spot_img
spot_img

ರೈತರು ದುರಭ್ಯಾಸ ದುಶ್ಚಟದಿಂದ ಮುಕ್ತರಾಗಲು  ರಾಜು ಭಾಯೀಜೀ ಕರೆ

Must Read

spot_img
    ಚಾಮರಾಜನಗರ- ಅನ್ನ ದಾತ ಸುಖೀ ಭವ ಎಂದು ಹೇಳುತ್ತಾರೆ,ಆದರೆ ಇಂದಿನ ಕೆಲವು ರೈತರು ಒತ್ತಡಕ್ಕೆ ಸಿಲುಕಿ ದುರಭ್ಯಾಸ ದುಶ್ಚಟಗಳಿಗೆ ಸಿಲುಕಿ ತಮ್ಮಜೀವನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮೌಂಟ್ ಅಬು ರಾಜಾಸ್ಥಾನ ಗ್ರಾಮೀಣ ಸೇವಾ ವಿಭಾಗದ ಅಂತಾರಾಷ್ಟ್ರೀಯ ಅಧ್ಯಕ್ಷರಾದ ರಾಜಯೋಗಿ ಬ್ರಹ್ಮಾಕುಮಾರ ರಾಜುಭಾಯೀಜೀಯವರು ವಿಷಾದ ವ್ಯಕ್ತಪಡಿಸಿದರು.
     ಅವರು ನಗರದ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ಧ ಶಾಶ್ವತ ಯೋಗಿಕ ಬೇಸಾಯದ ಬಗ್ಗೆ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
   ರೈತರು ತಮ್ಮ ಜೀವನವನ್ನು ಸುಖಮಯ ಮಾಡಿಕೊಳ್ಳಲು ತಮ್ಮ ಪರಿವಾರಕ್ಕಾದರೂ ಬೇಕಾಗುವಷ್ಟು ವಿಷಮುಕ್ತ ಬೇಸಾಯ ಅಥವ ಸಾಯವಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
    ಮಣ್ಣಿನಲ್ಲಿ ಸತ್ವ  ಬೀಜದ ಸತ್ವ ಬೆಳೆಯ ಸತ್ವವನ್ನು ಹೆಚ್ಚಿಸಲು, ಬಳಕೆದಾರರ ಆರೋಗ್ಯವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಉಪಯೋಗಿಸುವಂತೆ ಕೃಷಿ ವಿಜ್ಣಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ|ಪೂಂಪನಗೌಡ ರೈತರಿಗೆ ಕರೆ ನೀಡಿದರು.
ರಾಜಯೋಗ ಶಿಕ್ಷಣ ತಜ್ಞ ಬ್ರಹ್ಮಾಕುಮಾರ ಪ್ರಾಣೇಶ್ ಜೀ ಮಾತನಾಡಿ, ಕೀಟ ನಾಶಕ ಸಿಂಪಡಣೆ ದವಸ ಧಾನ್ಯದಲ್ಲಿರುವ ಪೌಷ್ಟಿಕಾಂಶ ಮಣ್ಣಿನಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಇದರಿಂದ ಹೃದಯಾಘಾತದಂತಹ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದರು.
  ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲ ಬಿಕೆ ರಂಗನಾಥ ಶಾಸ್ತ್ರೀಜೀ ಮಾತನಾಡಿ ಬೀಜದಂತೆ  ವೃಕ್ಷ ಎಂದು ಹೇಳುತ್ತಾರೆ. ಹಾಗೇ ಬೀಜಕ್ಕೆ ಪರಮಾತ್ಮನ ನೆನಪಿನ ಕಿರಣಗಳನ್ನು ತುಂಬಿ ಬಿತ್ತನೆ ಮಾಡಿದ್ದೇ ಆದರೆ ಆರೋಗ್ಯ ಕರ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದರು.
ರೈತ ಹೋರಾಟ ಸಂಘದ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ, ಸಂಸ್ಥೆಯವರು ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಸಾವಯವ ಕೃಷಿ, ಶಾಶ್ವತ ಯೋಗಿಕ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವುದು ಶಾಘ್ಲನೀಯ ಕಾರ್ಯ ಎಂದರು
ಇದೇ ಸಂದರ್ಭದಲ್ಲಿ ಜಿಲ್ಲೆಯ ಐದು ಸಾವಯವ ಕೃಷಿಕರನ್ನು ರಾಷ್ಟ್ರಾಧ್ಯಕ್ಷರು ಸನ್ಮಾನಿಸಿದರು. ಕಾರ್ಯಕ್ರಮದ ಆಯೋಜಕರಾದ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ  ಹೇಗೆ ಬೆಳೆಗಳ ಮೇಲೆ ಯೋಗ ಪ್ರಯೋಗ ಮಾಡುವ ವಿಧಿವಿಧಾನವನ್ನು ಸಾಮೂಹಿಕವಾಗಿ ಯೋಗ ಧ್ಯಾನದ ಮೂಲಕ ಅನುಭೂತಿ ಮಾಡಿಸಿದರು. ಜಿಲ್ಲಾ ಸಂಚಾಲಕಿ ಬಿಕೆ ಪ್ರಭಾಮಣೀಜೀ ಆಶೀರ್ವಚನ ಮಾಡಿದರು.ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸಸ್ ನ ಬಿಕೆ ಆರಾಧ್ಯ, ರೈತ ಮಹಿಳೆ ಜಯಶ್ರೀ,ಸತೀಶ್,ಗೀತಾ,ಶ್ರೀನಿವಾಸ್,ವೀಣಾ, ರಮಾ,ಶಾಂಭವಿ, ಬಿಂದು,ಪುಷ್ಪ, ಇಂದುಮತಿ, ಭಾರತಿ, ನಿರ್ಮಲ,ಶಿವಕುಮಾರ್,ಮುಂತಾದವರು ಹಾಜರಿದ್ದರು.
- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group