ಸಂಚನಾಗೆ ಗುರ್ಲಾಪೂರದಲ್ಲಿ ಸತ್ಕಾರ

Must Read

ಗುರ್ಲಾಪೂರ –  ಗ್ರಾಮದ ಶ್ರೀ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ ಕುಮಾರಿ ಸಂಚನಾಗೆ ಸಂಘದ ಅದ್ಯಕ್ಷರಾದ ರಾಮಪ್ಪ ನೇಮಗೌಡರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ಸತ್ಕಾರ ಮಾಡಲಾಯಿತು.

ಕಳೆದ ಸಾಲಿನ ಅಂದರೆ.2023-2024 ನೇ ಸಾಲಿನಲ್ಲಿ ಗ್ರಾಮದ ವಿದ್ಯಾರ್ಥಿನಿಯಾದ ಕುಮಾರಿ ಸಂಚನಾ ಸು ಶಿವಾಪೂರ ಇವಳು 10 ನೇ ತರಗತಿಯಲ್ಲಿ ಕರ್ನಾಟಕ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಮೂಡಲಗಿ ವಲಯಕ್ಕೆ ದ್ವಿತೀಯ ಸ್ಥಾನ ಪಡೆದು ತಾನು ಕಲಿತ ಚೈತನ್ಯ ಆಶ್ರಮ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ ನಾಗನೂರ-ಮೂಡಲಗಿ ಹಾಗೂ ಗುರ್ಲಾಪೂರ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

625ಕ್ಕೆ 618 ಅಂಕ ಪಡೆದ ಕುಮಾರಿಗೆ ಸತ್ಕಾರ ಮಾಡಿ ರಾಮಪ್ಪ ನೇಮಗೌಡರ ಇವರು, ಇಂತ ಪ್ರತಿಭೆಗಳು ಹೆಚ್ಚಾಗಲಿ ಮುಂದಿನ ಮಕ್ಕಳಿಗೆ ಈ ಕುಮಾರಿ ಮಾಡಿದ ಸಾಧನೆ ಗುರಿಯಾಗಿ ಇಟ್ಟುಕೊಳ್ಳಲಿ ಎಂದರು

ಆರಂಭದಲ್ಲಿ ಸಂಘದ ಕಾರ್ಯದರ್ಶಿಯಾದ ಆನಂದ ಶಿವಾಪೂರ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಕುಮಾರಿಗೆ ಅಭಿನಂದನಗೆಳು ತಿಳಿಸುತ್ತಾ ಸರ್ವರನ್ನು ಸ್ವಾಗತಿಸಿದರು.

ಸತ್ಕಾರ ಸ್ವಿಕರಿಸಿದ ಕುಮಾರಿ ನನ್ನನ್ನು ಗುರುತಿಸಿ ಕರೆದು ಸತ್ಕಾರ ಮಾಡಿದ ಸಂಘದ ಅಧ್ಯಕ್ಷರಿಗೆ ಹಾಗೂ ಉಪಾದ್ಯಕ್ಷರು ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ನಾನು ತುಂಬುಹ್ರದಯದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿ,  ಸಂಘವು ಅಭಿವ್ರದ್ದಿ ಪಥದತ್ತ ಸಾಗಿ ನಮ್ಮಂಥವರಿಗೆ ದಾರಿದೀಪವಾಗಲಿ ಎಂದಳು

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಾದೇವ ರಂಗಾಪೂರ ನಿರ್ದೇಶಕರಾದ ಬಸಪ್ಪ ಗಾಣಿಗೇರ ಲಗಮಪ್ಪ ಹಳ್ಳೂರ ಸಿದ್ದಪ್ಪ ಸುಳ್ಳನವರ ವಿಠ್ಠಲ ಜಾದವ ರೇವಪ್ಪ ಸತ್ತಿಗೇರಿ ಶ್ರೀಶೈಲ ನೇಮಗೌಡರ ಹಣಮಂತ ಬಂಡಿವಡ್ಡರ ಅಶೋಕ ಗಾಣಿಗೇರ ಹಾಗು ಶೇಖರಯ್ಯಾ ಹಿರೇಮಠ ಜಯಪ್ರಕಾಶ ಗಾಣಿಗೇರ ಕುಮಾರಿಯ ತಂದೆ ಸುಭಾಸ ಶಿವಾಪೂರ ಮತ್ತು ಆದಿನಾಥ ತರಗಾರ ಧರೆಪ್ಪ ಮಿರ್ಜಿ ಸಚೀನ ಮೇಳನ್ನವರ ಹಾಗು ಸದಸ್ಯರು ಉಪಸ್ಥತರಿದ್ದರು. ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಬಸಯ್ಯಾ ಹಿರೇಮಠ ನೆರವೇರಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group