ಮೂಡಲಗಿ:- ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಬಾಲಕರ ಶಾಲೆಯಲ್ಲಿ ‘ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ ಹಾಗೂ ನಿವೃತ್ತ ಶಿಕ್ಷಕ ಜಿ.ಎಸ್.ಜಂಬಗಿ ಗುರುಗಳ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಶತಮಾನ ದಾಟಿದ ಸರ್ಕಾರಿ ಕನ್ನಡ ಮಾದರಿ ಬಾಲಕರ ಶಾಲೆ, ಮೂಡಲಗಿಯಲ್ಲಿ 1994-95 ನೆಯ ಸಾಲಿನ ವಿದ್ಯಾರ್ಥಿಗಳಿಂದ “ಸ್ಮಾರ್ಟ್ ಕ್ಲಾಸ್” ಕಲಿಕಾ ಕೊಠಡಿಗೆ ಒಂದು ಲಕ್ಷ ಧನ ಸಹಾಯ ನೀಡಲಾಯಿತು
ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಪ್ರತಿ ವರ್ಷ ಇಳಿಮುಖವಾಗುತ್ತಿರುವುದು ಇಂಥದ್ದರಲ್ಲಿ ನಮ್ಮ ಶಾಲೆ ನಮ್ಮ ಹೆಮ್ಮೆ ಅಂತ ಅಭಿಮಾನಕಾಗಿ 1994-95ರ ಅವಧಿಯಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಶಾಲಾ ಕೋಣೆಗಳಿಗೆ ಬಣ್ಣ ಹಾಗೂ ಸ್ಮಾರ್ಟ್ ಕ್ಲಾಸಿಗೆ 65 ಇಂಚಿನ ಟಿ ವಿ ಅಳವಡಿಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಮಾರ್ಟ್ ಕ್ಲಾಸ್ ಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
94-95 ಸಾಲಿನ ವಿದ್ಯಾರ್ಥಿಗಳಾದ ಈಶ್ವರ ಕಂಬಾರ, ಲಕ್ಷ್ಮಣ ಪಿರೋಜಿ, ಬಸವರಾಜ ಇಟನಾಳ, ಈರಪ್ಪ ಶೆಟ್ಟರ, ಸುರೇಶ ಹಂದಿಗುಂದ, ಚಂದ್ರಶೇಖರ ಕೋಮಟೆ, ಧನಂಜಯ ಕುಲಕರ್ಣಿ, ರವಿ ಕಂಕಣವಾಡಿ, ರಾಜು ನಿಡಗುಂದಿ, ಕರಿಮಸಾಬ ಕಳಾವಂತ, ವಿಠ್ಠಲ ಗುಡ್ಲಮನಿ, ಆನಂದ ಸಾನವಾಲೆ, ಮಾನಿಂಗಯ್ಯ ಹಿರೇಮಠ, ಸೋಮಶೇಖರ ಶೆಟ್ಟಿ, ವಿಜಯ ಮಾನೆ, ಈರಣ್ಣ ಜಕಾತಿ, ಕಲ್ಲಯ್ಯ ಹಿರೇಮಠ, ಮಡಿವಾಳಯ್ಯ ಗುಡಿ, ಸುನೀಲ ಮೇಣಶಿ, ಶ್ರೀಶೈಲ ಬಾಗೋಜಿ, ರೇವಪ್ಪ ಬಡಿಗೇರ ಭಾಗವಹಿಸಿದ್ದರು.
ಸುರೇಶ ಕೋಪರ್ಡೆ ಶಿಕ್ಷಕರು ಸ್ವಾಗತಿಸಿದರು ಮತ್ತು ಸಿ ಆರ್ ಪಿ ಸಮೀರ ದಬಾಡಿ ನಿರೂಪಿಸಿ ವಂದಿಸಿದರು.
ಆರ್.ವಿ.ಯರಗಟ್ಟಿ, ಬಿ.ಎಸ್.ಸತೀಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಿನಾಧ್ಯಕ್ಷರಾದ ಎಲ್.ಎಮ್.ಬಡಕಲ್, ಉಪಾಧ್ಯಕ್ಷ ರಾದ ಬಿ.ಎ.ಡಾಂಗೆ, ಕಾರ್ಯದರ್ಶಿ ಎಡ್ವಿನ್ ಪರಸನ್ನವರ, ಮಹಾಂತೇಶ ಸಣ್ಣಕ್ಕಿ, ಕಸಾಪ ಮೂಡಲಗಿ ತಾಲೂಕಾಧ್ಯಕ್ಷರಾದ ಡಾ. ಸಂಜಯ ಶಿಂಧಿಹಟ್ಟಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಬಿಚ್ಚು ಝಂಡೇಕುರಬರ ಇನ್ನೂ ಅನೇಕ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ‘ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ ಹಾಗೂ ‘ಜಿ.ಎಸ್.ಜಂಬಗಿ’ ಗುರುಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.