spot_img
spot_img

ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆ

Must Read

- Advertisement -

ಯರಗಟ್ಟಿ: ಪಟ್ಟಣದ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಯರಗಟ್ಟಿ -ಮುರಗೋಡ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರಧಾನ ಗುರುಗಳಿಗೆ ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವಭಾವಿ ಸಭೆಯನ್ನು ಗುರುವಾರ ಯರಗಟ್ಟಿಯಲ್ಲಿ ಏರ್ಪಡಿಸಲಾಗಿತ್ತು.

ಸಭೆ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ, ೨೦೨೪-೨೫ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ ೨೯ರಿಂದ ಶಾಲೆಗಳು ಆರಂಭವಾಗಲಿವೆ.ಮೇ ೨೯ಕ್ಕೆ ಶಾಲೆಗಳಿಗೆ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಆಗಮಿಸುವ ಮೂಲಕ ಸಿದ್ದತಾ ಕಾರ್ಯ ಜರುಗಿಸುವರು.೩೧ ರಂದು ಶಾಲಾ ಪ್ರಾರಂಭೋತ್ಸವ ಜರುಗುವುದು.ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ ೨೦೨೪-೨೦೨೫ರ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ ಎಂದು ತಿಳಿಸಿದರು.

ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆ, ಸಂಭ್ರಮ ಶನಿವಾರ ಸೇರಿ ಇತರ ಯೋಜನೆಗಳನ್ನು ನಿರ್ವಹಿಸುವಂತೆ ಶಾಲಾ ಪ್ರಧಾನ ಗುರುಗಳು ಹಾಗೂ ಸಿ.ಆರ್.ಪಿಗಳು ಎಲ್ಲರೂ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಲು ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ.

- Advertisement -

ಇದೇ ಸಂದರ್ಭದಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಮಾತನಾಡಿ, “ಅಡುಗೆಯವರ ನೇಮಕಾತಿ. ಸ್ವಚ್ವತೆ ಶುಚಿರುಚಿ ಆಹಾರ ತಯಾರಿಕೆ ಇತ್ಯಾದಿ ಅಂಶಗಳ”ಕುರಿತು ತಿಳಿಸಿದರು.

ಸಮನ್ವಯ ಶಿಕ್ಷಣ ಕಾರ್ಯ ಚಟುವಟಿಕೆಗಳ ಕುರಿತು ಯರಗಟ್ಟಿ ವಲಯದ ಸಮನ್ವಯ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ ಸೇತುಬಂಧ ಶಾಲಾ ಶೈಕ್ಷಣಿಕ ಯೋಜನೆ ಕುರಿತು.ಶಾಲೆಯಲ್ಲಿ ನಿರ್ವಹಿಸುವ ಕಾರ್ಯಗಳ ಕುರಿತು

ಡಾ.ಬಿ.ಐ.ಚಿನಗುಡಿ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ದನಗೌಡರ.ತಾಲೂಕು ಪದಾಧಿಕಾರಿಗಳಾದ ಐ ಎಸ್ ಕಲಗೌಡ್ರ.ವೈ.ಬಿ.ನಂದಿ ಪ್ರೌಢಶಾಲಾ ಮುಖ್ಯಾಪಾಧ್ಯಾಯರ ಸಂಘದ ಅಧ್ಯಕ್ಷರಾದ ವಿಜಯ ಪಡಿ.ಬಸವೇಶ್ವರ ಪ್ರೌಢಶಾಲೆ ಯರಗಟ್ಟಿಯ ಪ್ರಧಾನ ಗುರುಗಳಾದ ಬಿ.ಎಸ್.ಆಲದಕಟ್ಟಿ.ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರತ್ನಾ ಸೇತಸನದಿ.ಮುರಗೋಡ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ದುರಗಪ್ಪ ಭಜಂತ್ರಿ ಯರಗಟ್ಟಿ ಮತ್ತು ಮುರಗೋಡ ವಲಯಗಳ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ.ಮಲಕನ್ನವರ.ಶ್ರೀಮತಿ ಗುರುದೇವಿ ಮಲಕನ್ನವರ.ಬಿ.ಎಸ್.ಸಿದ್ದಬಸನ್ನವರ.ಅರ್ಜುನ ಮುಳ್ಳುರ, ವ್ಹಿ.ಎಸ್.ಬಡಿಗೇರ, ಎಸ್.ಎಸ್.ಮಲ್ಲನ್ನವರ, ರಫೀಕ ಮುರಗೋಡ, ಎನ್.ಬಿ.ಪೆಂಟೇದ, ಎಂ.ಎಂ.ಬೋಳೆತ್ತಿನ, ಮೋಹನ ಬಾಳೇಕುಂದ್ರಿ ಉಪಸ್ಥಿತರಿದ್ದರು.

- Advertisement -

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಶಾಲಾ ಪ್ರಾರಂಭೋತ್ಸವದ ತಯಾರಿ ಹಾಗೂ ಸಸ್ಯ ಶ್ಯಾಮಲಾ ಕುರಿತ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಯರಗಟ್ಟಿ ಹಾಗೂ ಮುರಗೋಡ ವಲಯಗಳ ಸರಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಜರಿದ್ದರು.

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group