ಧನ್ವಂತರಿ ಸ್ಕ್ಯಾನಿಂಗ್ ಕೇಂದ್ರದ ಉದ್ಘಾಟನೆ
ಮೂಡಲಗಿ: ‘ಮೂಡಲಗಿಯಲ್ಲಿ ಧನ್ವಂತರಿ ಸ್ಕ್ಯಾನಿಂಗ್ ಕೇಂದ್ರವನ್ನು ಪ್ರಾರಂಭಿಸಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಆಗಿದ್ದು ಸ್ತುತ್ಯರ್ಹವಾಗಿದೆ” ಎಂದು ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು.
ಇಲ್ಲಿಯ ಕಾಲೇಜು ರಸ್ತೆಯಲ್ಲಿ ಪೂಜೇರಿ ಕಟ್ಟಡದಲ್ಲಿ ನೂತನ ಧನ್ವಂತರಿ ಸ್ಕ್ಯಾನಿಂಗ್ ಸೆಂಟರ ನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದಿದ್ದು, ರೋಗಗಳನ್ನು ಗುರುತಿಸಲು ಹೊಸ ಆವಿಷ್ಕಾರಗೊಂಡಿರುವ ವ್ಯವಸ್ಥೆಯು ಇಂದು ಅನಿವಾರ್ಯವಾಗಿದೆ ಎಂದರು.
ಪ್ರತಿ ವ್ಯಕ್ತಿಯು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾಯಲೆಗಳಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯನ್ನು ಪಡೆದುಕೊಂಡು ಗುಣಮುಖವಾಗುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬೇಕು, ಆರೋಗ್ಯಕ್ಕೆ ಮಹತ್ವ ಕೊಡಬೇಕು ಎಂದರು.
ಡಾ. ಎಸ್.ಎಸ್. ಪಾಟೀಲ ಮಾತನಾಡಿ, ಧನ್ವಂತರಿ ಸ್ಕ್ಯಾನಿಂಗ್ ಕೇಂದ್ರದಲ್ಲಿ ಗರ್ಭಣಿ ಸ್ತ್ರೀಯರ ತಪಾಸಣೆ, ಎಎನ್‍ಸಿ, ಅನಾಮೊಲಿ, 2ಡಿ, 3ಡಿ ಮತ್ತು ಇಕೋ, ಉದರ ದರ್ಶಕ ಸ್ಕ್ಯಾನಿಂಗ್, ಕಲರ್ ಡಾಪಲರ ಸ್ಕ್ಯಾನಿಂಗ್ ಸೌಲಭ್ಯ ಇರುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅವರನ್ನು ಕೇಂದ್ರದ ವೈದ್ಯರು ಸನ್ಮಾನಿಸಿ ಗೌರವಿಸಿದರು.
ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಆರ್.ಪಿ. ಸೋನವಾಲಕರ, ಬಿ.ಜಿ. ಗಡಾದ, ಗೋಕಾಕ ಲಯನ್ಸ್ ಅಧ್ಯಕ್ಷ ಡಾ. ಅಶೋಕ ಪಾಟೀಲ, ಎಸ್.ಆರ್. ಸೋನವಾಲಕರ, ಸಂತೋಷ ಸೋನವಾಲಕರ, ವೆಂಕಟೇಶ ಸೋನವಾಲಕರ, ರಾಮಣ್ಣ ಹಂದಿಗುಂದ, ಭೀಮಶಿ ಮಗದುಮ್, ಹಣಮಂತ ಗುಡ್ಲಮನಿ, ಸಿದ್ದು ಕೊಟಗಿ, ಪ್ರಶಾಂತ ನಿಡಗುಂದಿ, ಹುಸೇನ ಶೇಖ್, ಈರಪ್ಪ ಬನ್ನೂರ, ಡಾ. ಅನೀಲ ಪಾಟೀಲ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಮಂಗಳಾ ಸನದಿ, ಡಾ. ಯಲ್ಲಾಲಿಂಗ ಮುಳವಾಡ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಪ್ರಕಾಶ ನೇಸೂರ, ಡಾ. ಲಕ್ಷ್ಮಣ ಕಂಕಣವಾಡಿ, ಡಾ. ರವಿ ಕಂಕಣವಾಡಿ, ಡಾ. ವಿಶಾಲ ಪಾಟೀಲ, ಡಾ. ಚೇತನ ಹೊಸೂರ ಮತ್ತಿತರರು ಇದ್ದರು.