ಕನ್ನಡ ಸಂಸ್ಕೃತ ವಿದ್ವತ್ ಪರಂಪರೆಯ ಕೊಂಡಿ ಪ್ರೊ ಮಲ್ಲೇಪುರಂ 

Must Read
 ಪ್ರೊ ಮಲ್ಲೇಪುರಂ ಜಿ ವೆಂಕಟೇಶ ರವರ ಸಂಪಾದಕತ್ವದ ಚಿದಾನಂದ ಅವಧೂತರ ಜ್ಞಾನ ಸಿಂಧು  ವೇದಾಂತ ಕಾವ್ಯ ಜನಾರ್ಪಣೆ 
      ಕಲಬುರ್ಗಿಯ  ಪ್ರೊ ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬೆಂಗಳೂರಿನ ಉದಯ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಪ್ರೊ ಮಲ್ಲಪುರಂ ಜಿ ವೆಂಕಟೇಶ್ ಅವರ 73ನೇ ಹುಟ್ಟು ಹಬ್ಬದ ಅಂಗವಾಗಿ ಅವರ 101ನೇ   ಕೃತಿ ಚಿದಾನಂದ ಅವಧೂತರ ಜ್ಞಾನ ಸಿಂಧು ವೇದಾಂತ ಕಾವ್ಯವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ ವೂಡೆ ಪಿ ಕೃಷ್ಣ ಜನಾರ್ಪಣೆಗೊಳಿಸಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಂಪರೆಗೆ ವಿದ್ವತ್ಪೂರ್ಣ ಕೃತಿಗಳನ್ನ ನೀಡಿ ಸಮೃದ್ಧತೆಗೆ ಕಾರಣರಾಗಿ  ಈ ಕೃತಿ  ಕನ್ನಡ ಸಾಹಿತ್ಯ ಮತ್ತು ವೇದಾಂತ ಮಾರ್ಗಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು ಕನ್ನಡ-ಸಂಸ್ಕೃತ ವಿದ್ವತ್ ಪರಂಪರೆಯ ಕೊಂಡಿ. ಪ್ರೊ ಮಲ್ಲೇಪುರಂ ಜಿ ವೆಂಕಟೇಶ ರವರು ಮುಂದುವರಿಸಿಕೊಂಡು  ಬರುತ್ತಿರುವುದು ಕನ್ನಡಿಗರ ಪುಣ್ಯ ಎಂದು ಅಭಿಪ್ರಾಯಪಟ್ಟರು.
 ಸಮಾರಂಭದಲ್ಲಿ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೊಡ ಮಾಡುವ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಯನ್ನು ಕೆ.ಆರ್ ಪುರಂ ಸಿಲಿಕಾನ್ ಸಿಟಿ ಕಾಲೇಜಿನ ಸಹ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ಎಚ್.ಎಸ್ ಗೋವರ್ಧನ್ ಮತ್ತು ದಿ ಬಸಲಿಂಗಪ್ಪ ಮಲ್ಕಪ್ಪ ಕಟ್ಟಿ ಸ್ಮರಣಾರ್ಥ ಪುಸ್ತಕ ಬಹುಮಾನವನ್ನು ವರ್ತೂರು ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ ಚಂದ್ರಪ್ಪ ರವರಿಗೆ ನೀಡಿ ಗೌರವಿಸಲಾಯಿತು.
 ಸಿದ್ಧಾರೂಢ ಆಶ್ರಮದ ಟ್ರಸ್ಟಿ ಶಾಮಾನಂದ ಪೂಜೆರಿ ರವರು ಪುಸ್ತಕ ಪರಿಚಯ ಮಾಡಿಕೊಟ್ಟರು.
 ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ  ಪ್ರಕಾಶ್ ಕಂಬತ್ತಳ್ಳಿ ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಡಾ ಹೆಚ್ ಟಿ ಪೋತೆ ಅಧ್ಯಕ್ಷ ಡಾ. ಶ್ರೀಶೈಲ ನಾಗರಾಳ,, ಕಾರ್ಯದರ್ಶಿ ಡಾ ಎಂ ಬಿ ಕಟ್ಟಿ, ಪ್ರಕಾಶಕಿ ಶ್ರೀಮತಿ ಶೈಲಜಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
Latest News

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು...

More Articles Like This

error: Content is protected !!
Join WhatsApp Group