spot_img
spot_img

ಕನ್ನಡ ಭಾಷೆ ಗಟ್ಟಿಯಾಗಿದೆ, ಸರಳವಾಗಿದೆ – ವಿನೋದ ಹಂಚಿನಾಳ

Must Read

- Advertisement -

ಸಿಂದಗಿ: ಕನ್ನಡ ಭಾಷೆ ಗಟ್ಟಿ ಭಾಷೆ ಅದು ಸರಳ ವಾಗಿದೆ ಕಾರಣ ನಾವೆಲ್ಲ ನಾಡು ನುಡಿ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಿಂದಗಿ ಪಟ್ಟಣದ ಗಣ್ಯ ವ್ಯಾಪಾರಸ್ಥ ವಿನೋದ ಹಂಚಿನಾಳ ಹೇಳಿದರು.

ಪಟ್ಟಣದ ಪಿ.ಇ.ಎಸ್ ಸಂಸ್ಥೆಯ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ೬೭ ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ನಾಡಿನ ನೆಲ, ಜಲ, ಭಾಷೆ ಹಾಗೂ ಸಾಹಿತ್ಯಕ್ಕೆ ಅಪಾರ ಗೌರವ ಹೊಂದಿರಬೇಕೆಂದು ಹೇಳುತ್ತಾ, ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅವರ ತಂದೆ-ತಾಯಿಯರ ಸ್ಮರಣಾರ್ಥವಾಗಿ 1 ಲಕ್ಷ ದೇಣಿಗೆ ನೀಡಲು ವಾಗ್ದಾನ ಮಾಡಿದರು.

ಇದೇ ಸಂದರ್ಭದಲ್ಲಿ ವಿಶ್ರಾಂತ ಉಪನ್ಯಾಸಕರಾದ ಪಿ.ಎಮ್. ಮಡಿವಾಳರ ಮಾತನಾಡಿ, ಕವಿ ಪುಂಗವರು ಹಾಗೂ ಹೋರಾಟಗಾರರು ಕಟ್ಟಿದ ಅಖಂಡ ಕರ್ನಾಟಕವನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಹೇಳುತ್ತಾ ಇಂದು ನಾಡನ್ನಾಳುವ ಎಲ್ಲಾ ರಾಜಕೀಯ ಪಕ್ಷಗಳು ಮತ ಬೇಟೆಗಾಗಿ ತಮಿಳು, ತುಳು, ಮರಾಠಿ ಹೀಗೆ ಹಲವಾರು ಭಾಷಿಕರನ್ನು ಓಲೈಸಿ ಭಾಷೆಗಳ ಅಕಾಡೆಮಿ ಸೃಷ್ಟಿ ಮಾಡಿ ಕನ್ನಡ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

- Advertisement -

ಇದೇ ವೇಳೆ ಪಿ.ಇ.ಎಸ್ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಕಡಣಿಯವರು ಕಾವೇರಿಯಿಂದ ಗೋದಾವರಿವರೆಗೆ ಬೆಳೆದ ಕನ್ನಡ ನಾಡಿನ ಸಿರಿಯ ಕುರಿತು ಹೇಳಿದರು.

 ಎ.ಬಿ.ವಿ.ಪಿ ಕಾರ್ಯಕರ್ತ ಭಾಗೇಶ ಹೂಗಾರ ಕನ್ನಡ ನಾಡು ನುಡಿ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ರಂಜಿಸಿದರು.

- Advertisement -

ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿಯವರು ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಕೆ.ಎಚ್. ಸೋಮಾಪೂರ ಉಪನ್ಯಾಸಕರಾದ ಬಿ.ಆರ್. ಬಿರಾದಾರ, ರಮೇಶ ಧರಿಗೊಂಡ, ಆರ್.ಬಿ. ಯಂಕಂಚಿ, ಮಂಜುಳಾ ಶ್ರೀಗಿರಿ, ಪಿ.ಸಿ. ಕುಲಕರ್ಣಿ, ಸವಿತಾ ರಾಠೋಡ, ಜಯಶ್ರೀ ಇಳಗೇರ, ರೇಣುಕಾ ವಾಲೀಕಾರ, ಕೆ.ಪಿ. ಬಿರಾದಾರ, ಎ.ಕೆ. ಸನಗುಂದಿ, ಪಿ.ಕೆ. ಕಸಬಿಕಟ್ಟಿ ಉಪಸ್ಥಿತರಿದ್ದರು.

ಪ. ಪೂ. ಕಾಲೇಜಿನ ಪ್ರಾಚಾರ್ಯ ರವಿ ಗೋಡ್ಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಎಸ್.ಎಸ್. ವಾಲೀಕಾರ ನಿರೂಪಿಸಿದರು. ವಿ.ವಿ. ಪಾಟೀಲ ಸ್ವಾಗತಿಸಿದರು. ಬಿ.ಎಮ್. ಬಿರಾದಾರ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group