spot_img
spot_img

ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು- ಡಾ. ಶೈಲಜಾ ಗೌಡ

Must Read

- Advertisement -

ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಗೌರವವಿದೆ

ಧಾರವಾಡ : ‘ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು. ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಗೌರವವಿದೆ,’ಎಂದು ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ವಿ.ಗೌಡ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಅಕ್ಷರತಾಯಿ ಶ್ರೀಮತಿ ಲೂಸಿ ಕೆ.ಸಾಲ್ಡಾನ ದತ್ತಿ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಮತಿ ಲೂಸಿ ಸಾಲ್ಡಾನ ಅವರದು ಸಾರ್ಥಕ ಬದುಕು. ತ್ಯಾಗಮಯಿಯಾದ ಅವರು ಜನಮಾನಸದಲ್ಲಿ ಉಳಿಯುವ ವ್ಯಕ್ತಿ. ಅವರು ತಮ್ಮ ಜೀವನದಲ್ಲಿ ಎದುರಾದ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಾಧನೆಯ ಶಿಖರವನ್ನು ಏರಿದರು. ವಿದ್ಯಾರ್ಥಿಗಳನ್ನೇ ತನ್ನ ಮಕ್ಕಳೆಂದು ತಿಳಿದು ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹೆಚ್ಚಿಸಿದವರು. ಅವರಲ್ಲಿರುವ ಸಾಮಾಜಿಕ ಕಳಕಳಿ ಅನನ್ಯವಾದದ್ದು ಎಂದರು.

- Advertisement -

ಬೆಂಗಳೂರಿನ ಸಾಧನಾ ತರಬೇತಿ ಕೇಂದ್ರ ಮುಖ್ಯಸ್ಥೆ ಡಾ.ಕೆ.ಸಿ.ಜ್ಯೋತಿ, ವಾಯ್. ಬಿ. ಕಡಕೋಳ ಸಂಪಾದಿಸಿದ ಲೂಸಿ ಸಾಲ್ಡಾನ ಅವರು ಸಂಗ್ರಹಿಸಿದ ನುಡಿಮುತ್ತಗಳ `ಭಾವಬಿಂದು’ ಪುಸ್ತಕ ಹಾಗೂ ಶಿಕ್ಷಕಿ ಶಾಹೀನ್‌ಬಾನು ಬಳ್ಳಾರಿ ಅವರ `ಚಿಗುರೆಲೆ ಸಂಭ್ರಮ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ‘ಎರಡೂ ಕೃತಿಗಳು ಓದುಗರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುತ್ತವೆ. ಈ ಕೃತಿಗಳಲ್ಲಿ ಜೀವನಾನುಭವದ ಸಾರವಿದೆ. ಲೂಸಿ ಅಮ್ಮನವರ ತ್ಯಾಗ ನಿಜಕ್ಕೂ ಅಮರ. ಇಂದು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳ ಶೈಕ್ಷಣಿಕ ಬದುಕಿಗೆ ತಮ್ಮದೇ ಆದ ದತ್ತಿ ಸ್ಥಾಪಿಸಿ ಹಣ ನೀಡುವ ಮೂಲಕ ನಮಗೆಲ್ಲ ಆದರ್ಶ ಪ್ರಾಯವಾಗಿರುವರು. ವೈ.ಬಿ.ಕಡಕೋಳ ಗುರುಗಳು ಅವರ ಕುರಿತು ಹತ್ತು ಪುಸ್ತಕ ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಲೂಸಿ ಅಮ್ಮ ಉಳಿಯುವಂತೆ ಮಾಡಿರುವರು. ನನ್ನ ಬದುಕು ಕೂಡ ಕಷ್ಟಮಯ. ತಿಳಿವಳಿಕೆ ಮೂಡುವ ಮೊದಲು ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಸಹೋದರಿ ಸಹೋದರರನ್ನು ಸಲಹುವ ಮೂಲಕ ನನ್ನ ಗೆಳತಿಯವರ ಮನೆಯಲ್ಲಿ ಕೆಲಸ ನಿರ್ವಹಿಸಿ ಇಂದು ನಿಮ್ಮ ಮುಂದೆ ಜ್ಯೋತಿ ನಿಂತಿದ್ದಾಳೆ ಎಂದರೆ ಪ್ರತಿ ಹೆಜ್ಜೆಯಲ್ಲೂ ನೋವಿದೆ.ನನ್ನನ್ನು ನಾನು ಗುರುತಿಸಿಕೊಳ್ಳಬೇಕೆಂಬ ಹಂಬಲ ಸತತ ಪ್ರಯತ್ನ ಪರಿಶ್ರಮ ಇವತ್ತು ಈ ಹಂತಕ್ಕೆ ನನ್ನನ್ನು ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಕಡಕೋಳ ಗುರುಗಳು ಪ್ರಾಸ್ತಾವಿಕವಾಗಿ ಮಾತನಾಡುತ್ತ ನನ್ನ ಕಿರು ಪರಿಚಯ ಮಾಡಿದರು.ನನ್ನ ಬಡತನ,ನನಗೆ ನೋವು ತರುವ ಮಾತುಗಳನ್ನಾಡಿದವರು.ನನ್ನಲ್ಲಿ ಅಂದು ಅವರೆಲ್ಲರ ಮಾತುಗಳಿಗೆ ಉತ್ತರ ನೀಡುವಂತಾಗಲು ಕಾರಣ ಇಂದು ನಿಮ್ಮ ಮುಂದಿರುವ ಜ್ಯೋತಿ ಎಂದು ಹೇಳಿದರು.

ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ `ಶ್ರಮಜೀವಿ’ ಹಾಗೂ `ಶಿಕ್ಷಕರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿ, ‘ಲೂಸಿ ಸಾಲ್ಡಾನ ಅವರ ಬದುಕು ಇಡೀ ಶಿಕ್ಷಕ ಸಮುದಾಯಕ್ಕೆ ಪ್ರೇರಣೆಯಾಗಿದೆ. ನಮ್ಮ ಜೀವನದಲ್ಲಿ ನಾವು ಮೂರು ರೀತಿಯ ಗುರುಗಳನ್ನು ಕಾಣುತ್ತೇವೆ ನಮ್ಮನ್ನು ಹೆತ್ತ ತಂದೆ, ತಾಯಿ, ಮೊದಲ ಗುರುಗಳಾದರೆ ನಮಗೆ ವಿದ್ಯೆ ನೀಡುವ ಗುರುಗಳು ಎರಡನೆಯ ಗುರುವಿನ ಸ್ಥಾನದಲ್ಲಿ ನಿಲ್ಲುವರು ಹಾಗೂ ಮೂರನೆಯದಾಗಿ ಅಧ್ಯಾತ್ಮ ಗುರುಗಳು ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಸಂಸ್ಕಾರ ರೂಪಿಸುತ್ತಾರೆ. ಈ ರೀತಿಯ ಉತ್ತಮ ಗುರುಗಳ ಮೂಲಕ ನಮ್ಮ ಬದುಕು ಸಾರ್ಥಕತೆ ಪಡೆಯುತ್ತದೆ. ಲೂಸಿ ಸಾಲ್ಡಾನ ಅವರದು ನಿಸ್ವಾರ್ಥ ಬದುಕು’ಎಂದು ಹೇಳಿದರು.

ದಿವ್ಯ ಸಾನ್ನಿಧ್ಯವಹಿಸಿದ್ದ ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠದ ಪೂಜ್ಯಶ್ರೀ ಗುರುಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ‘ಲೂಸಿ ಸಾಲ್ಡಾನ ಅವರು ತಮ್ಮ ಪರಿಶ್ರಮದಿಂದಲೇ ಸಾಧನೆಯ ಶಿಖಿರವನ್ನೇರಿದವರು.ತಮ್ಮ ಪರೋಪಕಾರ ಗುಣದಿಂದ ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗಿದ್ದಾರೆ.ದಾಸೋಹ ಗುಣ ಅಕ್ಷರ ಮಾತೆಯ ಸೇವೆ, ತ್ಯಾಗ ಅನುಕರಣೀಯ.ಅವರ ಬದುಕನ್ನು ಪುಸ್ತಕ ಪ್ರಕಟಣೆ ಮೂಲಕ ಹೊರತರುವ ಮುನವಳ್ಳಿಯ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಶ್ರ,ಮ ಸಾರ್ಥಕ.ಎಲ್.ಐ.ಲಕ್ಕಮ್ಮನವರ ತಮ್ಮ ಗುರುಮಾತೆಯ ಕುರಿತು ಮಾಡುತ್ತಿರುವ ಸೇವೆ ಅಮರ.ಇಂತಹ ಶಿಷ್ಯರನ್ನು ಪಡೆದ ಗುರುಮಾತೆಯ ಬದುಕು ಮಾದರಿಯಾಗಿದೆ.’ ಎಂದರು.

- Advertisement -

ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ‘ಇಂದು ಗುರುಮಾತೆ ಲೂಸಿ ಸಾಲ್ಡಾನಾ ಅವರ ದತ್ತಿ ಕಾರ್ಯಕ್ರಮ ನಿಜಕ್ಕೂ ಸಾರ್ಥಕ. ಅವರ ಕುರಿತು ಪುಸ್ತಕ ಪ್ರಕಟಿಸುವ ಜೊತೆಗೆ ಎಲೆಮರೆಯ ಕಾಯಿಯಂತಿರುವ ಶಿಕ್ಷಕರನ್ನು ಶ್ರಮಿಕರನ್ನು.ವೀಣಾ ಟೀಚರ್ ಕಿರು ಚಿತ್ರದ ತಯಾರಿಯಲ್ಲಿ ಭಾಗವಹಿಸಿದ ಕಲಾವಿದರ ಸನ್ಮಾನ ಮಾಡುವ ಮೂಲಕ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿರುವುದು ಒಂದು ಮಾದರಿ.ಇಂತಹ ಲೂಸಿ ಸಾಲ್ಡಾನಾ ಗುರುಮಾತೆಯ ಸೇವೆ ಸಾರ್ಥಕ” ಎಂದು ಮಾತನಾಡಿದರು.

ದತ್ತಿದಾನಿ ಲೂಸಿ ಸಾಲ್ಡಾನ ಮಾತನಾಡಿ, ತಮ್ಮ ಜೀವನದ ಕತೆಯನ್ನು ಸಂಕ್ಷಿಪ್ತವಾಗಿ ಹೇಳುತ್ತ ತಾವು ಶಿಕ್ಷಣ ಕಲಿಯುವ ಸಂದರ್ಭದಲ್ಲಿ ಸೌಲಭ್ಯಗಳ ಕೊರತೆ ಇತ್ತು.ಈಗಿನಂತೆ ಎಲ್ಲ ರೀತಿಯ ಅನುಕೂಲಗಳು ಇರಲಿಲ್ಲ.ಅದನ್ನು ಮನಗಂಡು ಬಡ ಮಕ್ಕಳ ಶಿಕ್ಷಣ ಸಲುವಾಗಿ ದತ್ತಿ ನೀಡಲು ಆರಂಭಿಸಿದ ಕುರಿತು ದತ್ತಿ ಆಶಯ ಹಂಚಿಕೊಂಡರು.

ಕನ್ನಡ ಭಾಷೆಯ ಅಭಿಮಾನದ ನುಡಿಗಳನ್ನು ಹೇಳುವ ಜೊತೆಗೆ ಲೂಸಿ ಅಮ್ಮನ ಬದುಕಿನ ಕುರಿತು ತನ್ನ ಮಾತುಗಳ ಮೂಲಕ ಎಲ್ಲರ ಗಮನ ಸೆಳೆದದ್ದು ಅನುಷಾ ಹಿರೇಮಠ ಮಾತುಗಳು ಪಲ್ಲವಿ ಚಾಕಲಬ್ಬಿಯ ಭರತನಾಟ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮೂಡಿ ಬಂದವು. ಇದೇ ಸಂದರ್ಭದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ವೀಣಾ ಟೀಚರ್ ಪೋಸ್ಟರ ಕೂಡ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಭೀಮಪ್ಪ ಕಾಸಾಯಿ, ವೀಣಾ ಟೀಚರ, ಅನುಷಾ ಹಿರೇಮಠ ಸೇರಿದಂತೆ ಅನೇಕರು ಇದ್ದರು.

ಎಲ್.ಆಯ್.ಲಕ್ಕಮ್ಮನವರ ಸ್ವಾಗತಿಸಿದರು.ವಾಯ್. ಬಿ. ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡುತ್ತ ‘ಈ ದಿನ ಲೂಸಿ ಸಾಲ್ಡಾನಾ ಅವರ ಭಾವಬಿಂದು ಪುಸ್ತಕ ಕುರಿತು ಹೇಳುತ್ತ ಹೊಸತನದ ತುಡಿತಗಳನ್ನು ತನ್ನ ಕವನದ ಮೂಲಕ ಹೊರತಂದ ಶಾಹೀನ್‌ಬಾನು ಬಳ್ಳಾರಿ ಅವರ `ಚಿಗುರೆಲೆ ಸಂಭ್ರಮ’ ಕವನ ಸಂಕಲನದ ಪರಿಚಯವನ್ನು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳುತ್ತ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.

ವೀರಣ್ಣ ಒಡ್ಡೀನ ನಿರೂಪಿಸಿದರು, ವೀಣಾ ಹೊಸಮನಿ ವಂದಿಸಿದರು.ಆರ್.ಎಂ.ಕುರ್ಲಿ ಪ್ರಶಸ್ತಿ ಕಾರ್ಯಕ್ರಮ ನಡೆಸಿದರು.ಕೃಷ್ಣಮೂರ್ತಿ ಕಟ್ಟಿಮನಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಕರ‍್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಹಿರೇಮಠ, ಧನವಂತ ಹಾಜವಗೋಳ ಮತ್ತು ಮಲ್ಲಿಕಾರ್ಜುನ ಉಪ್ಪಿನ, ಶಿಕ್ಷಕ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

- Advertisement -
- Advertisement -

Latest News

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯೋತ್ಸವ" ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group