spot_img
spot_img

ಲಂಗು ಲಗಾಮಿಲ್ಲದ ಜೀವನ ನಡೆಸಿದರೆ ಅನರ್ಥಕ್ಕೆ ತುತ್ತಾಗುತ್ತದೆ.

Must Read

- Advertisement -

ಲಂಗು ಲಗಾಮಿಲ್ಲದ ಜೀವನವನ್ನು ನಡೆಸಿದರೆ ಅನರ್ಥಕ್ಕೆ ತುತ್ತಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಪ್ರೊ.ಹೊನ್ನಶೆಟ್ಟಿಹಳ್ಳಿ ಅವರ ಸುರತಸ್ವೈರ ಕಾದಂಬರಿ ತಿಳಿಸುತ್ತದೆ ಎಂದು ಪ್ರಾಧ್ಯಾಪರ ರಂಗೇಗೌಡ ಡಿ.ಬಿ. ತಿಳಿಸಿದರು.

ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಸಾಹಿತಿ ಕಲಾವಿದ ಗ್ಯಾರಂಟಿ ರಾಮಣ್ಣ ಅವರ ಪ್ರಾಯೋಜನೆಯಲ್ಲಿ ನಡೆದ ೩೨೦ನೇ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ ನಾಲ್ಕು ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳನ್ನು ಗಳಿಸಿ ಸಾರ್ಥಕ ಬದುಕನ್ನ ಬದುಕಬೇಕೆಂದು ಧರ್ಮ ಬೋಧಿಸುತ್ತದೆ ಮನುಷ್ಯ ಜೀವಿಯ ಪರಮಗುರಿ ಈ ನಾಲ್ಕನ್ನು ಆರ್ಜಿಸುವುದು ಎಂದು ಕಾದಂಬರಿಯನ್ನು ಹಲವು ಜೀವನದ ಉದಾಹರಣೆಗಳಿಂದ ಕೃತಿಯನ್ನು ವಿಮರ್ಶಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಎನ್.ಎಲ್.ಚನ್ನೇಗೌಡ, ಗೊರೂರು ಅನಂತರಾಜು, ಕಮಲಮ್ಮ, ದಿಬ್ಬೂರು ರಮೇಶ್, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ರುಮಾನ ಜಬೀರ್, ಎಂ.ಬಿ.ಪರಮೇಶ್ ಮಡಬಲು, ಎ.ನಂಜಪ್ಪ, ಹೆಚ್.ಬಿ.ಚೂಡಾಮಣಿ, ಪದ್ಮಾವತಿ ವೆಂಕಟೇಶ್, ಜಿ.ಆರ್.ರವಿಕುಮಾರ್ ಜನಿವಾರ, ಗ್ಯಾರಂಟಿ ರಾಮಣ್ಣ, ಆರ್. ವೆಂಕಟೇಶ್, ಕಾಮಕ್ಷಿ ಕೃಷ್ಣಮೂರ್ತಿ ಸ್ವರಚಿತ ಕವಿತೆ ವಾಚಿಸಿದರು. ವಾಚಿಸಲ್ಪಟ್ಟ ಕವಿತೆಗಳ ಕುರಿತು ಡಾ. ಬರಾಳು ಶಿವರಾಮ ವಿಮರ್ಶಿಸಿದರು. ಧನಲಕ್ಷ್ಮಿ ಹಾಸನ, ಎ.ನಂಜಪ್ಪ, ರಮೇಶ್ ದಿಬ್ಬೂರು, ಗ್ಯಾರಂಟಿ ರಾಮಣ್ಣ ಭಾವಗೀತೆಗಳನ್ನು, ಲಕ್ಷö್ಮಣ ತಟ್ಟೇಕೆರೆ ತತ್ವಪದವನ್ನು, ಅಪ್ಪಾಜಿಗೌಡ ಆರ್. ಹಲಸಿನಹಳ್ಳಿ, ರಾಮಲಿಂಗೇಗೌಡರವರು ರಂಗಗೀತೆಗಳಿಂದ ರಂಜಿಸಿದರು. ಸಂಚಾಲಕರು ಹಾಗೂ ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group