ಮನೆ-ಮನಂಗಳಲ್ಲಿ ವಚನ ಕಾರ್ಯಕ್ರಮ

Must Read

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ವತಿಯಿಂದ ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳುವ ಮನೆ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಎಂಬ ಕಾರ್ಯಕ್ರಮ ದಿನಾಂಕ 13 ರಂದು ಶರಣ ದಂಪತಿಗಳಾದ ಸುಧಾ ಮಲ್ಲಿಕಾರ್ಜುನ ರೊಟ್ಟಿ ಇವರ ಕುಮಾರಸ್ವಾಮಿ ಲೇಔಟ್ ಮನೆಯಲ್ಲಿ ನೇರವೇರಿತು.

ಪಟಸ್ಥಲ ಧ್ವಜಾರೋಹಣ ಮಾಡಿ, “ವಚನಗಳಲ್ಲಿ ಪ್ರಸಾದ” ಕುರಿತು ಶರಣೆ ಸುನಿತಾ ನಂದೆಣ್ಣವರ ಅವರು ಪ್ರಸಾದವೆಂದರೇನು ಅದರ ಅರ್ಥ, ಮಹತ್ವ, ಹಾಗೂ ಶರಣರು ಪ್ರಸಾದ ಕಾಯದ ಬಗ್ಗೆ ಹೇಳಿರುವ ವಚನಗಳನ್ನು ವಿಶ್ಲೇಷಣೆ ಮಾಡುತ್ತ ಶುದ್ದ, ಸಿದ್ದ, ಪ್ರಸಿದ್ದ ಪ್ರಸಾದದ ಮಹತ್ವ ತಿಳಿಸಿದರು.

ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿದರು. ಪ್ರಾರ್ಥನೆಯನ್ನು  ಶೋಭಾ ಶಿವಳ್ಳಿ ನಡೆಸಿ ಕೊಟ್ಟರು , ಶರಣ ಮುರೆಗೆಪ್ಪಾ ಬಾಳಿಯವರು ಮತ್ತು ಕುಮಾರಸ್ವಾಮಿ ಲೇಔಟ್ ದ ಶರಣೆಯರು ವಚನ ಗಾಯನ ಮಾಡಿದರು. ಶರಣರಾದ ಕಟ್ಟಿಮನಿಯವರು ನಿರೂಪಣೆ ಮಾಡಿದರು. ಕಾರ್ಯದರ್ಶಿ ಶಂಕರ ಶೆಟ್ಟಿ ಹಾಗೂ ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group