ಮೂಡಲಗಿ: ನೀರಿನ ಸಂರಕ್ಷಣೆ ಮತ್ತು ಸದ್ಭಳಕೆ ನಮ್ಮ ನಿಮ್ಮೆಲ್ಲರ ಕರ್ತವ್ಯ, ಅದರೊಂದಿಗೆ ಮಳೆ ನೀರಿನ ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಂರ್ತಜಲ ಮಟ್ಟದ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಬೇಕೆಂದು ತುಕ್ಕಾನಟ್ಟಿಯ ಐ.ಸಿ.ಎ.ಆರ್. ಬರ್ಡ್ಸ್ ಕೃಷಿ ವಿಜ್ಞಾನಕೇಂದ್ರದ ಚೇರಮನ್ನರು, ಆರ್.ಎಮ್.ಪಾಟೀಲ ಹೇಳಿದರು
ಮಂಗಳವಾರ ಸಮೀಪದ ತುಕ್ಕಾನಟ್ಟಿಯ ಐ.ಸಿ.ಎ.ಆರ್. ಬರ್ಡ್ಸ್ ಕೃಷಿ ವಿಜ್ಞಾನಕೇಂದ್ರದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಬಿ. ಕೆ. ಬರಲಾಯಾ ಮಾತನಾಡಿ, ಜಲ ಸಂರಕ್ಷಣೆ ಬಗ್ಗೆ ಈಗಿನ ಸ್ಥಿತಿಗಳು ಮತ್ತು ಹಿಂದಿನ ಸ್ಥಿತಿಗತಿಗಳ ಬಗ್ಗೆ ಮೆಲುಕು ಹಾಕುತ್ತ ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಬಹಳಮುಖ್ಯ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಜಲ ದಿನದ ಪ್ರಾಮುಖ್ಯತೆ ನೀರಿನ ಸಂರಕ್ಷಣೆಯ ಮಾರ್ಗಗಳು ಸದ್ಬಳಕೆಯ ವಿಧಾನಗಳು ಮತ್ತು ಮುಂದಿನ ದಿನಗಳಲ್ಲಿ ಉಂಟಾಗುವ ನೀರಿನ ಅಭಾವಕ್ಕೆ
ಇವಾಗ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತು ಸವಿವರವಾಗಿ ಉಪನ್ಯಾಸವನ್ನು ಡಾ: ಡಿ.ಎ. ಮೇತ್ರೆ ಹಿರಿಯ ವಿಜ್ಞಾನಿಗಳು ಹಾಗೂ ಕೃಷಿ ವಿಜ್ಞಾನಕೇಂದ್ರ, ಮುಖ್ಯಸ್ಥ ನಡೆಸಿಕೊಟ್ಟರು.
ಈ ಕಾರ್ಯಕ್ರಮವನ್ನು ಸಸಿಗಳಿಗೆ ಹನಿ ಹನಿಯಾಗಿ ನೀರು ಉಣಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ಸಮಾರಂಭದ ಪ್ರಾಸ್ತಾವಿಕ ಭಾಷಣವನ್ನು ವಿಜ್ಞಾನಿ ಡಿ.ಸಿ. ಚೌಗಲಾ, (ಸಸ್ಯ ಸಂರಕ್ಷಣೆ) ನೇರವೇರಿಸಿದ್ದರು. ವಿಜ್ಞಾನಿ ರೇಖಾ ಬಿ. ಕಾರಬಾರಿ ಸ್ವಾಗತಿಸಿದರು ವಿಜ್ಞಾನಿ ಎನ್.ಆರ್.ಸಾಲಿಮಠ, ವಂದಿಸಿದರು. ನಿರೂಪಣೆಯನ್ನು ವಿಜ್ಞಾನಿ ಪರಶುರಾಮ ಮಾ. ಪಾಟೀಲ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮೂಕ ಮತ್ತು ಕಿವುಡ ಶಾಲೆಯ ಮಕ್ಕಳು, ರೈತರು, ರೈತ ಮಹಿಳೆಯರು, ಕೆ.ವಿ.ಕೆಯ ಸಿಬ್ಬಂದಿಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು