spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಹಡಪದ ಲಿಂಗಮ್ಮ

ಹಡಪದ ಲಿಂಗಮ್ಮ ,ಬಸವಣ್ಣನ ಆಪ್ತ ಕಾರ್ಯದರ್ಶಿ ಅಪ್ಪಣ್ಣನ ಪತ್ನಿ. ಆಕೆಯ ಸಿಕ್ಕ ವಚನಗಳು ನೂರಾ ಹದಿನಾಲ್ಕು.ವಚನಗಳ ಅಂಕಿತನಾಮ- *ಅಪ್ಪಣ್ಣಪ್ರಿಯ ಚೆನ್ನ ಬಸವಣ್ಣ .* ಆಕೆಯ ಕಾಯಕ- ಮಹಾಮನೆಯಲ್ಲಿ ತಾಂಬೂಲ ಕೊಡುವ ಕಾಯಕವಾಗಿತ್ತು.

ಹಡಪದ ಎಂದರೆ , ಚರ್ಮ ಹದ ಮಾಡಿ ತಯಾರಿಸುವ ಬಟ್ಟೆಯ ಚೀಲವನ್ನು ಮಾಡುವವರು ಎಂಬ ಅರ್ಥವನ್ನು ಕೊಡುತ್ತದೆ. ಕ್ಷೌರಿಕ ಕಾಯಕ ಮಾಡುವವರಿಗೂ ಹಡಪದರು ಅನ್ನುತ್ತಾರೆ. ಆದರೆ ಇಲ್ಲಿ ಅಡಿಕೆ ,ಎಲೆ ,ಸಂಚಿ ಚೀಲ ಎಂದೂ ಅರ್ಥ ಕೋಡುತ್ತದೆ. ಆಕೆಯ ಕಾಯಕ ಮಹಾಮನೆಯಲ್ಲಿ ತಾಂಬೂಲ ಕೊಡುವ ಕಾಯಕವಾಗಿತ್ತು.
ಆಕೆಯ ಬಗ್ಗೆ ವಚನಗಳಿಂದ ಆಕೆಯ ಅನುಭಾವ, ವೈಚಾರಿಕ ಪ್ರಜ್ಞೆ ತಿಳಿವುದಲ್ಲದೆ.ಪೂರ್ವಾಪರ ತಿಳಿದಿಲ್ಲ.
ಗುರುರಾಜ ಚಾರಿತ್ರದಲ್ಲಿ ಬರುವ, ಚಾರ ಗುರು ಲಿಂಗಮ್ಮ ಎಂಬ ಹೇಳಿಕೆ ಬಿಟ್ಟರೆ, ಮತ್ಯಾವ ಕಾವ್ಯದಲ್ಲೂ ಆಕೆಯ ಬಗ್ಗೆ ಉಲ್ಲೇಖವಿಲ್ಲ.

- Advertisement -

ಸ್ವರಚಿತ ಹದಿನೈದು ವಚನಗಳಿಂದ ಆಕೆಯ ಗುರು ಚೆನ್ನಮಲ್ಲೇಶ ಎಂದು ತಿಳಿದು ಬರುತ್ತದೆ.
ಹಡಪದಅಪ್ಪಣ್ಣನೇ ಎನ್ನ ಕರಸ್ಥಲಕ್ಕೆ ಬಂದು          ಲಿಂಗವಾಗಿ ನೆಲೆಗೊಂಡನು.
ಚೆನ್ನಮಲ್ಲೇಶನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಮೂರ್ತಿಗೊಂಡನು ಎಂದು ತನ್ನ ಗುರುಭಕ್ತಿ ಪ್ರಕಟಿಸಿದ್ದಾಳೆ.

ಆಕೆಯ,ನೂರಾ ಹದಿನಾಲ್ಕು ವಚನಗಳ ಜೊತೆ ,ಒಂದು ಮಂತ್ರ ಗೋಪ್ಯ,ಒಂದು ಸ್ವರವಚನ ಸಿಕ್ಕಿವೆ.
ಆಕೆಯ ವಚನಗಳಲ್ಲಿ ತತ್ವ ಬೋಧನೆಗಳೇ ಕಾಣಸಿಗುವುದರಿಂದ ಲಿಂಗಮ್ಮ ತನ್ನ ಕುಲಸೂತಕವನ್ನು ಶರಣರ ಸಂಗದಿಂದ ಕಳೆದುಕೊಂಡೆ ಎಂದು ಪ್ರಾಮಾಣಿಕವಾಗಿ ಹೇಳುತ್ತಾಳೆ
ಸಾಮಾನ್ಯದಿಂದ, ಶರಣರ ಸಂಗದಿಂದ ಅಸಾಮಾನ್ಯ ಳಾದ ಪರಿ, ಯೋಗ ಲಿಂಗಮ್ಮನ ವಚನಗಳಲ್ಲಿ ಕಂಡು ಬರುತ್ತವೆ. ಸರ್ವಕ್ಕೂ ಕಾರಣ ಮನಸ್ಸಿನ ಬಗ್ಗೆ ಲಿಂಗಮ್ಮನಿಗೆ ಹೆಚ್ಚಿನ ಕಾಳಜಿ. ಅದರ ನಿಯಂತ್ರಣ ಶರಣರ ಸಂಗದಿಂದ ಮಾತ್ರ ಸಾಧ್ಯ .ಎಂದು ಹೇಳುತ್ತಾಳೆ.

ಕನಿಷ್ಠದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ.
ಸತ್ಯಶರಣರ ಪಾದವಿಡಿದೆ
ಶರಣರ ಪಾದವಿಡಿದು ಗುರುವ ಕಂಡೆ ಲಿಂಗವ ಕಂಡೆ.
ಜಂಗಮರ ಕಂಡೆ ಪಾದೋದಕ ಕಂಡೆ ಪ್ರಸಾದ ಕಂಡೆ.
ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು,
ಕತ್ತಲೆ ಹರಿಯಲೊಡನೆ
ಮಂಗಳದ ಮಹಾಬೆಳಗಿನೊಳಗೋಲಾಡಿ ,
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
ಈ ವಚನ ಆಕೆಯ ಸಾದನೆ ತಿಳಿಸುತ್ತದೆ.

- Advertisement -

ಶರಣೆ ಲಿಂಗಮ್ಮನ ವಚನಗಳು ಬಾಷೆ ತತ್ವ ಉಪದೇಶ ನಿರೂಪಣೆಯ ತಂತ್ರ ಬೆಡಗಿನಿಂದ ಕೂಡಿವೆ.ಗುರು ಲಿಂಗ ಶರಣರನ್ನು ಅರಿಯದ ಡಾಂಭಿಕ ಭಕ್ತಿಯ ಅವಹೇಳನ ವಚನಗಳಲ್ಲಿ ಕಾಣುವ ಮುಖ್ಯ ವಿಚಾರ. ಕೆಲವು ಟೀಕಾತ್ಮಕ ಹಾಗೂ ಸಂತಾಪಕವಾಗಿವೆ.

ಡಾಂಭಿಕ ಭಕ್ತರನ್ನು ಸಂತೆಯ ಸೂಳೆಯರೆಂದು ಟೀಕಿಸಿದ್ದಾಳೆ. ಟೀಕಿಸುವಲ್ಲಿ ಸರಳತೆ ಹಾಗೂ ದೇಸಿ ಸೊಗಡಿದೆ. ಲಿಂಗಮ್ಮ ಬರೆದ ವಚನಗಳು ಸಾಹಿತ್ಯ ಪ್ರದರ್ಶನಕ್ಕಲ್ಲ.ಅಲ್ಲಿ ಆಧ್ಯಾತ್ಮಿಕ ಹಾಗೂ ಲೌಕಿಕ ಅನುಭವ ಒಂದುಗೂಡಿಸಿ ಅಪ್ರತಿಮ ಪ್ರತಿಭೆ, ಸೃಜನಶೀಲತೆ, ಅಂತರಂಗದ ಅನುಭವವಿದೆ. ಸಾಮಾಜಿಕ ಕಾಳಜಿ ಇದೆ. ಬಸವಣ್ಣನ, ಸತಿಪತಿಗಳೊಂದಾದ ಭಕ್ತಿ, ಹಡಪದ ಅಪ್ಪಣ್ಣನ ಪುಣ್ಯ ಸ್ತ್ರೀ ಲಿಂಗಮ್ಮ ನಲ್ಲಿತ್ತು.

ಅನ್ನಪೂರ್ಣ ಅಗಡಿ, ಹುಬ್ಬಳ್ಳಿ
ಫೋನ್ –9945891625

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group