spot_img
spot_img

ಡೆಂಗ್ಯೂ ಲಸಿಕೆ ಹಾಕುವ ಕಾರ್ಯಕ್ರಮ

Must Read

- Advertisement -

ಬೆಳಗಾವಿ – ಮಾಳ ಮಾರುತಿ ಬಡಾವಣೆಯ ನಾಗರಿಕ ವಿಕಾಸ ಸಂಘದಿಂದ ದಿ.18-7 – 2024ರಂದು ಆಂಜನೇಯ ನಗರದ ಮಹೇಶ ಪಿ ಯು ವಿಜ್ಞಾನ ಮಹಾ ವಿಧ್ಯಾಲಯದಲ್ಲಿ ಡೆಂಗ್ಯೂ ರೋಗ ಪ್ರತಿಬಂಧಕ ಹೋಮಿಯೋಪತಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಾ.ಗೀತಾ ಬಸವರಾಜ ಆದಿ ಅವರು ಡೆಂಗ್ಯೂ ರೋಗದ ಲಕ್ಷಣಗಳನ್ನು ಹೇಳಿ ಡೆಂಗ್ಯೂ ಬರದಂತೆ ಹಾಗೂ ಡೆಂಗ್ಯೂ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

35 ನೇ ವಾರ್ಡಿನ ನಗರ ಸೇವಕಿಯರಾದ ಲಕ್ಷಿ ಮಹಾದೇವ ರಾಠೋಡ ಅವರು ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಾಗರಿಕ ವಿಕಾಸ ಸಂಘದ ಅಧ್ಯಕ್ಷರಾದ ಸಿ.ಎಂ ಬೂದಿಹಾಳ ಅಧ್ಯಕ್ಷತೆ ವಹಿಸಿ ನಗರ ಸ್ವಚ್ಚತೆಯ ಬಗ್ಗೆ ಮಾತನಾಡುತ್ತ ನಗರ ಸೇವಕರು ಹಾಗೂ ಸಾರ್ವಜನಿಕರು ಆರೋಗ್ಯ ಹಾಗೂ ನಗರ ಸ್ವಚ್ಛತೆ ಕಡೆಗೆ ಸದಾ ಗಮನ ಹರಿಸುತ್ತಿರಬೇಕು ಎಂದು ಹೇಳಿದರು.

- Advertisement -

ಸತೀಶ ಸವದಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಸಮಾಜ ಸೇವಕ ಬಸವರಾಜ ಪಾಟೀಲ ವಂದಿಸಿದರು.

ಪ್ರಾಚಾರ್ಯರಾದ ಮಂಜುನಾಥ ಭಟ್ಟ, ಪ್ರಭಾಕರ ವನಹಳ್ಳಿ, ಬಿ.ವಿ. ಅಣ್ಣಿಗೇರಿ, ಮನೋಜ ಬೆನಕೊಪ್ಪ, ಅಶೋಕ ಮುನವಳ್ಳಿ’ ಆನಂದ ಮುತ್ನಾಳ, ಯೋಗೇಶ ಬಿದರಿ, ಹಾಗೂ ಮಹೇಶ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಸುಮಾರು 180 ಜನ ನಾಗರಿಕರಿಗೆ ಲಸಿಕೆ ಹಾಕಲಾಯಿತು.

- Advertisement -
- Advertisement -

Latest News

ದಸರಾ ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ...
- Advertisement -

More Articles Like This

- Advertisement -
close
error: Content is protected !!
Join WhatsApp Group