ಚುಟುಕೆಂದರೆ ನದಿಯುಗಮದಂತೆ – ಡಾ ಸುರೇಶ ನೆಗಳಗುಳಿ

Must Read

ಬಂಟ್ವಾಳ –   ಗಂಗಾ ಮೂಲದಲ್ಲಿ ಚಿಕ್ಕದಾಗಿ ಉಗಮಿಸಿದರೂ ಮುಂದುವರಿದು ಬ್ರಹತ್ತಾಗಿ ಅದೇ ಕಡಲು ಸೇರುವಂತೆ ಈ ಸಾಹಿತ್ಯ ಯಾನ. ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ ಎಂದು ಮಂಗಳೂರು ಮಂಗಳಾ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಹೇಳಿದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್ ಸಹಯೋಗದಲ್ಲಿ ದಿನಾಂಕ 4-_8-24 ರಂದು ಬಂಟ್ವಾಳ ಜೋಡುಮಾರ್ಗದ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮಿಲನದ ಸಂದರ್ಭದಲ್ಲಿ ಕವಿಗೋಷ್ಠಿ ಹಾಗೂ ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದುವರಿದು ಒಂದೇ ವಿಷಯವನ್ನು ಹೇಗೆ ಬಗೆ ಬಗೆಯ ಸಾಹಿತ್ಯ ಪ್ರಕಾರದಲ್ಲಿ ಬರೆಯ ಬಹುದು ಎನ್ನುತ್ತಾ ಅವರು ಚುಟುಕು, ರುಬಾಯಿ ಮುಕ್ತಕ ತನಗ ಹಾಯ್ಕು ಟಂಕಾ ಹಾಗೂ ಹನಿಗವನವಾಗಿ ಒಂದೇ ವಸ್ತುವನ್ನು ವಾಚಿಸಿ ತೋರಿಸಿದರು.

ಚುಟುಕು ವಾಚಿಸಿದ ಸುಮಾರು ನಲುವತ್ತಕ್ಕೂ ಮೀರಿದ ವಾಚಕರನ್ನು ಹೆಸರಿಸಿ ಶ್ಲಾಘಿಸಿದರು.

ಪರಿಷತ್ತಿನ ದ.ಕ ಜಿಲ್ಲಾದ್ಯಕ್ಷ ಜಯಾನಂದ ಪೆರಾಜೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವು ವಿ.ಬಿ ಕುಳಮರ್ವ ಹಾಗೂ ವಾಮನ ರಾವ್ ಬೇಕಲರವರ ಉಪನ್ಯಾಸ, ಡಾ ವಾಣಿಶ್ರೀ ಹಾಗೂ ಶಾಂತಾ ಕುಂಟಿನಿಯವರ ಬಳಗಗಳ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಅದ್ದೂರಿಯಾಗಿ ನೆರವೇರಿತು.

ಪರಿಷತ್ತಿನ ಸ್ಥಾಪಕಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಹಾಗೂ ಶುಭಾಶಂಸನೆ ಗೈದ ರೇಮಂಡ್ ಡಿಕೂನಾ, ಕಾರ್ಯದರ್ಶಿ ಶಾಂತಾ ಪುತ್ತೂರು, ಸಂಚಾಲಕಿ ಮಧುರಾ ಕಡ್ಯ ವೇದಿಕೆಯಲ್ಲಿದ್ದರು.

ಹಾವೇರಿ ಹುಬ್ಬಳ್ಳಿ ಹಾಸನ ಸಹಿತ ದೂರದ ಊರುಗಳಿಂದಲೂ ಆಗಮಿಸಿದ್ದ ಕವಿಗಳ ಸಹಿತ ಜಿಲ್ಲಾ ಪ್ರತಿನಿಧಿಗಳನೇಕರು ಭಾಗವಹಿಸಿದ್ದು ಕಳೆ ತಂದಿತು

ಅಪೂರ್ವ ಕಾರಂತ್, ರವೀಂದ್ರ ಕುಕ್ಕಾಜೆ,ರೇಖಾ ಸುದೇಶ ರಾವ್ ನಿರೂಪಣೆಗೈದರು

@ಡಾ ಸುರೇಶ ನೆಗಳಗುಳಿ
ಮಂಗಳೂರು

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group