spot_img
spot_img

ಬೆಳಗಾವಿ ತಾಲೂಕಾ ಕ.ಸಾ.ಪ ವತಿಯಿಂದ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ

Must Read

spot_img
- Advertisement -

ಶನಿವಾರ ದಿ.24 ರಂದು ಬೆ.11 ಗಂಟೆಗೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳಗಾವಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಪವೃಕ್ಷ ಕಾಲೇಜು ಕಾಕತಿ ಇವರ ಸಂಯುಕ್ತ ಆಶ್ರಯದಲ್ಲಿ’ ಹಳೆ ಬೇರು ಹೊಸ ಚಿಗುರು ‘ ವಿನೂತನ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಬೆಳಗಾವಿ ತಾಲೂಕ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಮೇದಾರ ಉದ್ಘಾಟಿಸಲಿದ್ದು ಎಸ್. ಪಿ.ನಂದನವಾಡ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಸುನಿಲ ಸುಣಗಾರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದಗೌಡ ಸುಣಗಾರ,ಮಾಜಿ ತಾ. ಪಂ. ಸದಸ್ಯ ಯಲ್ಲಪ್ಪ ಕೊಳೇಕರ ಆಗಮಿಸಲಿದ್ದು ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ದೇಯನ್ನವರ ಆಶಯ ನುಡಿಗಳನ್ನಾಡಲಿದ್ದಾರೆ.

- Advertisement -

ಸಾಹಿತಿ ಡಾ.ರೇಣುಕಾ ಕಠಾರಿ ಮತ್ತು ಕಾಕತಿ ಪೊಲೀಸ್ ನಿರೀಕ್ಷಕರಾದ ಆಯ್. ಎಸ್. ಗುರುನಾಥ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಹಾರೂಗೇರಿಯ ಆಜೂರ ಪ್ರತಿಷ್ಠಾನ ಕೊಡಮಾಡುವ 2021 ನೇ ಸಾಲಿನ ಉತ್ತಮ ಪುಸ್ತಕ ಪ್ರಶಸ್ತಿ ವಿಜೇತರಾದ ಸಾಹಿತಿ ಎಂ. ವೈ.ಮೆಣಸಿನಕಾಯಿ ಮತ್ತು ಡಾ. ದಯಾನಂದ ಧನವಂತ ಸೇರಿದಂತೆ ‘ರಾಜ್ಯಮಟ್ಟದ ಸ್ವಾಭಿಮಾನಿ ಶಾಲೆ’ ಪ್ರಶಸ್ತಿ ವಿಜೇತ ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಭೂತರಾಮನಹಟ್ಟಿ ಮತ್ತು’ ತಾಲೂಕ ಮಟ್ಟದ ಉತ್ತಮ ಶಾಲೆ’ ಪ್ರಶಸ್ತಿ ಗಳಿಸಿರುವ ಕಡೋಲಿ ಪ್ರೌಢಶಾಲೆಯ ಗುರು ಬಳಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜ್ಯೋತಿ ಶೇಟ, ಗಿರೀಶ ಜಗಜಂಪಿ ಶಂಕರ ಕುಲಕರ್ಣಿ, ನೀತಾ ಯಲಜಿ, ಮಹಾದೇವಿ ಬೆಳಕೂಡ, ಎಂ ಎ.ಮಾವುತ, ಎಂ.ವೈ. ಹಿರೇಮಠ, ಕೆ.ಜಿ ಕರಂಬಳಕರ, ನೂರುದ್ದೀನ್ ಗುರ್ಲಹೊಸೂರ ರವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಬೆಳಗಾವಿ ತಾಲೂಕು ಕಸಾಪ ಅಧ್ಯಕ್ಷ ಸುರೇಶ ಹಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group