Homeಸುದ್ದಿಗಳುಕುಮಾರೇಶ್ವರ ರಥಕ್ಕೆ ಅದ್ದೂರಿ ಸ್ವಾಗತ

ಕುಮಾರೇಶ್ವರ ರಥಕ್ಕೆ ಅದ್ದೂರಿ ಸ್ವಾಗತ

ಸಿಂದಗಿ: ವಿರಾಟಪುರ ವಿರಾಗಿ ಚಲನಚಿತ್ರದ ಟೀಸರ್ ಬಿಡುಗಡೆಯ ನಿಮಿತ್ತ ಗ್ರಾಮದ ಮೂಲಕ ಜಿಲ್ಲೆಗೆ ಆಗಮಿಸಿದ ಕುಮಾರೇಶ್ವರ ರಥಕ್ಕೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ದೇವಣಗಾಂವ ಗ್ರಾಮದ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದ ಮೂಲಕ ಮುಖ್ಯ ಬಜಾರದವರೆಗೆ ಬಾಜಿ ಬಾರಿಸುತ್ತಾ, ಜೈಕಾರದೊಂದಿಗೆ ಮಹಾಲಕ್ಷ್ಮಿ ದೇವಸ್ಥಾನದ ಆವರಣಕ್ಕೆ ರಥ ಆಗಮಿಸಿತು. ಅಲ್ಲಲ್ಲಿ ಮಹಿಳೆಯರು ನೀರು ಹಾಕಿ, ಆರತಿಮಾಡಿ ಟೆಂಗುಒಡೆದು ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಚಲನಚಿತ್ರದ 15 ನಿಮಿಷಗಳ ತುಣುಕುಗಳನ್ನು ಜನರು ವೀಕ್ಷಿಸಿದರು.

ಪಂ.ಸೋಮನಾಥ ಶಾಸ್ತ್ರೀಜಿ, ಚಿನ್ನಯ್ಯ ಮಠಪತಿ, ಸಿದ್ದಯ್ಯ ಮಠಪತಿ, ಮುಖಂಡ ಶ್ರೀಮಂತಗೌಡ ನಾಗೂರ, ಪ್ರಭುಗೌಡ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ಶರಣಪ್ಪ ಗುಬ್ಬೇವಾಡ, ಮುತ್ತುರಾಜ ಕಲಶೆಟ್ಟಿ, ವಿಠ್ಠಲ ಯರಗಲ್, ದವಲಪ್ಪ ಬಡದಾಳ, ನಿಂಗಪ್ಪ ಅಳ್ಳಗಿ, ರಮೇಶ ಸೊಡ್ಡಿ, ಪಂಚಾಕ್ಷರಿ ಖೇಳಗಿ, ಷಣ್ಮುಖಪ್ಪ ಸೋಮನಾಯಕ, ಸಿದ್ದು ಗಂಗನಳ್ಳಿ, ಪ್ರಕಾಶ ಗಂಗನಳ್ಳಿ, ಜಗನ್ನಾಥ ಸೊಡ್ಡಿ, ಲಕ್ಷ್ಮಿಪುತ್ರ ಮಠಪತಿ, ಶೇಖರ ರೊಟ್ಟಿ, ಗಾಲಿಬ ನಾಗಾವಿ, ಶಿವು ನಾಗಾವಿ, ಶಿವಪುತ್ರ ಗಬಸಾವಳಗಿ, ಸಿದ್ದಾರ್ಥ ಮೇಲಿನಕೇರಿ, ಪ್ರದೀಪ ಗಾಣಿಗೇರ, ಅಣವೀರಪ್ಪ ಸುತಾರ, ಗುರು ನಿಂಬಾಳ, ಶ್ರೀಶೈಲ ಹಿಂಚಗೇರಿ, ಮಲ್ಲಿಕಾರ್ಜುನ ಜೋಗೂರ ಇದ್ದರು.

RELATED ARTICLES

Most Popular

error: Content is protected !!
Join WhatsApp Group