ಮೂಡಲಗಿ : 2023 – 24 ಸಾಲಿನ ಬರ ಪರಿಹಾರ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರವನ್ನು ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ಆರಂಭಿಸಲಾಗಿದೆ ಎಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023 – 24ನೇ ಸಾಲಿನ ಮೂಡಲಗಿ ತಾಲೂಕಿನಲ್ಲಿ ಬರ ಪರಿಹಾರ ಸಂದಾಯದ ಬಗ್ಗೆ ಸಾರ್ವಜನಿಕ/ರೈತರ ಕುಂದುಕೊರತೆ ನಿವಾರಣೆಗಾಗಿ ಸರಕಾರದ ಆದೇಶದಂತೆ ತಾಲೂಕಾ ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.
ಸ್ಥಾಪಿಸಿರುವ ಸಹಾಯವಾಣಿ ಕೇಂದ್ರದಲ್ಲಿ ಮೊ- 8867439539 ಹಾಗೂ ಕಂದಾಯ ಇಲಾಖೆಯ ಸಿದ್ದು ಬಿಸ್ವಾಗರ ಮೊ-9945842864, ಸಚಿನ ಕೊಣ್ಣುರ 8660784112, ಕೃಷಿ ಇಲಾಖೆಯ ಪರಸಪ್ಪ ಹುಲಗಬಾಳ ಮೊ-8277934160, ತೋಟಗಾರಿಕೆ ಇಲಾಖೆಯ ಶಿವಾನಂದ ಸವಸುದ್ದಿ ಮೊ-7411342383 ಅವರು ಕಾರ್ಯ ನಿರ್ವಹಿಸುತಿದ್ದು. ಬರ ಪರಿಹಾರದ ಮತ್ತು ಕುಂದುಕೊರತೆಗಳನ್ನು ನೇರವಾಗಿ ಕಛೇರಿಗೆ ಭೇಟಿ ನೀಡಿದಲ್ಲಿ ಅಥವಾ ಮಾಹಿತಿ ಕೇಂದ್ರಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಕರೆ ಮಾಡಿ ಕೇಳುವ ಪ್ರತಿಯೊಂದು ವಿಷಯಕ್ಕೆ ಪರಿಶೀಲಿಸಿ ಹಾಗೂ ನಿಖರವಾಗಿ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಾರೆ, ಕಾರಣ ರೈತರು ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಹಶೀಲ್ದಾರ ಬಿ.ಎಸ್.ಕಡಕಭಾವಿ ಅವರು ತಿಳಿಸಿದ್ದಾರೆ.