spot_img
spot_img

‘ಸುಳಿ’ ಚಲನಚಿತ್ರಕ್ಕೆ ಮುಹೂರ್ತ; ಮಂಡ್ಯ : ಸಹಸ್ರಕೋಟಿ ಮೂವೀ

Must Read

- Advertisement -

ಎಂಟರ್‌ಟೈನ್‌ಮೆಂಟ್ ಮಂಡ್ಯ ಅವರ “ಸುಳಿ” ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಹುಲಿಯೂರುದುರ್ಗದ ಶ್ರೀ ಹೇಮಗಿರಿ ವರದರಾಜಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಅರ್ಚಕರಾದ ಪ್ರಕಾಶ ಅವರು ಆರಂಭ ಫಲಕ ತೋರಿಸಿದರು. 

‘ಶ್ರೀ ಕಬ್ಬಾಳಮ್ಮನ ಮಹಿಮೆ’, ‘ಮನೆ’ ಮತ್ತು ‘ಬ್ಯಾಂಕ್ ಲೋನ್’ ಚಿತ್ರದ ನಿರ್ದೇಶಕರಾದ ರಶ್ಮಿ ಎಸ್. ರವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು ಇದು ಅವರ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರವು ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಮೂಲ ಚಿನ್ನಪ್ಪ ಭಾರತಿಯವರು ಬರೆದಿರುವ ತಮಿಳಿನ ಪವಳಾಯಿ ಮತ್ತು ಕನ್ನಡಕ್ಕೆ ಅದೇ ಹೆಸರಿನಲ್ಲಿ ಅನುವಾದ ಮಾಡಿರುವ ಡಾ.ಕೆ ಪದ್ಮನಾಭ ಉಡುಪ ಅವರದ್ದಾಗಿದೆ.

- Advertisement -

ಈ ಚಿತ್ರದ ಕಥೆಯು ೧೯೭೦ನೇ ಇಸವಿಯಲ್ಲಿ ನಡೆಯುವ ಕಥಾ ಹಂದರವಿದ್ದು ಇಡೀ ಚಿತ್ರದ ಕಥೆಯು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಪ್ರತಿಯೊಬ್ಬ ವ್ಯಕ್ತಿಯು ಜೀವನವೆಂಬ ಸುಳಿಯಲ್ಲಿ ಸಿಲುಕಿದ ಮೇಲೆ ಅದೆಲ್ಲ ಸುಳಿಗಳಿಂದ ಹೇಗೆ ಮುಕ್ತಿ ಪಡೆಯುತ್ತಾನೆ? ಹೇಗೆ ಎಲ್ಲಾ ಸಂಬಂಧಗಳನ್ನು ನಿಭಾಯಿಸುತ್ತಾನೆ? ಎಂಬುದೇ ಚಿತ್ರದ ಕಥಾಹಂದರ.

ಚಿತ್ರದಲ್ಲಿ ಪ್ರಮುಖ ಕಲಾವಿದರ ಜೊತೆಗೆ ಶಿವಕುಮಾರ್ ಆರಾಧ್ಯ, ಶಂಕರ್ ನಾರಾಯಣ್, ಪ್ರಮೀಳಾ ಸುಬ್ರಮಣ್ಯ, ಕಾವ್ಯ  ಮೊದಲಾದವರ ತಾರಾಗಣವಿದೆ. ಮಂಡ್ಯ, ಮದ್ದೂರು, ರಾಮನಗರದ ಸುತ್ತಮುತ್ತ  ಒಟ್ಟು ೨೫ ದಿನಗಳ ಕಾಲ ಚಿತ್ರೀಕರಣ ಒಂದೇ ಹಂತದಲ್ಲಿ ನಡೆಯಲಿದೆ ಎಂದು ನಿರ್ಮಾಪಕ ಗೌಡ ತಿಳಿಸಿದರು.  

ಈ ಚಿತ್ರಕ್ಕೆ ಎರಡು ಹಾಡುಗಳಿದ್ದು ಮೊದಲ ಬಾರಿಗೆ ಎನ್ ರಾಜ್ ರವರು ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಕ್ರಂ ಯೋಗಾನಂದ್  ಛಾಯಾಗ್ರಹಣ, ಚಿತ್ರಕಥೆ, ಸಂಕಲನ ಮತ್ತು ತಾಂತ್ರಿಕ ನಿರ್ದೇಶನವನ್ನು ಮುತ್ತುರಾಜು ಟಿ, ಸಾಹಿತ್ಯ, ಸಂಭಾಷಣೆ ಮತ್ತು ಸಹ ನಿರ್ದೇಶನವನ್ನು ಸತೀಶ್ ಜೋಶಿ ಹಾವೇರಿಯವರು ವಹಿಸಿಕೊಂಡಿದ್ದಾರೆ.

- Advertisement -

ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಡಾ ಪ್ರಭು ಗಂಜಿಹಾಳ, ಡಾ ವೀರೇಶ ಹಂಡಗಿ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ ಪಿ ಅವರದ್ದಾಗಿದೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಚಿಕ್ಕಹೊಸಗಾವಿಯ ಬೆಟ್ಟಸ್ವಾಮಿ ಗೌಡರವರು (ಬಿ ಎಸ್ ಗೌಡ) ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ ಎಂದು ನಿರ್ದೇಶಕಿ ರಶ್ಮಿ ಚಿತ್ರದ ಕುರಿತು ಹೇಳಿದರು. 

ಮುಹೂರ್ತದ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ  ಚಿತ್ರತಂಡದಿಂದ ಪುಷ್ಟಗೌರವ ಸಲ್ಲಿಸಲಾಯಿತು. ಚಿತ್ರದಲ್ಲಿ ಅಭಿನಯಿಸುತ್ತಿರುವ ಶಿವಕುಮಾರ್ ಆರಾಧ್ಯ ಡಾ ಕೆಂಚನೂರು ಶಂಕರ, ಲಕ್ಷಿತಾ ಗಂಗಾವತಿ, ಜಯಂತ್, ಸೋಮಶೇಖರ್ ಮತ್ತು ಚಿತ್ರತಂಡದ ತಾಂತ್ರಿವರ್ಗ, ಪ್ರಮುಖರು ಮುಹೂರ್ತ ಸಮಾರಂಭದಲ್ಲಿ  ಪಾಲ್ಗೊಂಡಿದ್ದರು.


ವರದಿ: ಡಾ.ಪ್ರಭು ಗಂಜಿಹಾಳ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group