ಬೆಳಗಾವಿ: ಮಹಾಂತೇಶ ನಗರದ ಫ.ಗು.ಹಳಕಟ್ಟಿ ಭವನದಲ್ಲಿ ಶರಣ ಸಿ ಬಿ ಮಠಪತಿ ನಿವೃತ್ತ ಪ್ರಾಚಾಯ೯ರು, ಮರೆಯಾಗುತ್ತಿರುವ ಕೌಟುಂಬಿಕ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.
25ವಷ೯ದ ಹಿಂದೆ ಒಂದು ಗ್ರಾಮದಲ್ಲಿ ಅಣ್ಣಾ ಕಾಕಾ ಅಮ್ಮಾ ನಮಸ್ಕಾರ ಎನ್ನುವ ಒಳ್ಳೆಯ ಸಂಸ್ಕಾರ ಇತ್ತು ಆದರೆ ಇಂದು ಅದು ಮಾಯವಾಗಿದೆ. ಮಾನವ ಇಂದು ರಸ್ತೆ ಮಾಡಿಸಿದೆ ಗುಡಿ ಕಟ್ಟಿಸಿದೆ ನನಗೇನು ಮಾಡಿದೆ ಎಂದು ಕೇಳುತ್ತಾನೆ ಇದನ್ನು ಆಲೋಚನೆ ಮಾಡಬೇಕಾಗಿದೆ. ಹೆಣ್ಮಕ್ಕಳಲ್ಲಿ ನೆಗೆಣ್ಣಿ ಎಂಬ ಪದ ಮಾಯವಾಗಿ ಅಲ್ಲಿ ಆಂಟಿ ಅಂಕಲ್ ಎಂಬ ಪದ ನುಸುಳಿವೆ ನಾವು ಮಕ್ಕಳನ್ನು ವಸತಿ ಶಾಲೆಗೆ ಸೇರಿಸುತ್ತೇವೆ ಹೀಗಾಗಿ ಮಕ್ಕಳು ನಮ್ಮನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ ಎಂದರು.
70ವಷ೯ ವಯಸ್ಸಾದವರು ಇಂದು ಬದುಕು ಕಲಿಯಬೇಕಾಗಿದೆ ಎಂದು ಹೇಳಿ, ಬ್ಯಾಂಕ ವ್ಯವಹಾರ ಅಡುಗೆ ಇತ್ಯಾದಿ ಅನೇಕ ಘಟನೆಗಳನ್ನು ಹೇಳಿದರು.
ವಿಭಕ್ತ ಕುಟುಂಬ ವಾಗಲು ಕಾರಣ ಮತ್ತು ಪರಿಹಾರ ತಿಳಿಸಿದರು.
ಅಧ್ಯಕ್ಷರಾದ ಈರಣ್ಣಾ ದೇಯನ್ನವರ ಮಾತನಾಡುತ್ತಾ, ಧಮ೯ದಿಂದ ನಾವು ಸಾಗಬೇಕು ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ವಚನ ವಿಶ್ಲೇಷಿಸಿದರು
ಇದೇ ಸಂದಭ೯ದಲ್ಲಿ ಬಸವೇಶ್ವರ ಬ್ಯಾಂಕ ಅಧ್ಯಕ್ಷರನ್ನು ಹಾಗೂ ನಿದೇ೯ಶಕರನ್ನು ಸತ್ಕರಿಸಿದರು ವಿದ್ಯಾ ಅಜಗುಣಕರ ಪ್ರಸಾದ ಸೇವೆ ನೀಡಿದ್ದರು ಸುರೇಶ ನರಗುಂದ ನಿರೂಪಿಸಿದರು.
ಶರಣ ಶರಣೆಯರಿಂದ ವಚನ ಪ್ರಾಥ೯ನೆ ಮಾಡಿದರು ಆನಂದ ಕಕಿ೯, ರಮೇಶ ಕಳಸಣ್ಣವರ, ಸದಾಶಿವ ದೇವರಮನಿ, ಪ್ರಕಾಶ ಬಾಳೇಕುಂದ್ರಿ, ಸಂಗಣ್ಣಾ ಅರಳಿ, ಎಂ ವೈ ಮೆಣಸಿನಕಾಯಿ, ಸುಶೀಲಾ ಗುರವ, ನರಗುಂದ ಮೆಡಂ, ಶಶಿಭೂಷಣ ಪಾಟೀಲ ಶರಣ ಶರಣೆಯರು ಉಪಸ್ಥಿತರಿದ್ದರು.