ವಿದ್ಯಾರ್ಥಿನಿಗೆ ಭಾರತಿಗೆ ಸನ್ಮಾನ

Must Read

ಬಾಗಲಕೋಟೆ : ತಾಲೂಕಿನ ಬೆನಕಟ್ಟಿಯ ಸದ್ಬೋಧನ ಪೀಠದ ದತ್ತು ವಿದ್ಯಾರ್ಥಿನಿ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕುಮಾರಿ ಭಾರತಿ ಅರ್ಜುನ ಪರೀಟ ಈಗ ಇಂಜನಿಯರಿಂಗ್ ಪದವಿ ಮುಗಿಸಿ ಸಾಪ್ಟವೇರ್ ಇಂಜನೀಯರಾಗಿ ಬೆಂಗಳೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ. ಇದು ನಮ್ಮ ಪೀಠಕ್ಕೆ ಹೆಮ್ಮೆಯ ಸಂಗತಿ. ನಮ್ಮ ಸಮಾಜದ ಹಿರಿಯ ವೈದ್ಯ, ಬಾಗಲಕೋಟೆಯ ಚಿಕ್ಕಮಕ್ಕಳ ತಜ್ಞ ಡಾ. ಆರ್.ಟಿ.ಪಾಟೀಲ ಅವರು ಈ ವಿದ್ಯಾರ್ಥಿಯ ಕಲಿಕೆಗೆ ಆರ್ಥಿಕ ಸಹಾಯ ನೀಡಿದ್ದರು. ರವಿವಾರ ಮೆಟಗುಡ್ಡ ಗ್ರಾಮದಲ್ಲಿ ಜರುಗಿದ ಸಮಾರಂಭದಲ್ಲಿ ಭಾರತಿ ಪರೀಟ ಅವಳನ್ನು ಗ್ರಾಮದ ಹೇಮ ವೇಮ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಭಾರತಿ ನಮ್ಮ ಪೀಠಕ್ಕೆ ತನ್ನ ಮೊದಲ ತಿಂಗಳ ಸಂಬಳದಲ್ಲಿ 15000 ರೂಪಾಯಿಗಳನ್ನು ನಮ್ಮ ಪೀಠದ ಸಂಸ್ಥಾಪಕ ಅಧ್ಯಕ್ಷ ರಾಗಿದ್ದ, ದಿವಂಗತ ಡಾ.ಶಿವಣ್ಣ ಅಮಾತೆಪ್ಪನವರ ಅವರ ಪುತ್ರ, ಪೀಠದ ಸಂಚಾಲಕ ಮಾಲತೇಶ ಅಮಾತೆಪ್ಪನವರ ಅವರಿಗೆ  ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯರು, ಶರಣರು, ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ, ಪೀಠದ ಕಾರ್ಯಕರ್ತರಾದ ರಮೇಶ ಅಣ್ಣಿಗೇರಿ, ಏಚ್.ಜಿ.ಹುದ್ದಾರ, ಈಶ್ವರ ಕೋಣಪ್ಪನವರ, ಶ್ರೀನಿವಾಸ ಬೆನಕಟ್ಟಿ ಹಾಗೂ ಭಾರತಿ ಅವರ ತಂದೆ ಅರ್ಜುನ ಪರೀಟ ಇದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group