- Advertisement -
ಬೀದರ – ಭಾರೀ ಮಳೆ ಗಾಳಿಯ ಜೊತೆಗೆ ಸಿಡಿಲು ಬಡಿದು ಒಂದೇ ಕಡೆ ಇದ್ದ ಬರೋಬ್ಬರಿ 31 ಕುರಿಗಳು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟಿಗ್ಯಾಳ ಗ್ರಾಮದಲ್ಲಿ ನಡೆದಿದೆ.
ಸಂತೋಷ ಕಾಶಿನಾಥ್ ಎಂಬುವವರಿಗೆ ಸೇರಿದ ಕುರಿಗಳು. ಜಮೀನಿನಲ್ಲಿ ಒಂದೇ ಕಡೆ ಕುರಿಗಳನ್ನು ತಂಗಿಸಿದ್ದ ವೇಳೆ ಘಟನೆ ನಡೆದಿದೆ. ಸುಮಾರು 5 ರಿಂದ 6 ಲಕ್ಷ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿಗಳನ್ನು ಕಳೆದುಕೊಂಡು ರೈತ ಸಂತೋಷ ಕಾಶಿನಾಥ್ ಕಂಗಾಲಾಗಿದ್ದಾನೆ.