ತಂದೆಯ ಜವಾಬ್ದಾರಿ, ಮಹತ್ವವನ್ನು ಎತ್ತಿ ಹಿಡಿಯುವ “ಅಪ್ಪಾ ಐ ಲವ್ ಯೂ” ಕಿರುಚಿತ್ರ

Must Read

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಮಾತೃದೇವೋಭವ, ಪಿತೃದೇವೋಭವ ಎಂಬ ವೇದಗಳ ಘೋಷವಾಕ್ಯಗಳನ್ನು ನಾವೀಗಾಗಲೇ ಕೇಳಿರುತ್ತೇವೆ. ತಂದೆತಾಯಿಯರನ್ನು ದೇವರಿಗೆ ಹೋಲಿಸುವ ಈ ವಾಕ್ಯಗಳ ಮೌಲ್ಯವನ್ನು ಅರಿತರೆ, ಅವರ ಬೆಲೆ ಏನೆಂದು ಅರಿವಾಗುತ್ತದೆ. ತಾಯಿ ಮಗುವಿನ ಆರೈಕೆಯೊಂದಿಗೆ, ಕುಟುಂಬದ ಕಾಯಕಗಳನ್ನು ನಿರ್ವಹಿಸುತ್ತಿದ್ದರೆ. ತಂದೆ ಇಡೀ ಕುಟುಂಬದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತಿರುತ್ತಾನೆ. ಇದನ್ನೇ ಮೂಲವಾಗಿಟ್ಟುಕೊಂಡು ನಿಂಗರಾಜ ಸಿಂಗಾಡಿಯವರು ಕತೆ-ಚಿತ್ರಕಥೆ-ಸಂಭಾಷಣೆ ಬರೆದು “ಅಪ್ಪಾ ಐ ಲವ್ ಯೂ ” ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈ ಕಿರುಚಿತ್ರದ ಸಾರಾಂಶವನ್ನು ನೋಡಿದಾಗ ಒಬ್ಬ ತಂದೆ ಜವಾಬ್ದಾರಿಯುತವಾಗಿ ತನ್ನ ಮಗನ ಬಗ್ಗೆ ಕಾಳಜಿವಹಿಸುವ ಮೂಲಕ ಸುಪುತ್ರನು ಭವಿಷ್ಯದ ಜೀವನದಲ್ಲಿ ಗೌರವ-ಘನತೆಯಿಂದ ಬದುಕಲು ತನ್ನ ಜೀವನವನ್ನೇ ಸವೆಸಿರುತ್ತಾನೆ. ನೋವು-ಅವಮಾನ-ಕಷ್ಟಗಳ ಸರಮಾಲೆಯಲ್ಲಿ ನೊಂದು ಬೆಂದು, ತನ್ನ ಮಗನ ಭವಿಷ್ಯಕ್ಕಾಗಿ ದುಡಿದಿರುತ್ತಾನೆ. ಆದರೆ ಹರೆಯ ಪ್ರಾಯಕ್ಕೆ ಬಂದ ನಂತರ ಮಗನು ತಂದೆಯ ತ್ಯಾಗಗಳನ್ನು ಮರೆತು, ಚಿಕ್ಕಂದಿನಲ್ಲಿ ತಂದೆ ತನ್ನ ಶೌಚವನ್ನು ತೊಳೆದು ಬಳಿದಿದ್ದು ಮರೆಮಾಚಿ ಸಮಾಜದಲ್ಲಿ ತನ್ನ ಅಸ್ಮಿತೆಯನ್ನು ಎತ್ತಿ ಹಿಡಿಯಲು ಅವನನ್ನೇ ಕಡೆಗಣಿಸುತ್ತಾನೆ. ಆಗ ತಂದೆಯ ಮನಸ್ಸಿಗೆ ಬೆಟ್ಟದಷ್ಟು ನೋವಾದರೂ ಮಗನ ಸೌಖ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿರುತ್ತಾನೆ.

ಪಿತೃದೇವನ ಮಹತ್ವವನ್ನು ತಿಳಿಯದೇ ಅವನಿಗೆ ಬಾಯಿಗೆ ಬಂದಂತೆ ಬಯ್ದು, ಅಸಹ್ಯಕರವಾಗಿ ವರ್ತಿಸುತ್ತಾನೆ ಮತ್ತು ಇಳಿವಯಸ್ಸಿನ ತಂದೆಯ ಸೇವೆ ಮಾಡಲು ಹೇಸಿಗೆ ಪಟ್ಟು ಹಿಂಜರಿಯುತ್ತಾನೆ. ಮನಸ್ಸೋ ಇಚ್ಛೆ ನಡೆದು ತಂದೆಯ ಅಭಿಲಾಷೆಗಳನ್ನೆಲ್ಲಾ ಬಲಿ ಕೊಟ್ಟ ಮಗನಿಗೆ, ತಾನು ತಂದೆಯಾದ ನಂತರ ಆ ಜವಾಬ್ದಾರಿ ನಿರ್ವಹಣೆಯ ಅರಿವಾಗಿ ನೊಂದುಕೊಳ್ಳುತ್ತಾನೆ. ಇದ್ದಾಗಲೇ ತನ್ನ ತಂದೆಗೆ ತಗ್ಗಿಬಗ್ಗಿ ನಡೆದು ಗೌರವ ಸಲ್ಲಿಸಿ ಅವರೆಂದೂ ನೊಂದುಕೊಳ್ಳದಂತೆ ನೋಡಿಕೊಳ್ಳುವ ಮಗನು ಸಂಸ್ಕಾರಯುತನಾಗಿ ಸಮಾಜದಲ್ಲಿ ಬದುಕುತ್ತಾನೆಂದು ತೋರಿಸಲು ಈ ಚಿತ್ರತಂಡ ಹೊರಟಿದೆ.

ನಿಂಗರಾಜ ಸಿಂಗಾಡಿ ಪಿಕ್ಚರ್ಸ್ ಎಂಬ ಯುಟ್ಯೂಬ್ ವಾಹಿನಿಯಲ್ಲಿ ಈ ಚಲನಚಿತ್ರ ಬಿಡುಗಡೆಯಾಗುತ್ತಿದ್ದು. ಚಿತ್ರತಂಡದ ತಾರಾಬಳಗದಲ್ಲಿ ಮಗನಾಗಿ ಗುರುರಾಜ್ ಕುಂಬಾರ,ತಂದೆಯಾಗಿ ರಾಮಪ್ಪ ಪೂಜಾರಿ, ಮಾಸ್ಟರ್ ಸಂಕೇತ್, ಗುರಲಾಪುರ, ಉಮೇಶ್ ಜಾಧವ ಕಾಣಿಸಿಕೊಂಡಿದ್ದಾರೆ.ಕಥೆ ಚಿತ್ರಕಥೆ ಸಂಭಾಷಣೆ ನಿರ್ಮಾಣ ನಿರ್ದೇಶನದ ಹೊಣೆ ನಿಂಗರಾಜ್ ಸಿಂಗಾಡಿಯವರು ಹೊತ್ತಿದ್ದು, ಪ್ರೊಡಕ್ಷನ್ ಹೆಡ್ ಸಹನಿರ್ದೇಶಕರಾಗಿ ಅಮೀತ್ ಶೂರಪಾಲಿಯವರು ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ರವಿತೇಜ (R T Studio ) ಬಾಗಲಕೋಟ ನೀಡಿದ್ದು, ಇನ್ನುಳಿದಂತೆ ತಂಡದಲ್ಲಿ ರಾಘು ಕಡಕೋಳ, ಅಜೀತ್ ಸಿಂಗಾಡಿ, ಉಮೇಶ್ ಜಾಧವ, ಸುಬ್ಬು ಮಾಳಿಯವರು ಕಾಣಿಸಿಕೊಂಡಿದ್ದಾರೆ.


ಕು.ಹನಮಂತ.ಬ.ಐಹೊಳೆ
ಸಿನಿಮಾ ವಿಮರ್ಶಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...
- Advertisement -

More Articles Like This

- Advertisement -
close
error: Content is protected !!