spot_img
spot_img

ಓತಿಹಾಳ ಶಾಲಾ ವಿದ್ಯಾರ್ಥಿಗಳಿಗೆ ದ್ರಾಕ್ಷಿ ವಿತರಣೆ

Must Read

spot_img

ಸಿಂದಗಿ: ಸನಾತನ ಧರ್ಮದಲ್ಲಿ ದಾನ ಧರ್ಮ ಪರೋಪಕಾರಕ್ಕೆ  ವಿಶೇಷ ಮಹತ್ವವಿದೆ ಎಂದು ಓತಿಹಾಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ  ಶಿಕ್ಷಣ ಪ್ರೇಮಿ ಶಿವಾನಂದ ಸಾಲಿಮಠ ಹೇಳಿದರು.

ತಾಲೂಕಿನ ಓತಿಹಾಳ ಗ್ರಾಮದ  ಪ್ರಗತಿ ಪರ ರೈತರು ಮಹಾದಾನಿ ರವಿ ಗೌಡ ಸಿದ್ದನಗೌಡ ಪಾಟೀಲ ಅವರ ತಂದೆಯವರಾದ ದಿವಂಗತ ಶ್ರೀ ಸಿದ್ದನಗೌಡ ಬಂಗಾರಪ್ಪಗೌಡ ಪಾಟೀಲರವರ ಸ್ಮರಣಾರ್ಥವಾಗಿ ಅವರ ತೋಟದಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ಸರ್ಕಾರಿ ಪ್ರೌಢ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮತ್ತು ಶ್ರೀ ಸಿದ್ದಲಿಂಗ ಮಹಾರಾಜರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ  12  ಕ್ವಿಂಟಲ್ ದ್ರಾಕ್ಷಿಯನ್ನು ವಿತರಿಸಿ ಅವರು ಮಾತನಾಡಿ ಧರ್ಮಗ್ರಂಥಗಳಲ್ಲಿ, ದಾನವನ್ನು ಮಾನವ ಜೀವನದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ ಅದರೊಂದಿಗೆ  ದಾನ ಧರ್ಮ ಮಾಡುವ ವ್ಯಕ್ತಿಗೆ ವರ್ತಮಾನದ ಜೊತೆಗೆ ಮುಂದಿನ ಜನ್ಮದಲ್ಲಿ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆ  ಇದೆ ಆದರಿಂದ  ಗ್ರಾಮದ ರವಿಗೌಡ ಪಾಟೀಲರು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸಿಹಿಯಾದ ಹಣ್ಣು ಹಂಪಲು ವಿತರಿಸುವ ಶುಭ ಕಾರ್ಯ ಮಾಡುವ ಮೂಲಕ ಹಿರಿಯರ ಸನ್ಮಾರ್ಗದಲ್ಲಿ ನಡೆಯುತ್ತಾ ಬಂದಿದ್ದಾರೆ ಎಂದರು.

ಸರಳ ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಅಪಾರ ಪ್ರಮಾಣದ ವಿದ್ಯಾರ್ಥಿಗಳು ಇದ್ದರು.ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಹಾಗೂ ಶಿಕ್ಷಕ ಸಾಹಿತಿ ಬಸವರಾಜ ರಾ ಅಗಸರ .ಸರ್ಕಾರಿ ಪ್ರೌಢ ಶಾಲೆ.ಸರ್ಕಾರಿ  ಪ್ರಾಥಮಿಕ ಶಾಲೆ.ಸರ್ಕಾರಿ ಉರ್ದು ಶಾಲೆ. ಹಾಗೂ ಸಿದ್ಧಲಿಂಗ ಮಹಾರಾಜರ  ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಗ್ರಾಮಸ್ಥರು ಪಾಲಕರು ಹಾಗೂ ಅಂಗನವಾಡಿ ಕೇಂದ್ರ ಕಾರ್ಯಕರ್ತರು ಅಭಿನಂದನೆ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!