- Advertisement -
ಸಿಂದಗಿ: ಮತಕ್ಷೇತ್ರದ ಕೊರಹಳ್ಳಿ, ಆಹೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಯವರ ನೇತೃತ್ವದಲ್ಲಿ ನಾಯಕರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿಯ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಾಗಪ್ಪಗೌಡ ಪಾಟೀಲ, ರಮಜಾನ್ ಸಾಬ್ ದುಮ್ಮದ್ರಿ, ಶಿವಾನಂದ ಪೀರಶೆಟ್ಟಿ, ಅಮೃತಗೌಡ ಬಿರಾದಾರ, ಹಣಮಂತ ಪೀರಶೆಟ್ಟಿ, ಮಾಂತೇಶ ಬಿರಾದಾರ, ಶ್ರೀಶೈಲ ಹಡಪದ, ಗಂಗಣ್ಣ ಪೀರಶೆಟ್ಟಿ, ದಾವಲಸಾಬ ನನ್ನೆಗಾವಿ, ರಾಮು ಗುಡಿಮನಿ, ಯೋಗೆಪ್ಪ ವಡೆಯರ, ಗಂಗಣ್ಣ ಮಾಗಣಗೇರಿ, ಬಸಣ್ಣ ಕಡಗಂಚಿ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.