- Advertisement -
ಊಸರವಳ್ಳಿ ಆತ್ಮಹತ್ಯೆ
ಕಾಡಿನಲ್ಲಿ
ಒಂಟಿ ಬದುಕು
ಹೊಟ್ಟೆಗಾಗಿ
ಬಣ್ಣ ಬದಲಿಸುತ್ತಿತ್ತು
ನಿರುಪದ್ರವ ಜೀವಿ
ಊಸರವಳ್ಳಿ
ಶ್ರೀಗಂಧ ಕಳ್ಳರು
ಕಾಡಿಗೆ ಬೆಂಕಿ
ಗಣಿ ಲೂಟಿ
ಮರಳು ದಂಧೆ
ಹುಲಿ ಚರ್ಮ ಆನೆ ಕೊಂಬಿನ
ಭರ್ಜರಿ ಮಾರಾಟ
ಕೆರೆ ಹಳ್ಳ ನದಿ ಅತಿಕ್ರಮಣ
ಲೋಕಾಯುಕ್ತದಿಂದ
ಎಸ ಆಯ್ ಟಿ ಯಿಂದ
ಕ್ಲೀನ್ ಚಿಟ್ ಪ್ರಾಮಾಣಿಕರು
ಚುನಾವಣಾ ಬಂದಾಗ
ಶ್ವೇತ ಶುಭ್ರ ಖಾದಿ ಜುಬ್ಬ
ಬುದ್ಧ ಬಸವ ಗಾಂಧಿ ಹಬ್ಬ
ಸಂವಿಧಾನ ಹೆಸರಲ್ಲಿ
ಮಂತ್ರಿಯಾಗಿ ಪ್ರಮಾಣ ವಚನ
ಬೇಸರಗೊಂಡಿತು ಊಸರವಳ್ಳಿ
ಒಂದು ದಿನ ಬೆಳ್ಳಂಬೆಳಿಗ್ಗೆ
ಮರಕ್ಕೆ ಹಗ್ಗ ಬಿಗಿದು
ಆತ್ಮಹತ್ಯೆ ಮಾಡಿಕೊಂಡಿತ್ತು .
ಕೈಯಲ್ಲಿ ಏನೋ ಒಂದು ಚೀಟಿ
ತೆಗೆದು ನೋಡಿದರೆ
ದುಷ್ಟ ರಾಜಕಾರಣಿಗಳೇ
ನಿಮ್ಮಷ್ಟು ನನಗೆ ಬರಲಿಲ್ಲ
ಬಣ್ಣ ಬದಲಾಯಿಸಲು
ನನ್ನ ಸಾವಿಗೆ ನಾನೇ ಕಾರಣ
ಓದಿದ ನಾವು ನಗಬೇಕೋ
ಇಲ್ಲ ಅಳಬೇಕೊ ?
ಗೊತ್ತಾಗಲೊಲ್ಲದು
ಡಾ ಶಶಿಕಾಂತ ಪಟ್ಟಣ ರಾಮದುರ್ಗ