ವಿದ್ಯುತ್ ಅಪಘಾತಕ್ಕೆ ಬಲಿಯಾದವನ ಕುಟುಂಬಕ್ಕೆ ಪರಿಹಾರ ನೀಡಿದ ಶಾಸಕ

Must Read

ಸಿಂದಗಿ- ಸಿಂದಗಿ ತಾಲೂಕಿನ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ಖೈನೂರ ಗ್ರಾಮದ ಶಾಂತಪ್ಪ ವಿಶ್ವನಾಥ ಗಡಗಿಮನಿ ಎಂಬುವವರು ಕರ್ತವ್ಯ ವೇಳೆಯಲ್ಲಿ ವಿದ್ಯುತ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರಿಗೆ ಶಾಸಕ ಅಶೋಕ ಮನಗೂಳಿ ಅವರು ಸರ್ಕಾರದಿಂದ ನೀಡಿರುವ ರೂ. ೫ ಲಕ್ಷ ಪರಿಹಾರದ ಚೆಕ್ ಅನ್ನು ಗುರುವಾರ ವಿತರಿಸಿದರು.

ಈ ಸಂಧರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಶಾಂತಪ್ಪ ಗಡಗಿಮನಿ ಅವರು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದು ದುರಂತ. ಅವರ ಕುಟುಂಬಸ್ಥರ ಜೊತೆ ಸದಾ ಸರ್ಕಾರವಿದೆ. ಭಯ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರಕ್ಕೆ ಈ ವರದಿಯನ್ನು ನೀಡಿದ ತಕ್ಷಣವೇ ಇದನ್ನು  ಗಂಭಿರವಾಗಿ ಪರಿಗಣಿಸಿ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಿದೆ ಎಂದರು.

ಈ ವೇಳೆ ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಶ್ರೀಕಾಂತ ಸೋಮಜ್ಯಾಳ, ಹೊನ್ನಪ್ಪಗೌಡ ಬಿರಾದಾರ, ಮೃತರ ತಂದೆ ವಿಶ್ವನಾಥ ಗಡಗಿಮನಿ, ದುಂಡಮ್ಮ ಗಡಗಿಮನಿ ಸೇರಿದಂತೆ ಇತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group