spot_img
spot_img

ಸಿಂದಗಿ: ನೂತನ ಅಧ್ಯಕ್ಷರ ಅವಿರೋಧ ಆಯ್ಕೆ

Must Read

spot_img

ಸಿಂದಗಿ: ಪುರಸಭೆ ಅಧ್ಯಕ್ಷರ ಹುದ್ದೆಗೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಗೆ ಒಟ್ಟು 23 ಸದಸ್ಯರಲ್ಲಿ 22 ಸದಸ್ಯರು ಹಾಜರಾಗಿ 11ನೇ ವಾರ್ಡ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಅವರು ಗೈರು ಉಳಿದು ಓರ್ವ ಅಭ್ಯರ್ಥಿ ಹಣಮಂತ ಸುಣಗಾರ ಅವರು ನಾಮನಿರ್ದೇಶನ ಪತ್ರ ನೀಡಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ ವ ಚುನಾವಣಾಧಿಕಾರಿ ನಿಂಗಣ್ಣ ಬಿರಾದಾರ ಘೋಷಣೆ ಮಾಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ಸಾಮಾನ್ಯ ಮೀಸಲಾತಿ ಅಡಿಯಲ್ಲಿ ನಡೆದಿದ್ದು ಬೆಳಿಗ್ಗೆ 10- 30ರಿಂದ 11-30ರ ವರೆಗೆ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದರು. ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 12ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆದು ಅವರಿಗೆ ಉಮಾದೇವಿ ಶರಣಪ್ಪ ಸುಲ್ಪಿ ಸೂಚಕರಾಗಿ, ಕಲಾವತಿ ಅನೀಲ ಕಡಕೋಳ ಅನುಮೋದನೆಗೆ ಸಹಿ ಹಾಕಿದ್ದರು. ಓರ್ವ ಸದಸ್ಯ ನಾಮನಿರ್ದೇಶನ ಪತ್ರ ನೀಡಿದ್ದರಿಂದ ಅವಿರೋಧವಾಗಿ ಅಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. 

ಆಕ್ರೋಶ: ಚುನಾವಣಾಧಿಕಾರಿಯಾಗಿ ಮಾನ್ಯ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದು ಆದರೆ ಇಂದು ನಡೆದ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯ ಕೋಣೆಯಲ್ಲಿ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರ ಪಾತ್ರ ಏನು ? ಆದಾಗ್ಯೂ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಆದರೆ ತಾನೊಬ್ಬಳು ಅಧಿಕಾರಿಯೆನ್ನುವುದನ್ನು ಮರೆತು ರಾಜಕಾರಣಿಗಳಂತೆ ವರ್ತನೆ ಮಾಡುತ್ತ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದು ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ವರದಿ ಸಲ್ಲಿಸುವೆ ಎಂದು ಚುನಾವಣಾಧಿಕಾರಿ ನಿಂಗಣ್ಣ ಬಿರಾದಾರ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಕೆಲವೇ ತಿಂಗಳ ಅವಧಿಗಾಗಿ ಚುನಾವಣೆಯು ಪಟ್ಟಣದ ಎಲ್ಲ ಸದಸ್ಯರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ಅವರು ಒಬ್ಬ ವ್ಯಕ್ತಿಯಾಗದೇ ಎಲ್ಲರ ಶಕ್ತಿಯಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರು ಸಹಕಾರ ನೀಡೋಣ ಎಂದರು. 

ಮಾಜಿ ಅದ್ಯಕ್ಷ ಡಾ. ಶಾಂತವೀರ ಮನಗೂಳಿ ಮನಗೂಳಿ ಅವರ ಎಲ್ಲ ಸದಸ್ಯರು ಸದ್ಯ ಆಯ್ಕೆಯಾದ ಹಣಮಂತ ಸುಣಗಾರ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!