spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ‘ಗುರು ಪೂರ್ಣಿಮಾ’ ಕಾರ್ಯಕ್ರಮ ಮತ್ತು ಸತ್ಸಂಗ

Must Read

spot_img

ಅಲೌಕಿಕ ಗುರುವನ್ನು ನೆನೆಯುವುದೇ ಗುರುಪೂರ್ಣಿಮೆ – ನಿ.ಪ್ರಾಚಾರ್ಯ ದೊಡಮನಿ

ಬೆಳಗಾವಿ – ಲೌಕಿಕ ಶಿಕ್ಷಕರನ್ನು ನೆನೆಯುವುದು ಶಿಕ್ಷಕರ ದಿನಾಚರಣೆ ಆದರೆ ಅಲೌಕಿಕ ಶಿಕ್ಷಕರಾದ ಯೋಗ,ತ್ಯಾಗ ಬೋಧನೆ, ಸತ್ಸಂಗ, ಸದ್ಗುಣಗಳನ್ನು ಭೋಧಿಸುತ್ತ ನಮ್ಮ ಬದುಕಿನ ಶೈಲಿಯನ್ನು ಬದಲಿಸುವ ಶಿಕ್ಷಕರನ್ನು ನೆನೆಯುವುದೇ ಗುರು ಪೂರ್ಣಿಮೆಯ ಮಹತ್ವ ಎಂದು ನಿವೃತ್ತ ಪ್ರಾಚಾರ್ಯ ದೊಡಮನಿ ಹೇಳಿದರು.

ಬೆಳಗಾವಿ ನಗರದ ಫ.ಗು ಹಳಕಟ್ಟಿ ಭವನದಲ್ಲಿ ರವಿವಾರ ದಿ 17 ರಂದು ಲಿಂಗಾಯತ ಸಂಘಟನೆ ವತಿಯಿಂದ ನಡೆದ ‘ಗುರುಪೂರ್ಣಿಮೆ ಮತ್ತು ಸತ್ಸಂಗ’ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುಪೂರ್ಣಿಮೆ ಪ್ರಯುಕ್ತವಾಗಿ ತಮ್ಮ ಜೀವನದುದ್ದಕ್ಕೂ ನಿಸ್ವಾರ್ಥ ಸೇವೆ ಮಾಡುತ್ತಾ ನಿವೃತ್ತರಾದ ನಂತರವೂ ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ಹಲವಾರು ವರ್ಷಗಳಿಂದ ಉಚಿತವಾಗಿ ಜನರಿಗೆ ಯೋಗವನ್ನು ಹೇಳುವುದರ ಜೊತೆಗೆ ಅವರ ಜೀವನಕ್ರಮವನ್ನು ಬದಲಿಸುವ ರೀತಿನೀತಿಗಳನ್ನು ಪ್ರತಿದಿನ ಬೆಳಗಾವಿ ನಗರದ ಜನರಿಗೆ ಸೇವಾ ಮನೋಭಾವದಿಂದ ತಿಳಿಸುತ್ತಿರುವ ಯೋಗಗುರು ಸಿದ್ದಪ್ಪ ಸಾರಾಪುರೆ ಯವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಅವರ ಕೈಯಲ್ಲಿ ಯೋಗ ಕಲಿತು ಒಳ್ಳೆಯ ಸಾಧನೆ ಮಾಡಿ ಮತ್ತಿತರರಿಗೆ ಮಾರ್ಗದರ್ಶನ ಮಾಡುತ್ತಿರುವ ಶಂಕರ ಗುಡಗನಟ್ಟಿ, ಶಿವಾನಂದ ನಾಯಿಕ, ಸುವರ್ಣ ತಿಗಡಿ ಮತ್ತು ಸುರೇಖಾ ಮುಧೋಳ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘಟನೆ ಅಧ್ಯಕ್ಷರಾದ ಈರಣ್ಣ ದೇಯನ್ನವರ ಮಾತನಾಡಿ, ಹಿಂದಿನ ಋಷಿ-ಮುನಿಗಳು ಹೇಳಿದಂತೆ ‘ಕಮ್ ಖಾವೋ ಜ್ಯಾದಾ ಜಿಯೋ ‘ ಎಂಬ ದೃಷ್ಟಿಕೋನದಿಂದ ನಾವು ಬದುಕಬೇಕಿದೆ. ಗುರು ಮತ್ತು ನಿಸ್ವಾರ್ಥ ತ್ಯಾಗಮಯಿ ಗಳ ಮಾರ್ಗದರ್ಶನ ಮತ್ತು ಸಹಕಾರದಿಂದಲೇ ಸಂಘಟನೆಗಳು ಬೆಳೆಯುತ್ತವೆ. ಈತ್ತೀಚಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

‘ನಮ್ಮ ಆಹಾರ ಪದ್ಧತಿಗಳು’ಕುರಿತಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಕೆ.ಎಲ್.ಇ ಆಸ್ಪತ್ರೆಯ ಡಾ. ರವಿ ಕೆರೂರ, ನಾವು ಸತ್ವವಿರುವ ಜೀವವಿರುವ ಸಸ್ಯಾಹಾರ ತಿನ್ನಬೇಕು. ನಮ್ಮ ಆಹಾರದಲ್ಲಿ ಮೊಳಕೆ ಬರುವ ಜೋಳ,ಗೋಧಿ, ವಿಶೇಷ ಕಾಳುಗಳು ಮೊಳಕೆ ಬರುವ ಎಲ್ಲ ಕಾಳುಗಳಲ್ಲಿ ಸತ್ವ ಇರುತ್ತದೆ.ಅಂಥ ಆಹಾರ ತಿನ್ನಬೇಕೇ ಹೊರತು ಪಾಲಿಶ್ ಮಾಡಿದ ಗೋಧಿ,ಅಕ್ಕಿ ಒಳ್ಳೆಯದಲ್ಲ. ಹಾಲು ಅವಶ್ಯವಿದ್ದಲ್ಲಿ ಮಾತ್ರ ಸೇವಿಸಬೇಕು. ಹಾಲಿನಿಂದ ಪಚನಶಕ್ತಿ ಆಗಲ್ಲ.ಸಾತ್ವಿಕ ಆಹಾರಗಳನ್ನು ತಿನ್ನುವುದರ ಜೊತೆಗೆ ಅತಿಯಾಗಿ ನೀರು ಅಂಶ ಇರುವ ಆಹಾರ ತಿನ್ನಬೇಕು. ತರಕಾರಿ,ಬೇಳೆ ಕಾಳುಗಳು ಇಂತಹ ನೀರು ಯುಕ್ತ ಆಹಾರ ಸೇವಿಸಬೇಕು ಎಂದು ಆಹಾರ ಪದ್ಧತಿಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸುರೇಶ ನರಗುಂದ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಶಂಕರ ಶೆಟ್ಟಿ, ಮಹಾಂತೇಶ ದೇಸಾಯಿ, ಬಿ ಎಂ. ತಿಗಡಿ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಂಘಟನೆಯ ಸದಸ್ಯರು ಶರಣ-ಶರಣೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸುರೇಖಾ ಕರ್ಕಿ ಮತ್ತು ಸರ್ವ ಸದಸ್ಯರಿಂದ ವಚನ ಪ್ರಾರ್ಥನೆ ಮತ್ತು ಗುರುವಿನ ಮಹತ್ವ ಸಾರುವ ವಚನ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಂಗಮೇಶ ಅರಳಿ ನಿರ್ವಹಿಸಿ ನಿರೂಪಿಸಿದರು ಕೊನೆಯಲ್ಲಿ ಸರ್ವಸದಸ್ಯರ ಶರಣರಿಂದ ವಚನ ಮಂಗಲ ಕಾರ್ಯಕ್ರಮ ನಡೆಯಿತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!