spot_img
spot_img

ಜನಸಂಖ್ಯೆ ಬೆಳವಣಿಗೆಯಿಂದ ಜೈವಿಕ ಪರಿಸರ ಕುಸಿತ – ಇಂದುಮತಿ –

Must Read

- Advertisement -

ಸಿಂದಗಿ- ಅತಿಯಾದ ಅನುಭೋಗದ ಒತ್ತಡ ಮತ್ತು ಜನಸಂಖ್ಯೆ ಬೆಳವಣಿಗೆ ಕಾರಣದಿಂದ ಜೈವಿಕ ಪರಿಸರ ಕುಸಿಯುತ್ತಿದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.

ತಾಲೂಕಿನ ಗಣಿಹಾರದ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯನಿಮಿತ್ತ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿ, ಕೈಗಾರಿಕಾ ಪ್ರಕ್ರಿಯೆ ಸೇರಿದಂತೆ ಎಲ್ಲ ರೀತಿಯ ಮಾನವನ ಚಟುವಟಿಕೆಯಿಂದ ಪರಿಸರದ ಸಮತೋಲನ ಹಾಳಾಗುತ್ತಿದೆ. ಇದರಿಂದ ಪರಿಸರ ವಿನಾಶದ ಅಂಚಿಗೆ ಸೇರುತ್ತಿದೆ. ಪ್ರಜ್ಞಾವಂತರಾದ ನಾವೆಲ್ಲ ಪರಿಸರದ ವಿಘಟನೆಗೆ ಕಾರಣವಾಗುವ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಿ ಪರಿಸರದ ಬೆಳವಣಿಗೆಗೆ ನಾವೆಲ್ಲ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಗುಜರಾತನ ಬರೋಡಾದ ಕೆಪಿಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಭಾರತಿ ಸಾಲಿಮಠ ಮಾತನಾಡಿ, ದಶಕದಿಂದ ಇತ್ತೀಚೆಗೆ ಹುಟ್ಟಿಕೊಂಡಿರುವ ಪರಿಸರ ಸಂರಕ್ಷಣಾ ಸಂಘಟನೆಗಳು ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಹಸನಾಗುತ್ತದೆ. ಪರಿಸರದ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

- Advertisement -

ಸಿಂದಗಿ ವಲಯ ಅರಣ್ಯವಲಯಾಧಿಕಾರಿ ರಾಜೀವ ಬಿರಾದಾರ ಮಾತನಾಡಿ, ಪರಿಸರ ಮಾಲಿನ್ಯವನ್ನು ಪ್ರಸ್ತುತ ದಿನಮಾನ ಎದುರಿಸುತ್ತಿರುವುದು ಅತ್ಯಂತ ಕಷ್ಟಕರವಾಗಿದೆ. ಕೈಗಾರಿಕೀಕರಣ ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿ ಪರಿಸರದ ಸಂಪನ್ಮೂಲಗಳ ಮೇಲೆ ಹಾನಿಯುಂಟು ಮಾಡುತ್ತಿವೆ. ಅದರ ಮೇಲಿನ ಪರಿಣಾಮವನ್ನು ತಗ್ಗಿಸಲು ಸಕಾರಾತ್ಮಕ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಮ್.ಮೇತ್ರಿ, ಶಕುಂತಲಾ ಹಿರೇಮಠ, ಎಸ್‍ಡಿಎಮ್‍ಸಿ ಅಧ್ಯಕ್ಷ ಸುಧಾ ಪಾಟೀಲ, ಸಿಆರ್‍ಪಿ ಪಿ.ಆರ್.ಓಲೇಕಾರ, ಅರಣ್ಯ ಇಲಾಖೆಯ ಮಿಟೇಸಾಬ ಮುಲ್ಲಾ, ವಿರೇಶ, ಶಿವಾನಂದ ಮಂಡಗೋಡ, ಎಸ್‍ಡಿಎಮ್‍ಸಿ ಉಪಾಧ್ಯಕ್ಷ ರಮೇಶ ಕೋರಿ, ಸದಸ್ಯರಾದ ಶರಣು ಆನಗೊಂಡ, ದಾದಾಪೀರ ಅಂಗಡಿ, ಸಿದ್ದು ಕ್ಷತ್ರಿ, ಸಂಗಣ್ಣ ಕುಂಬಾರ, ಗುರುನಾಥ ಸುಣಗಾರ, ಶಿವು ಹೆಡಗಿ, ಶಾಲಾ ಶಿಕ್ಷಕರಾದ ಎ.ಎಮ್.ಅರಬ್, ಎ.ಎಚ್.ದೇವರಮನಿ, ಆರ್.ಜಿ.ಬಿರಾದಾರ, ಎಸ್.ಎಸ್.ಬಿರಾದಾರ, ಡಿ.ಎಮ್.ಮಾವೂರ, ವ್ಹಿ.ಎ.ಅಗಸರ, ಸಿ.ಎಸ್.ಬಮ್ಮಣ್ಣಿ, ಎಸ್.ಬಿ.ಬಿರಾದಾರ, ಎಮ್.ಡಿ. ಕೆರ್ಕಿ, ಎಮ್.ಎಲ್.ಟೇಲರ್, ಎಸ್.ಜಿ.ನಾಟಿಕಾರ, ಆರ್.ಸಿ.ಗಬ್ಬೂರ, ಪುಷ್ಪಾ ಸಂಕನಾಳ, ಸುಷ್ಮಾ, ಆರ್.ಎಸ್.ಪಟ್ಟಣಶೆಟ್ಟಿ, ಪ್ರಕಾಶ, ಕೆ.ಎಸ್.ತೊರವಿ, ಪಿ.ಎಸ್.ಅಗ್ನಿ, ಸಾಹೇಬ ಪಟೇಲ, ಎಸ್.ಸಿ.ಬಿರಾದಾರ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group