ಬೆಳಗಾವಿ – ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಸತ್ಸಂಗ ಕಾರ್ಯಕ್ರಮ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಮತ್ತು ಶರಣ ಸಾಹಿತ್ಯ ಚಿಂತಕರು ಆದ ಮಲ್ಲಿಕಾರ್ಜುನ ಕೋಳಿ ಅವರಿಂದ ಶರಣ ಸಂಸ್ಕೃತಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಜರುಗಿತು.
12 ನೇ ಶತಮಾನದ ಬಸವಣ್ಣನವರಾದಿಯಾಗಿ ಸರ್ವ ಶರಣರ ಬದುಕು ಮತ್ತು ವಚನ ಸಂದೇಶ ನಮ್ಮ ಬದುಕಿಗೆ , ಸಂಸ್ಕೃತಿಯ ಉಳಿವಿಗೆ ಸಾಕ್ಷಿ ರೂಪಗಳು. ದಾಸಿಮಯ್ಯ, ದುಗ್ಗಳೆಯರ ಮತ್ತು ಮಾರಯ್ಯ- ಲಕ್ಕಮ್ಮನವರ ಸತಿಪತಿ ಭಾವದ ಬದುಕಿಗೆ , ಕಾಯಕದ ಮಹತ್ವವನ್ನು ಸಾರಿ , ಸಂಸ್ಕ್ಕತಿಯ ಹೊಸದೊಂದು ಮಾದರಿಗಳಂತೆ ನಮ್ಮ ಮುಂದೆ ನಿಲ್ಲುತ್ತವೆ. ಹಾಗೆ ಸತ್ಯಕ್ಕನ ಕಾಯಕ ನಿಷ್ಠೆ , ಅಕ್ಕಮಹಾದೇವಿಯ ಜೀವನ ದರ್ಶನ ನಮ್ಮ ಮಹಿಳಾ ಸಮಾಜಕ್ಕೆ ಸ್ಪೂರ್ತಿಯಾಗಿದೆ ಎನ್ನುವ ಹಲವಾರು ಶರಣ ಸಂಸ್ಕೃತಿಯ ವಿಷಯಗಳನ್ನು ವಿಮರ್ಶಾತ್ಮಕವಾಗಿ ಮಲ್ಲಿಕಾರ್ಜುನ ಕೋಳಿ ಅವರು ವಿಶ್ಲೇಷಿಸಿದರು.
ಪೂರ್ವದ ಅಧ್ಯಕ್ಷರಾದ ಸದಾಶಿವ ದೇವರಮನಿ ಮಾತನಾಡುತ್ತಾ, ಹಾಲು ಸಂಸ್ಕಾರದ ಫಲದಿಂದ ತುಪ್ಪವಾಗಿ ಪರಿವರ್ತನೆಗೊಳ್ಳುವ ಉದಾಹರಣೆಯೊಂದಿಗೆ, ಸಂಸ್ಕ್ರತಿ ಹಾಗೂ ಸಂಸ್ಕಾರದ ಮಹತ್ವ ತಿಳಿಸಿದರು.
ಸಂಘಟನೆ ಅಧ್ಯಕ್ಷರಾಗಿದ್ದ ಶರಣ ಈರಣ್ಣ ದೆಯನ್ನವರ ಮಾತನಾಡುತ್ತಾ , ಲಿಂಗಾಯತ ಸಂಘಟನೆ ವರ್ಷಪೂರ್ತಿ ಹಮ್ಮಿಕೊಳ್ಳುವ ಸಮಾಜಮುಖಿ ಕೆಲಸಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪ್ರಸಾದ ದಾಸೋಹ ಸೇವೆ ನೆರವೇರಿಸಿದ ನಿವೃತ್ತ ಉಪನ್ಯಾಸಕರಾದ ಬಾಳಗೌಡ ದೊಡಬಂಗಿ ಅವರನ್ನು ಗೌರವಿಸಲಾಯಿತು. ಕ.ಸಾ.ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ಮಹಾಂತೇಶ ಮೆಣಸಿನಕಾಯಿ ಉಪನ್ಯಾಸಕರನ್ನು ಪರಿಚಯಿಸಿದರು. ಶರಣೆ ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ವಚನ ಪ್ರಾರ್ಥನೆ ನೆರವೇರಿತು ಆರ್. ಎಸ್. ಚಾಪಗಾವಿ , ಎ. ಬಿ. ಜೇವಣಿ, ಅವರಿಂದ ವಚನ ಗಾಯನ ಮತ್ತು ಶ್ರಿ ಸಂಗಮೇಶ ಅರಳಿ ಅವರಿಂದ ನಿರೂಪಣೆ ನೆರವೇರಿತು. ಸಂಘಟನೆ ಕಾರ್ಯದರ್ಶಿಗಳಾದ ಸುರೇಶ ನರಗುಂದ, ಬಸವರಾಜ ಕರಡಿಮಠ, ಗಂಗಪ್ಪ ಉಣಕಲ್, ಸಾರಾಪುರೆ , ಬಸವರಾಜ್ ಬಿಜ್ಜರಗಿ, ರೊಡಬಸನ್ನವರ, ವಿ. ಕೆ ಪಾಟೀಲ ,,, ಹೀಗೆ ಸಂಘಟನೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು , ಸತ್ಸಂಗವನ್ನು ಯಶಸ್ವಿಗೊಳಿಸಿದರು