spot_img
spot_img

ಜೂನ್ 9 ರಿಂದ 11 ರವರೆಗೆ ಶ್ರೀ ಭೂವರಾಹ ಕ್ಷೇತ್ರದ ನಾಲ್ಕನೇ ವಾರ್ಷಿಕೋತ್ಸವ 

Must Read

spot_img
 ಬೆಂಗಳೂರು ಕನಕಪುರ ರಸ್ತೆಯ ತಾತಗುಣಿ ಅಗರ ಗ್ರಾಮದ ಶ್ರೀ ಭೂವರಾಹ ಕ್ಷೇತ್ರ ಸ್ಥಾಪನೆಯಾಗಿ ಮೂರು ವರ್ಷ ಗಳಾಗಿರುತ್ತದೆ. ನಾಲ್ಕನೇ ವಾರ್ಷಿಕೋತ್ಸವದ ನಿಮಿತ್ತ ಜೂನ್ 9 ರಿಂದ 11ರವರೆಗೆ ಹಲವು ಧಾರ್ಮಿಕ ಕೈಂಕರ್ಯ ಗಳನ್ನು ಹಮ್ಮಿಕೊಳ್ಳಲಾಗಿದೆ.
 ಭಾನುವಾರ ಜೂನ್ 9ರಂದು ವಿಶೇಷ ಮಧು ಅಭಿಷೇಕ,ಶ್ರೀ ಹರಿವಾಯು ಸ್ತುತಿ ಹೋಮ. ಗುರುಪಾದುಕಾ ಪೂಜಾ, ಪ್ರಹ್ಲಾದ ರಾಜರ ರಥೋತ್ಸವ, ಭಜನೆ.
 ಸೋಮವಾರ ಜೂನ್ ಹತ್ತರಂದು ಶ್ರೀ ಸ್ವಪ್ನ ವೃoದಾವನಾಖ್ಯಾನ ಮಂತ್ರ ಹೋಮ.
ಮಂಗಳವಾರ ಜೂನ್ 11ರಂದು ಪುರುಷ ಸೂಕ್ತ ಹೋಮ, ಭುವನಗಿರಿ ಆಶ್ರಮದ ಪೂಜ್ಯಶ್ರೀ ಸುವಿದ್ಯೇಂದ್ರ  ತೀರ್ಥ ಶ್ರೀಪಾದರಿಂದ ಕಲಶಾಭಿಷೇಕ ,ಸಂಸ್ಥಾನ ಪೂಜೆ,ಮುದ್ರಾಧಾರಣೆ ,ಆಶೀರ್ವಚನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿರುತ್ತಾರೆ.
 ಅಗರ ಗ್ರಾಮ ಪಂಚಾಯಿತಿ ಎದುರಿನ ರಸ್ತೆಯಲ್ಲಿರುವ ಪ್ರಶಾಂತ ವಾತಾವರಣದ ಶ್ರೀಮಠದಲ್ಲಿ ಭೂವರಾಹ ದೇವರು,  ಪ್ರಾಣದೇವರು , ಕಲಿಯುಗ ಕಾಮಧೇನು ಕಲ್ಪವೃಕ್ಷರೆನಿಸಿದ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನ ಇರುವ ಅಪೂರ್ವ ತಾಣ ಇದಾಗಿದೆ. ಭೂವರಾಹ ದೇವರಿಗೆ ಪ್ರಿಯ ಪ್ರಿಯವೆನಿಸಿದ  ರೇವತಿ ನಕ್ಷತ್ರದಂದು ಕ್ಷೀರಾಭಿಷೇಕ ಮಾಡಿಸಿದರೆ  ಭೂಸಂಬಂಧಿತ ಕೋರಿಕೆಗಳು ಶೀಘ್ರ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ . ಭೂವರಾಹ ಕ್ಷೇತ್ರದಲ್ಲಿ ನಿತ್ಯ ಅನ್ನ ಸಂತರ್ಪಣೆಗಾಗಿ ತುಲಾಭಾರ ಕಾರ್ಯಕ್ರಮದಲ್ಲಿ ಯಥಾಶಕ್ತಿ ದವಸ ಧಾನ್ಯ ಸಮರ್ಪಿಸಲು ಮತ್ತು ಗೋದಾನ – ಗೋಗ್ರಾಸಗಳಿಗೂ ಅವಕಾಶವಿದೆ.ವಿವರಗಳಿಗೆ 9886767780/9483704996 ಸಂಪರ್ಕಿಸಬಹುದು
- Advertisement -
- Advertisement -

Latest News

ಜೀವನದಲ್ಲಿ ಶಿಕ್ಷಣದಂತೆ ಸಂಸ್ಕಾರ ಕೂಡಾ ಅಷ್ಟೇ ಅವಶ್ಯಕವಾಗಿದೆ -ಮುಕುಂದ ಮಹಾರಾಜರು

ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು. ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group