spot_img
spot_img

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Must Read

- Advertisement -

ಮೈಸೂರು -ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ‘ಈ ನೆಲ ಈ ಜಲ ಈ ಕಾಡು’ ಎಂಬ ಪರಿಸರ ಗೀತೆಯ ಮೂಲಕ ಪ್ರಕೃತಿಯನ್ನು ಕುರಿತು ಪ್ರಾರ್ಥನೆ ಸಲ್ಲಿಸಿದರು. ನಂತರ ಸಂಸ್ಥೆಯ ಅಧ್ಯಕ್ಷರಾದ ಟಿ. ರಂಗಪ್ಪರವರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ನಾವು ಪರಿಸರವನ್ನು ರಕ್ಷಿಸಬೇಕು ‘ಹಸಿರೇ ನಮ್ಮ ಉಸಿರು’ ಎಂಬ ಹೇಳಿಕೆಯಂತೆ ಮರಗಿಡಗಳ್ಳು ಬೆಳೆಸಿ ಈ ನಾಡು ಸಸ್ಯಶ್ಯಾಮಲವಾಗುವಂತೆ ಕಾಪಾಡಬೇಕು ಎಂದು ವಿದ್ಯಾರ್ಥಿಗಳಲ್ಲಿ ಪರಿಸರದ ಮೇಲೆ ಪ್ರೀತಿಮೂಡುವಂತೆ ಕಿವಿಮಾತು ಹೇಳಿದರು. ಈ ಶಾಲೆಯ ಹಲವಾರು ಪ್ರತಿಭಾವಂತ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟು ಪರಿಸರವನ್ನು ಪ್ರತಿನಿಧಿಸುವಂತೆ ವೇದಿಕೆಯನ್ನು ಅಲಂಕರಿಸಿದರು. ಇನ್ನು ಕೆಲವು ಮಕ್ಕಳು ಪರಿಸರ ಸಂರಕ್ಷಣೆಯ ವಿವಿಧ ನಾಟಕಗಳನ್ನು ತಮ್ಮ ನಟನಾ ಸಾಮಥ್ರ್ಯದಿಂದ ಎಲ್ಲರ ಮನಸ್ಸಲ್ಲೂ ಹಚ್ಚ ಹಸಿರಾಗಿ ಉಳಿಯುವಂತೆ ಪ್ರಕೃತಿ ದೇವಿಯ ಪ್ರಾಮುಖ್ಯತೆ ಹಾಗೂ ವೈಶಿಷ್ಠತೆ ಮೆರೆಯುವಂತೆ ಅಭಿನಯಿಸಿದರು.

- Advertisement -

ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಮಕ್ಕಳು ತಮ್ಮ ಮುದ್ದು ನುಡಿಗಳಿಂದ ಮಾತನಾಡುತ್ತಾ, ಖುಷಿ ಖುಷಿಯಾಗಿ ತಾವೇ ಬೀಜ ಹಾಕಿ ಬೆಳೆಸಿದ ಗಿಡಗಳ ವಿತರಣೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕೆಲವು ಮಕ್ಕಳು ‘ರಾಷ್ಟ್ರೀಯ ಸೇವೆ’ ಎನ್ನುವ ಪರಿಸರ ಗೀತೆಯನ್ನು ಹಾಡುವ ಮೂಲಕ ದೇಶದ ಮಕ್ಕಳಾದ ನಾವು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಸುಮಧುರವಾಗಿ ಹಾಡಿದರು. ನಂತರ ಈ ಶಾಲೆಯ ಆಡಳಿತಾಧಿಕಾರಿಯಾದ ಶ್ರೀಮತಿ ಕಾಂತಿನಾಯಕ್‍ರವರು, ಪರಿಸರವು ನಮಗೆ ಶಿಕ್ಷಕನಿದ್ದಂತೆ, ವಿವಿಧ ರೀತಿಯ ಉತ್ತಮ ಶಿಕ್ಷಣವನ್ನು ಅದು ನೀಡುತ್ತದೆ. ವಿಶ್ವದ ಜನರೆಲ್ಲರೂ ಇದರ ಉಳಿವಿಗಾಗಿ ಶ್ರಮಿಸಬೇಕು. ಕಾಡುಗಳನ್ನು ನಾಶ ಮಾಡದೆ ಅಭಿವೃದ್ಧಿಪಡಿಸಬೇಕು. ‘ಮನೆಗೊಂದು ಮರ ಊರಿಗೊಂದು ವನ’ ಎಂಬ ನಾಣ್ಣುಡಿಯಂತೆ ನಾವೆಲ್ಲರೂ ಗಿಡಗಳನ್ನು ನೆಟ್ಟು ಮಗುವನ್ನು ಜೋಪಾನ ಮಾಡುವಂತೆ ಕಾಪಾಡಬೇಕು. ಆ ಗಿಡವು ಬೆಳೆದು ಹೆಮ್ಮರವಾಗಿ ನಮ್ಮೆಲ್ಲರನ್ನೂ ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸುತ್ತದೆ. ಆದ್ದರಿಂದ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು. ನಂತರ ವಂದನಾರ್ಪಣೆ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮವು ಸಮಾಪ್ತಿಯಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪರಿಸರದ ಜಾಗೃತಿ ಮೂಡಿಸುವ ಕೆಲವು ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಹರ್ಷಿತಾ, ಮುಖ್ಯೋಪಾಧ್ಯಾಯ ಮೊಹಮ್ಮದ್ ಫಾರೂಕ್, ಶಿಕ್ಷಕ ವೃಂದ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು. .

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group