spot_img
spot_img

ಭರದಿಂದ ಸಾಗಿದ ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ

Must Read

- Advertisement -

ಹುಬ್ಬಳ್ಳಿ: ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ.

ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ ಮುಂದಾಗಿದ್ದಾರೆ. ಅನಿಮೇಶನ್ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನು ಮಾಡಲು ತಾಳ್ಮೆ ಹೆಚ್ಚು ಬೇಕು.ಈ ಸಿನಿಮಾ ಮಾಡಲು ಸಮಯವೂ ಹೆಚ್ಚು ಬೇಕು. ನಮ್ಮ ಜನ ಇಂತಹ ಸಿನಿಮಾ ಮಾಡಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳಬೇಕು ಎಂಬ ಉದ್ದೇಶ ನಿರ್ದೇಶಕರದ್ದು ಇದೆ. ವಿಶೇಷ ಎಂದರೆ ಈ ಸಿನಿಮಾಕ್ಕೆ ಬಾಲಿವುಡ್, ಹಾಲಿವುಡ್‌ನ ಹಲವಾರು ಟೆಕ್ನಿಶಿಯನ್‌ಗಳು ಕಾರ್ಯ ಮಾಡುತ್ತಿದ್ದಾರೆ. ಈ ಅನಿಮೇಶನ್ ಸಿನಿಮಾ ಉತ್ತರ ಕರ್ನಾಟಕದಲ್ಲೇ ಮೊದಲನೆಯದಾಗಿದೆ.

- Advertisement -

ಕನ್ನಡ, ತೆಲಗು, ತಮಿಳ್, ಮಲೆಯಾಳಮ್, ಹಿಂದಿ, ಇಂಗ್ಲೀಷ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದ್ದು, ವಿದೇಶಗಳಲ್ಲಿಯೂ ಬಿಡುಗಡೆ ಮಾಡಬೇಕು , ಅನಿಮೇಶನ್ ಕಲಿಯುವ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗಿದೆ ಎಂದು ನಿರ್ದೇಶಕ ಬಾಬಾ ಹೆಮ್ಮೆಯಿಂದ ಹೇಳುತ್ತಾರೆ.

ಉತ್ತರ ಕರ್ನಾಟಕ ೪೦೦ ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಇಟ್ಟುಕೊಂಡು ಕತೆ ಸಿದ್ಧಪಡಿಸಲಾಗಿದೆ. ಕುಗ್ರಾಮದಿಂದ ಯುವಕನೊಬ್ಬ ಹುಬ್ಬಳ್ಳಿಗೆ ಕೆಲಸ ಅರಸಿಕೊಂಡು ಬರುತ್ತಾನೆ. ಆದರೆ ಅಲ್ಲಿ ನಡೆಯುವ ಅನ್ಯಾಯ ಮತ್ತು ಅಧರ್ಮಗಳ ವಿರುದ್ಧ ಸಿಡಿದೇಳುವುದು ಈ ಸಿನಿಮಾದ ತಿರುಳು. ಬಾಬಾ ಅವರು ಕಥೆ, ಚಿತ್ರಕಥೆ ನಿರ್ದೇಶನದ ಜೊತೆಗೆ ಗ್ರಾಫಿಕ್ ಸುಪರವೈಜರ್ ಆಗಿದ್ದಾರೆ. ಸಂಭಾಷಣೆಯನ್ನು ವಿಕ್ರಮ ಕುಮಠಾ ಬರೆದಿದ್ದು, ಹಿನ್ನಲೆ ಸಂಗೀತವನ್ನು ಮಯಾಂಕ ಸೋಲಂಕಿ ನೀಡುತ್ತಿದ್ದಾರೆ. ೩ಡಿ ಕ್ಯಾಮರಾಮನ್ ಆಗಿ ಬಾಬಾ ಹಾಗೂ ಸಮರ್ಥ ಕಾರ್ಯ ಮಾಡುತ್ತಿದ್ದು ,೩ ಡಿ ಸಹಾಯಕ ಗ್ರಾಫಿಕ್ಸ್ ಸುಪರವೈಸರ್ ಆಗಿ ಇಸ್ರೇಲ್ ಸೋಲಿಟೆಡೊ (ವೆನಿಜುವೆಲಾ) ಕಾರ್ಯ ನಿರ್ವಹಿಸುತ್ತಿದ್ದಾರೆ. ೩ಡಿ ವಾಸ್ತುಶಿಲ್ಪ ವಿನ್ಯಾಸ ರಚನೆಯನ್ನು ಅಭಿಷೇಕ ಕುಲಕರ್ಣಿ, ದೀಪಕ ಕುಲಕರ್ಣಿ, ಚಂದ್ರಶೇಖರ, ಮಾಡುತ್ತಿದ್ದು , ಸಂಕಲನ ಬಾಬಾ, ಜರ್ಮನಿಯ ರಿಚರ್ಡ್, ಪೋಸ್ಟರ್ ಡಿಸೈನ್‌ನನ್ನು ಉತ್ತರ ಪ್ರದೇಶದ ನಿಖಿಲ್ ಕುಮಾರ, ೩ಡಿ ವಸ್ತ್ರ ವಿನ್ಯಾಸವನ್ನು ರೂಪಶ್ರೀ ಪಾಟೀಲ್ ,೭.೧ ಸರೌಂಡ್ ಸೌಂಡ್ ಮಿಕ್ಸಿಂಗ್, ಡೆಸ್ಪಿಕ್ ಝಿ (ಸರ್ಬಿಯಾ) , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜೀಹಾಳ, ಡಾ.ವೀರೇಶ್ ಹಂಡಗಿ ಅವರದಿದೆ.

ಎನ್‌ಕೆಎಂಪಿಎಸ್ ಪ್ರೊಡಕ್ಷನ್ ಬ್ಯಾನರ್‌ನಡಿ ಸಿನಿಮಾ ಸಿದ್ಧಗೊಳ್ಳುತ್ತಿರುವ ಸಿನಿಮಾದ ಟೈಟಲ್ ಟೀಸರ್ ಹಾಗೂ ಪೋಸ್ಟರಗಳು ಎಲ್ಲೆಡೆ ವೈರಲ್ ಆಗಿದೆ. ಡಿಸೆಂಬರ್ ೨೪ ರಂದು ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಬಾಬಾ ಹೇಳುತ್ತಾರೆ. ಕನ್ನಡದಲ್ಲಿ ಇದೊಂದು ವಿನೂತನ ದಾಖಲೆಯಾಗುವುದರಲ್ಲಿ ಸಂಶಯವಿಲ್ಲ ಎಂಬುದು ಚಿತ್ರತಂಡದ ಮಾತು.

- Advertisement -

ಡಾ.ಪ್ರಭು ಗಂಜಿಹಾಳ-9448775346

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group