ಮೈಸೂರು – ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 22ರಂದು ಬುಧವಾರ ಶ್ರೀ ಲಕ್ಷ್ಮೀನರಸಿಂಹ ಜಯಂತಿ ಹಾಗೂ ವಿಶೇಷ ಸ್ವಾತಿ ಪೂಜೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 7ಕ್ಕೆ ವಿಶ್ವರೂಪದರ್ಶನ, 8ಕ್ಕೆ ಮಹಾಸಂಕಲ್ಪದೊಂದಿಗೆ ನವ ಕಳಶ ಸ್ಥಾಪನೆ ಆವಾಹನ, ಬೆಳಿಗ್ಗೆ 9ರಿಂದ 10.30ರವರೆಗೆ ವಿಶೇಷವಾದ (108 ಲೀಟರ್ ಹಾಲು, 108 ಲೀಟರ್ ಮೊಸರು, 108 ಎಳನೀರು) ಮತ್ತು ಇನ್ನೂ ಇತರೆ ದ್ರವ್ಯಗಳೊಂದಿಗೆ ಮಹಾಭಿಷೇಕ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅಲಂಕಾರ, 1ಕ್ಕೆ ವಿಶೇಷ ಪ್ರಸಾದ ನೈವೇದ್ಯ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ನಂತರ ಸಂಜೆ 6.30ಕ್ಕೆ ತಿರುವೀದಿ ಉತ್ಸವ (ಒಂಟಿಕೊಪ್ಪಲ್ ಶ್ರೀನಿವಾಸ ದೇವಸ್ಥಾನ, ಆಂಡಾಳ್ ಮಂದಿರ, ಚಂದ್ರಮೌಳೇಶ್ವರ ದೇವಸ್ಥಾನದ ಮೂಲಕ) ಹಮ್ಮಿಕೊಳ್ಳಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನರಸಿಂಹನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಮುಖ್ಯಸ್ಥರಾದ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ 9342188323, 7598832271 ಸಂಪರ್ಕಿಸಬಹುದು.