spot_img
spot_img

ಕನ್ನಡ ಹಿಂದಿ ಭಾಷೆ ಮರೆತು ಉರ್ದು ಮೆರೆಸಿದ ಬೀದರ ಜಿಲ್ಲಾಡಳಿತ

Must Read

spot_img

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮರೆತು ಬಿಟ್ಟ ಸರ್ಕಾರ ಕೇವಲ ಉರ್ದುವನ್ನು ಮೆರೆಸುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಸಾಕ್ಷಿ ಎಂಬಂತೆ ಬೀದರ್ ಜಿಲ್ಲೆಯ ಗಡಿ ಶಹಾಪುರ ಗೇಟ್ ಸ್ವಾಗತ ಬೋರ್ಡ್ ಮೇಲೆ ಕನ್ನಡ ಇಂಗ್ಲಿಷ್ ಉರ್ದು ಭಾಷೆ ಬರೆದಿದ್ದಾರೆ ಆದರೆ ನಮ್ಮ ರಾಷ್ಟ್ರ ಭಾಷೆ ಹಿಂದಿ ಹಾಕಲು ಜಿಲ್ಲಾ ಆಡಳಿತ ಹಿಂದೇಟು ಹಾಕುತ್ತಿದೆ.

ಇತ್ತ ರಾಷ್ಟ್ರದಲ್ಲಿ ಹಿಂದಿ ದಿವಸ ಆಚರಣೆ ಮಾಡುವತ್ತ ಎಲ್ಲರೂ ಯೋಚನೆ ಮಾಡುತ್ತಿದ್ದಾರೆ,  ರಾಷ್ಟ್ರ ಭಾಷೆ ಹಿಂದಿಗೆ ಮೊದಲ ಆದ್ಯತೆ ಎಂದು ಭಾರತದ ಗೃಹ ಮಂತ್ರಿ ಅಮಿತ್ ಶಾ ಹೇಳುತ್ತಾರೆ. ಆದರೆ ಗಡಿ ಜಿಲ್ಲೆ ಬೀದರ್ ನಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಮಾತ್ರ ರಾಷ್ಟ್ರ ಭಾಷೆಗೆ ಅವಮಾನ ಮಾಡತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನೊಂದು ಕಡೆ ನೊಡಿದರೆ ಜಿಲ್ಲಾ ಆಡಳಿತ ಕೂಡ ಹಿಂದಿ ಭಾಷೆಯ ಬಗ್ಗೆ ನಿಷ್ಕಾಳಜಿ ಮಾಡುತ್ತಿದೆ.

ಬೀದರನ ಈ ಗ್ರಾಮದಲ್ಲಿ ಉರ್ದು ಶಾಲೆಯಲ್ಲಿರುವ ಕನ್ನಡ ಶಿಕ್ಷಕರಿಗೆ  ಸುಮಾರು ಐದು  ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಾಗಿ ಪಾಠಮಾಡಲು ಬರುತ್ತಿಲ್ಲ ಆದರು ಅವರು ವೃತ್ತಿಯಲ್ಲಿ ಹಾಗೆ ಮುಂದುವರೆಯುತ್ತಿದ್ದಾರೆ.

ಹೌದು, ಬೀದರ್ ತಾಲ್ಲೂಕಿನ ಮಗ್ದಾಳ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಿದ್ದರೂ  ಅವರಿಗೆ ಹಲವು  ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಾಗಿ ಪಾಠಮಾಡಲು ಬರುತ್ತಿಲ್ಲ ಆದರು ಅವರೆ ಶಿಕ್ಷಕರಾಗಿ ಮುಂದುವರೆಯುತ್ತಿದ್ದಾರೆ ಅವರಲ್ಲಿ ನಮ್ಮ ಮಕ್ಕಳು ಕನ್ನಡ ಕಲಿತು ಪರೀಕ್ಷೆ ಬರೆಯಲು ಸಾಧ್ಯವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಶಾಲೆಯಲ್ಲಿರುವ ಕೆಲವೊಂದು ಕೊಠಡಿ ಸೋರುತ್ತಿವೆ ಮತ್ತು ಶಾಲೆಯ ಮುಂಭಾಗದಲ್ಲಿ ಸ್ವಚ್ಛತೆ ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

ಗಡಿ ಜಿಲ್ಲೆಯಲ್ಲಿ ಒಂದು ಕಡೆ ರಾಷ್ಟ್ರ ಭಾಷೆ ಹಿಂದಿಗೆ ಅವಮಾನ ಉರ್ದು ಮೇಲೆ ಪ್ರೀತಿ .ಇನ್ನೊಂದು ಕಡೆ ಉರ್ದು ಶಾಲೆಯಲ್ಲಿ ಕನ್ನಡ ಕಲಿಯಲು ಕನ್ನಡ ಶಿಕ್ಷಕರು ಬೇಕು ಎಂದು ಮನವಿ.

ಇಷ್ಟೆಲ್ಲ ಕಣ್ಣಿಗೆ ಕಾಣಿಸುತ್ತಿದ್ದರು ಸಹ‌ ಜಿಲ್ಲಾಡಳಿತ ಮಾತ್ರ ಸುಮ್ಮನೆ ಕುಳಿತಿದೆಯೆಂಬುದಾಗಿ ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಜಿಲ್ಲಾ ಆಡಳಿತ  ಈ ವ್ಯವಸ್ಥೆ ಸುಧಾರಣೆ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕು.


ಈ ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಕನ್ನಡ ಶಿಕ್ಷಕರ ಬದಲಾವಣೆ ಮಾಡಲು  ಹಲವುಬಾರಿ ಮನವಿ ಮಾಡಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದೆ ರೀತಿ ನಡೆದರೆ ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ  ಫೇಲ್ ಆಗುವುದು ಖಚಿತ.

ಕರ್ನಾಟಕದ ಕಿರೀಟ ಬೀದರ್ ಜಿಲ್ಲೆಯ ಮಕ್ಕಳಿಗೆ ಕನ್ನಡ ಬರುವುದಿಲ್ಲ ಎಂದರೆ ಆ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿಸಿದೆ.

-ಎಸ್ ಡಿ ಎಂ ಸಿ ಅಧ್ಯಕ್ಷ ಮೊಯಿನ್


ವರದಿ : ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!