HomeUncategorizedಜೂನ್ ೪ ಕ್ಕೆ ವಿರೋಧ ಪಕ್ಷಗಳು ನೀರು ಕುಡಿಯಲಿವೆ - ಪ್ರಶಾಂತ ಕಿಶೋರ

ಜೂನ್ ೪ ಕ್ಕೆ ವಿರೋಧ ಪಕ್ಷಗಳು ನೀರು ಕುಡಿಯಲಿವೆ – ಪ್ರಶಾಂತ ಕಿಶೋರ

ಹೊಸದಿಲ್ಲಿ – ಜೂನ್ ೪ ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಲೇ ದೇಶದ ಪ್ರತಿಪಕ್ಷಗಳು ನೀರು ಕುಡಿಯಬೇಕಾಗುತ್ತದೆ ಹಾಗಾಗಿ ಅವರೆಲ್ಲ ಪಕ್ಕದಲ್ಲಿ ನೀರು ಇಟ್ಟುಕೊಳ್ಳುವುದು ವಾಸಿ ಎಂದು ಖ್ಯಾತ ಚುನಾವಣಾ ವೀಕ್ಷಕ ಪ್ರಶಾಂತ ಕಿಶೋರ ಹೇಳಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರಲಿದೆಯೆಂದು ಇತ್ತೀಚೆಗೆ ಅವರು ಭವಿಷ್ಯ ನುಡಿದಿದ್ದರು ಅದಕ್ಕೆ ಪ್ರತಿಪಕ್ಷಗಳು ಭಾರೀ ಟೀಕೆ ವ್ಯಕ್ತಪಡಿಸಿದ್ದರಿಂದ ಪ್ರಶಾಂತ ಕಿಶೋರ ಅವರು, ಜೂನ್ ನಾಲ್ಕರ ನಂತರ ವಿರೋಧ ಪಕ್ಷಗಳ ಹೊಟ್ಟೆಯುರಿ ಜಾಸ್ತಿಯಾಗುವುದರಿಂದ ಅದನದನು ತಣಿಸಲು ಸಾಕಷ್ಟು ನೀರನ್ನು ತಮ್ಮ ಪಕ್ಕದಲ್ಲಿ ಇಟ್ಡುಕೊಳ್ಳಬೇಕು ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.

ನೀರು ಕುಡಿಯುವುದು ಒಳ್ಳೆಯದು. ಯಾರು ನನ್ನ ಭವಿಷ್ಯದಿಂದ ಕನಲಿದ್ದಾರೋ ಅವರು ನೀರು ಕುಡಿಯವುದು ಲೇಸು ಎಂದು ಅವರು ಇತ್ತೀಚೆಗೆ ಖ್ಯಾತ ಸಂದರ್ಶನಕಾರ ಕರಣ್ ಥಾಪರ್ ಅವರ ಸಂದರ್ಶನದಲ್ಲಿ ನುಡಿದರು.

RELATED ARTICLES

Most Popular

error: Content is protected !!
Join WhatsApp Group