ಕವನ

0
276

ಬೇಕಿಲ್ಲ ಸಮತೆ ಕ್ರಾಂತಿ

ಎಂದೂ ಸೋಲದ
ಆರ್ಯ ಪುರುಷ
ವೀರ ಶೂರ ಕ್ಷತ್ರಿಯ
ಶ್ರೀ ರಾಮಚಂದ್ರ ಮೊನ್ನೆ
ಆಯೋಧ್ಯೆಯಲ್ಲಿಯೇ
ಸೋತು ಬಿಟ್ಟ
ಅವನೊಬ್ಬ ಮಹಾಪುರುಷ
ಮನುಷ್ಯ ನಿರ್ಮಿತ
ಜಾತಿ ಮತ ಧರ್ಮಗಳ
ಸೀಮೆ ದಾಟಿದ ಯೋಧ
ಶ್ರೀರಾಮನ ಶಾಪವೊ
ಕೋಪವೊ ಗೊತ್ತಿಲ್ಲ
ಇವರೂ ಸೋತು ಬಿಟ್ಟರು
ಈಗ ಪುರಿಯಲ್ಲಿ
ಜಗನ್ನಾಥನ ಸರದಿ
ಪಾಪ ಅವನಿಗೂ
ಭಯ ಭೀತಿ
ಅವರು ಇಲ್ಲಿ ಗೆದ್ದಿದ್ದಾರೆ
ಬುದ್ಧ ಬಸವ ಬಾಪು
ಅಂಬೇಡ್ಕರ ಎಂದೋ
ಸೋತು ಬಿಟ್ಟರು
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಇದು ಭಾಷಣ ಲೇಖನ
ಗೋಡೆಯ ಮಾತು
ಬದಲಾಗುವದಿಲ್ಲ ಭಾರತ
ಬೇಕಿಲ್ಲ ಸಮತೆ ಕ್ರಾಂತಿ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ