ಮೂಡಲಗಿ-ವಿದ್ಯಾರ್ಥಿಗಳು ಆರೋಗ್ಯ ಕಾಳಜಿ ರೂಢಿಸಿಕೊಳ್ಳುವುದು ಅವಶ್ಯವಿದೆ ಇಂದು ಮೊಬೈಲ್ ಎಂಬ ಸಾಧನ ಮಕ್ಕಳ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಹಾಳು ಮಾಡುತ್ತಿರುವುದಲ್ಲದೇ ಅನೇಕ ದುಶ್ಚಟಗಳಿಗೆ
ಕಾರಣವಾಗುತ್ತಿದೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಮತ್ತು ಮದ್ಯ, ಡ್ರಗ್ಸ್, ಧೂಮಪಾನದಂತಹ ಮಾದಕ ವ್ಯಸನಿ ಚಟಗಳು ಯುವ ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಯುವಕರ ಹಾಗು ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಯುವಕರು ಇಂಥ ಚಟಗಳಿಂದ ದೂರ ಇದ್ದು ತಮ್ಮ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಜಾನಕಿ
ಹೇಳಿದರು.
ಅವರು ಪಟ್ಟಣದ ಆರ್‌ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ವತಿಯಿಂದ ಸಮೀಪದ ದತ್ತು ಗ್ರಾಮ ಮುನ್ಯಾಳದಲ್ಲಿ ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವೈಯಕ್ತಿಕ
ಆರೋಗ್ಯದ ಜೊತೆಗೆ ಸುತ್ತಲಿನ ಪರಿಸರದ ಸ್ವಚ್ಚತೆಗೊ ಹೆಚ್ಚಿನ ಆದ್ಯತೆ ನೀಡುವತ್ತ ಗಮನ ಹರಿಸಬೇಕು ತಂದೆ ತಾಯಿಗಳು ತಮ್ಮ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಒಳ್ಳೆಯ ವಿದ್ಯಾವಂತ ಮತ್ತು ಸುಸ್ಕೃಂತ ಪ್ರಜೆಯನ್ನಾಗಿ ತಯಾರು ಮಾಡಬೇಕು ಎಂದರು.
ಮುನ್ಯಾಳ ಗ್ರಾಮ ಪಂಚಾಯತ ಸದಸ್ಯರಾದ ಅಂಬರೀಶ ನಾಯ್ಕ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ನಾವು ಸೇವಿಸುವ ಆಹಾರ, ನಾವು ಇರುವ ಪರಿಸರ ಉತ್ತಮವಾಗಿದ್ದರೆ ಒಳ್ಳೆಯ ಆರೋಗ್ಯ ಹೊಂದಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಆಯ್.ಟಿ.ಆಯ್ ಕಾಲೇಜು ಪ್ರಾಚಾರ್ಯ ಚಿದಾನಂದ ಶೆಟ್ಟರ ಉಪನ್ಯಾಸಕ ಡಾ.ಪ್ರಶಾಂತ್ ಮಾವರಕರ ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಉಪಪ್ರಾಚಾರ್ಯ ಗೀತಾ ಹಿರೇಮಠ ವಹಿಸಿಕೊಂಡು ಮಾತನಾಡಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಾವು ಅನುಸರಿಸುವ ಆರೋಗ್ಯದಾಯಿಕ ಮಾರ್ಗಗಳೇ ಸ್ಫೂರ್ತಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮುತ್ತಣ್ಣ ವಡೇರ, ಶಿವಾನಂದ ಬಿಳ್ಳೂರ,ರಮೇಶ ಪಾಟೀಲ, ಲಗ್ಮಣ್ಣ ಗೋಣಿ, ಸಂಜು ಹಿರೇಹೊಳಿ, ಸಿದ್ದಾರೂಢ ವಡೇರ.ಮಂಜುಳಾ ಮುರಗೋಡ ಎನ್.ಎಸ್.ಎಸ್. ಸಹಶಿಬಿರಾಧಿಕಾರಿ
ಉಪನ್ಯಾಸಕ ರಾಜು ಪತ್ತಾರ ಇತರರು ಹಾಜರಿದ್ದರು.
ಶಿಬಿರಾರ್ಥಿಗಳಾದ ರೇಷ್ಮಾ ನದಾಫ ನಿರೂಪಿಸಿದರು ಸೌಜನ್ಯ ಮೂಡಲಗಿ ಸ್ವಾಗತಿಸಿದರು ಅಬುಬಕರ ಡಾಂಗೆ ವಂದಿಸಿದರು.