸಿ ಅದನ್ನು ಡಂಗೂರದ ಮೂಲಕ ಇಡೀ ಊರಿಗೆ ವಿಷಯ ಮುಟ್ಟಿಸುತ್ತಾರೆ.ಅಷ್ಟೇ ಅಲ್ಲದೇ ಮೂಲತಃ ತಿಮ್ಮಾಪೂರದವರು ಆಗಿರದಿದ್ದರೂ ಇಲ್ಲಿ ಬಂದು ಒಂದು ನೆಲೆಸಿರುವವರೆಲ್ಲರೂ ಈ ವೃತವನ್ನು ಪಾಲಿಸುತ್ತಾರೆ.
ಈ ವಾರ ಹಿಡಿಯುವ ಸಂಪ್ರದಾಯ ಆಚರಣೆಯೂ ಸಂಪ್ರದಾಯ ಅಷ್ಟೇ ಅಲ್ಲದೇ ಇದೊಂದು ಆರೋಗ್ಯ, ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದಾಗಿದೆ. ಬೇಸಿಗೆ ಸಮಯದಲ್ಲಿ ಈ ತಾಪಕ್ಕೆ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳುತ್ತವೆ. ಉಪವಾಸ ಮಾಡುವುದರಿಂದ  ಅನಾರೋಗ್ಯದ ಸಮಸ್ಯೆಗೆ ಕಡಿಮೆ ಆಗುತ್ತದೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಸ್ಥಾನ ಸುತ್ತುವುದರಿಂದ ಧನಾತ್ಮಕ ವಿಚಾರಗಳು ನಮ್ಮಲ್ಲಿ ಹೋಗಲು ಶುರುವಾಗುತ್ತದೆ. ಬೆಳಿಗ್ಗೆ ಬೇಗ ಏಳುವುದರಿಂದ ಮನಸ್ಸು ಬುದ್ದಿ ಆಹ್ಲಾದಕರವಾಗುತ್ತದೆ.

ವಾರ ಪೂರ್ತಿ ಕೆಲಸ ಮಾಡಿ ಬಿಸಿಲಿನ ಬೇಗೆಯಿಂದ ಮಂಗಳವಾರ ದೊಂದು ವಿಶ್ರಾಂತಿಯ ಜೊತೆಗೆ ಮನೆಯವರ ಜೊತೆಗೆ ಆತ್ಮೀಯತೆಯ ಭಾವ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಹಿರಿಯರು ಹಾಕಿಕೊಟ್ಟ ಈ ರೀತಿಯ ಒಳ್ಳೊಳ್ಳೆಯ ಸಂಪ್ರದಾಯ, ಆಚರಣೆಗಳನ್ನು ಉಳಿಸಿ, ಪಾಲಿಸಿ ಬೆಳೆಸುವ ಜವಾಬ್ದಾರಿ ನಮ್ಮ ಯುವವೃಂದದ ಮೇಲಿದೆ. ಆ ಆಚರಣೆಯ ಭಾಗಗಳಾಗಿ ನಮ್ಮ ಸಂಸ್ಕೃತಿಯ ಆರಾಧಕರಾಗೋಣ ಎನ್ನುವ ಆಶಯದೊಂದಿಗೆ ಈ ವರ್ಷದ ವಾರ ಹಿಡಿಯುವ ಸಂಪ್ರದಾಯವು. ದಿನಾಂಕ:೧೬/೦೪/೨೦೨೪ ಒಂದನೇ ಮಂಗಳವಾರ ಪ್ರಾರಂಭಗೊಡು ದಿ.೧೪/೦೫/೨೦೨೪ ಐದನೇ ವಾರವು ಕೊನೆಯವಾರವಾಗಿರುತ್ತದೆ. ಕೊನೆಯವಾರದಂದು ಗ್ರಾಮದ ಮಾರುತೇಶ್ವರ ಹಾಗೂ ಬಸವೇಶ್ವರ, ಹೇಮರಡ್ಡಿ ಮಲ್ಲಮ್ಮ ಗ್ರಾಮ ಗ್ರಾಮ ದೇವತೆಗಳಾದ ದುರ್ಗಮ್ಮ, ಕರಿಯಮ್ಮ, ಲಕ್ಷ್ಮಿದೇವಿ, ದ್ಯಾಮಮ್ಮ, ಪತ್ರಿಗಿಡದ ಬಸವೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳೊಂದಿಗೆ ಸಂಭ್ರಮದೊoದಿಗೆ ಆಚರಿಸಲಾಯಿತು.

ನೀರೆರುವ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರಾದ ಬಸವರಾಜ ಮೂಲಿಮನಿ, ಬಸವರಾಜ ಬೇರಗಿ, ಪ್ರಭು ಹನುಮಗೌಡರ, ಬಸವರಾಜ ತಳವರ, ಗಣೇಶ ನಾಗನೂರ, ಸಂಜೇತ ಹೆರಕಲ್ಲ, ಮುತ್ತು ಪೊಲೀಸ್ ಪಾಟೀಲ, ಅಶೋಕ ಮಣಿನಾಗರ, ಬಸವರಾಜ ಹಳ್ಳೂರ, ಶ್ರೀ ಶೈಲ ಬೆಳ್ಳಿಹಾಳ, ಪ್ರವಿಣಕುಮಾರ ಹಾದಿಮನಿ, ಪ್ರಜ್ವಲ ಮಡಿವಾಳರ, ಅಕ್ಷಯ ಕುಮಾರ ಮುದೇನೂರ, ಮಂಜು ಕೆಂಗಲ್ಲ, ಅರುಣ ಹಾದಿಮನಿ, ಬಸವರಾಜ ಬಡಿಗೇರ, ಶ್ರೀ ಸಾಯಿ ಕುರಹಟ್ಟಿ, ಬಸವರಾಜ.ಹ.ಹೂನೂರ, ಸಂದೀಪ ಕಂದಗಲ್ಲ, ಪ್ರಜ್ವಲ್.ಎ.ಹಕ್ಕರಹಾಳ, ಆದರ್ಶ ವಂದಾಲ, ಪುಟ್ಟರಾಜ.ಶ..ಹಿರೇಮಠ, ಕಾರ್ತಿಕ.ಶ. ರಂಗನಗೌಡರ, ಪ್ರತಿಕ.ಮಾ.ದಾದ್ಮಿ, ಶ್ರೀಶೈಲ.ಹ.ಹೂನೂರ, ಗಣೇಶ.ನಾ.ವಾಲಿಕಾರ, ಶ್ರೀ ಶೈಲ,ರಾ.ಮಡಿವಾಳರ ಮುಂತಾದವರು ಭಾಗವಹಿಸಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group