spot_img
spot_img

ಶಾಲಾ ಮಗುವಿನ ಮೇಲೆ ಹಲ್ಲೆ ಪ್ರಕರಣ ; ಶಾಲೆಗೆ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ

Must Read

spot_img
- Advertisement -

ಮೂಡಲಗಿ – ತಾಲೂಕಿನ ನಾಗನೂರ ಗ್ರಾಮದ ವಿದ್ಯಾಚೇತನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಿಂದ ಅಮಾನವೀಯ ವಾಗಿ ಥಳಿಸಲ್ಪಟ್ಟಿದ್ದ ಒಂದನೇ ತರಗತಿಯ ವಿದ್ಯಾರ್ಥಿ ಆರೋಗ್ಯ ವಿಚಾರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿಯವರು ಆಸ್ಪತ್ರೆಗೆ ಭೇಟಿ ಮಾಡಿ ಮಾಹಿತಿ ಪಡೆದು ಸಮಾಧಾನ ಹೇಳಿದರು.
ನಂತರ ವಿದ್ಯಾಚೇತನ ಶಾಲೆಗೂ ಭೇಟಿ ಕೊಟ್ಟ ಅವರು, ಶಾಲಾ ಮಕ್ಕಳಿಗೆ ಧೈರ್ಯ ಹೇಳಿದರು.

ಬಿಇಓ ಅವರ ಜೊತೆಗೆ ಅರಭಾವಿ ಶಾಸಕರ ಆಪ್ತ ಲಕ್ಕಪ್ಪ ಲೋಕೂರಿ ಇದ್ದರು

ಮಕ್ಕಳು ತುಂಟಾಟ ಮಾಡುವುದು ಸಹಜವಾದದ್ದು ಇಂಥದರಲ್ಲಿ ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ತಾಳ್ಮೆ ಕಳೆದುಕೊಳ್ಳದೇ ಇರುವುದು ತುಂಬಾ ಅಗತ್ಯ. ಆದರೆ ಪ್ರಸಕ್ತ ವಿದ್ಯಾಚೇತನ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದಪ್ಪ ಹಳಿಂಗಳಿ ಅಮಾನವೀಯವಾಗಿ ಮಗುವಿನ ಮೇಲೆ ಹಲ್ಲೆ ಮಾಡಿದ ಪ್ರಕರಣ ಜರುಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳಿಂದ ಎಚ್ಚತ್ತುಕೊಂಡ ಶಿಕ್ಷಣ ಇಲಾಖೆ ಶಾಲೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿ ಶಾಲಾ ಮಕ್ಕಳಿಗೆ ಧೈರ್ಯ ಹೇಳಿತ್ತು.

- Advertisement -

ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ವಿಚಾರಣೆ ಮಾಡುವ ಅಗತ್ಯವಿದ್ದು ಮುಂದೆ ಇದೇ ರೀತಿಯ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಪ್ರಸಕ್ತ ಒಬ್ಬ ಮಗುವಿನ ಮೇಲೆ ನಡೆದ ಹಲ್ಲೆ ಇತರೆ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರಬಹುದಾಗಿದ್ದು ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ಹೇಳಿದ್ದು ಸೂಕ್ತವಾಗಿದೆ. ಈ ಒಂದು ಪ್ರಕರಣದಿಂದ ಇಡೀ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಯ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಪಾಲಕರು, ಸಾರ್ವಜನಿಕರ ಅಭಿಪ್ರಾಯವಾಗಿದೆ

- Advertisement -
- Advertisement -

Latest News

ಸಿಂದಗಿಯಲ್ಲಿ ಅಗ್ನಿ ಅವಘಡ

ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ.   ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್  ಸೇರಿದಂತೆ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group