spot_img
spot_img

ನೀರು ನೈರ್ಮಲ್ಯ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

Must Read

spot_img
- Advertisement -

ಬೆಳಗಾವಿ –  ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಚಿಕ್ಕೋಡಿ ಅನುಷ್ಠಾನ ಬೆಂಬಲ ಸಂಸ್ಥೆಯಾದ ಗ್ರಾಮೋದಯ ಬೈಲಹೊಂಗಲ, ರೂರಲ್ ಡೆವೆಲಪಮೆಂಟ ಸೊಸೖೆಟಿ ಮುರಗೋಡ ಇವರ ನೇತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಮಹಿಳಾ ಸದಸ್ಯರಿಗೆ, ವಾಟರ್ ಮ್ಯಾನಗಳಿಗೆ Field Test kit(FTK) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ, ಅಧಿಕಾರಿಗಳು ಸಹಾಯಕ ಕಾರ್ಯ ಪಾಲಕ ಅಭಿಯಂತರರು ಭಾಗವಹಿಸಿದ್ದರು

ಈ ಸಭೆಯನ್ನು ಉದ್ದೇಶಿಸಿ ತಾಲೂಕ ಸಹಾಯಕ ಕಾರ್ಯಪಾಲಕ ಮಾತನಾಡಿ, ಗ್ರಾಮಗಳಲ್ಲಿ ಕುಡಿಯುವ ನೀರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು, ನೀರು ಸಂಗ್ರಹಣಾ ತೊಟ್ಟಿಗಳನ್ನು ಪ್ರತಿ ತಿಂಗಳು ಸ್ವಚ್ಛಗೊಳಿಸಿ,ಕ್ಲೋರಿಯೇಶನ್ ಮಾಡಬೇಕೆಂದು ತಿಳಿಸಿದರು.

- Advertisement -

ನದಿ ನೀರು, ಬೋರ್ವೆಲ್ ನೀರು ಮತ್ತು ಬಾವಿಯ ನೀರನ್ನು ಕ್ಲೋರಿಯೇಶನ್ ಮಾಡಿ ಕುಡಿಯಲು ಬಳಸಬೇಕು ಎಂದು ತಿಳಿಸಿದರು

ಅದೇ ರೀತಿ , ತಾಲೂಕ ಪಂಚಾಯಿತಿ ವ್ಯವಸ್ಥಾಪಕರು ರಾಯಬಾಗ ಇವರು ಮಾತನಾಡಿ, ಎಲ್ಲಾ ಪಿಡಿಒ ಅಧಿಕಾರಿಗಳಿಗೆ ಕುಡಿಯುವ ನೀರಿನ ಮಹತ್ವ, ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಯ ಬಗ್ಗೆ ಕುರಿತು ಜಾಗೃತಿ ವಹಿಸಲು ಮತ್ತು ಜನರಿಗೆ ಕಾಯಿಸಿ ಆರಿಸಿದ ನೀರು ಕುಡಿಯುವ ಬೇಕು ಮತು ಎಲ್ಲಾ ಮೂಲಗಳನ್ನು ನೀರು ಪರೀಕ್ಷೆ ಮಾಡಬೇಕು ಮತ್ತು ವರದಿ ಸಲ್ಲಿಸಲು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ , ಸಹಾಯಕ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ಯೋಜನಾ ವ್ಯವಸ್ಥಾಪಕರು, AE, JE, ಸಿಬ್ಬಂದಿಗಳು ರಾಯಬಾಗ,ರಾಯಬಾಗ ವಿಭಾಗದ ನೀರು ಪರೀಕ್ಷಾ ಪ್ರಯೋಗಾಲಯದ ಸಿಬ್ಬಂದಿಗಳು, ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ವಾಟರ್ ಮ್ಯಾನ್ ಗಳು, ISA, ISRA ಸಿಬ್ಬಂದಿಯವರು ಉಪಸ್ಥಿತರಿದ್ದರು .

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group