1920 ರಲ್ಲಿ ಪ್ರಕಟಣೆಗೊಂಡ ಆಲೂರು ವೆಂಕಟರಾಯರ ಕರ್ನಾಟಕ ಗತವೈಭವದ ಬಗೆಗೆ, ಆಗಿನ ಕಾಲದ ಭಾಷಾ ಪ್ರಯೋಗ,ಪ್ರಾದೇಶಿಕ ಹೆಸರುಗಳು, ಜನಜೀವನ ಮುಂತಾದವುಗಳ ಬಗೆಗಿನ ಕಿರುಚಿತ್ರಣವನ್ನು ಉಪನ್ಯಾಸಕರಾದ ಡಾ.ಕಸ್ತೂರಿ ದಳವಾಯಿ ಅವರು ನಮ್ಮೊಂದಿಗೆ ಅತ್ಯಂತ ವಿವರವಾಗಿ ತಿಳಿಸಿಕೊಟ್ಟರು
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ (ಮೇಟಿ) ಪಾಟೀಲ್ ಬಾದಾಮಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ
9 ನೆಯ ದಿವಸದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಟ್ಟು 18 ಪ್ರಕಾರಗಳಾದ
1-ಈ ಮೃತವಾದ ಕರ್ನಾಟಕದಿಂದೇನು
2-ಕರ್ನಾಟಕವು ಮೃತರಾಷ್ಟ್ರವೇ
3-ಕರ್ನಾಟಕ – ವಿಸ್ತಾರ. 4-ಕರ್ನಾಟಕದ ವಿಭೂತಿಗಳು
5-ಸಾಧನ – ಸಾಮಗ್ರಿ
6- ಚಾಲುಕ್ಯರ ಪೂರ್ವದ ಕರ್ನಾಟಕ ಇತಿಹಾಸ
7- ಬಾದಾಮಿಯ ಚಾಲುಕ್ಯರು
8-ರಾಷ್ಟ್ರಕೂಟರು
9- ಕಲ್ಯಾಣದ ಚಾಲುಕ್ಯರು
10- ಕಲಚೂರ್ಯ -ಯಾದವ ಮುಂತಾದವರು
11- ವಿಜಯನಗರದ ಅರಸರು
12- ವೈಭವ -ವರ್ಣನೆ
13-ಕರ್ನಾಟಕದ ಕಟ್ಟಡಗಳು
14- ಧಾರ್ಮಿಕ ಉನ್ನತಿ
15- ವಾಙ್ಮಯ- ವೈಭವ
16-ಉಪಸಂಹಾರ
17-ಪೂರಕ ಪ್ರಕರಣ 1 -ಕರ್ನಾಟಕ ಇತಿಹಾಸ ಸಂಶೋಧನೆ
18-ಪೂರಕ ಪ್ರಕರಣ 2-ಲಿಪಿಗಳ ಮುದ್ರಣ ಪದ್ಧತಿ
ಇವುಗಳನ್ನು ಉಲ್ಲೇಖಿಸುತ್ತಾ, ಆರು ಪ್ರಕರಣಗಳ ವಿಶೇಷತೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
ನಮ್ಮ ದೇಶದ ಬುದ್ಧಿ, ಸಾಮರ್ಥ್ಯ, ವೈಭವ, ಅಭಿಮಾನವನ್ನು ಜನರಿಗೆ ತಲುಪಿಸಬೇಕು.ಪೂರ್ವಜರ ವಿಷಯ, ಪೂರ್ವದ ಸಂಸ್ಕೃತಿ, ಪೂರ್ವದ ಘನತೆಯನ್ನು ಹೇಳುವುದು ಒಂದನೆಯ ಪ್ರಕರಣದ ವಿಶೇಷ.ಕರ್ನಾಟಕದ ಇತಿಹಾಸ, ನಾಮಾವಳಿ, ರಾಷ್ಟ್ರೀಯ ಉತ್ಸವ, ರಾಷ್ಟ್ರೀಯತ್ವದ ಭಾವನೆಯನ್ನು ಬಿತ್ತುವುದನ್ನು ತಿಳಿಸುವುದು ಎರಡನೆಯ ಪ್ರಕರಣದ ವಿಶೇಷ. ಮೊದಲಿನ ಕರ್ನಾಟಕವು ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ, ವಿಸ್ತಾರವೆಷ್ಟು, ವ್ಯಾಪ್ತಿಯೆಷ್ಟು, ಮೊದಲಿನ ಕೆಲವು ಊರುಗಳು ಈಗ ಹೇಗೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಒಳಗೊಂಡಿವೆ ಎನ್ನುವುದು ಮೂರನೆಯ ಪ್ರಕರಣದ ವಿಶೇಷ. ಧರ್ಮಸ್ಥಾಪಕರು, ಕವಿಪುoಗವರು, ಅರಸರು ಮಾಡಿದ ಮಹಾಕಾರ್ಯಗಳು ಯಾವುವು ಎಂದು ಹೇಳುವುದು ನಾಲ್ಕನೆಯ ಪ್ರಕರಣದ ವಿಶೇಷ.
ಕರ್ನಾಟಕದ ಒಟ್ಟು ಎಂಟು ಸಾಧನಗಳು -ಶಿಲಾಶಾಸನಗಳು, ತಾಮ್ರಪಟ, ವೀರಗಲ್ಲುಗಳು, ನಾಣ್ಯಗಳು, ಪೂರ್ವಕಾಲದ ಕಟ್ಟಡಗಳು, ವಾಙ್ಮಯ, ವಿದೇಶಿಯ ಪ್ರವಾಸಿಗರು ಬರೆದಿಟ್ಟ ಬರಹಗಳು, ಪರಂಪರಾಗತವಾದ ಕಥೆಗಳು
ಇವೆಲ್ಲದರ ಬಗೆಗೆ ಹೇಳುವುದು ಐದನೆಯ ಪ್ರಕರಣದ ವಿಶೇಷ. ಕರ್ನಾಟಕದ ಪ್ರಸಿದ್ಧ ಅರಸರು ಯಾರು, ಅವರು ಯಾವಾಗ ಆಳಿದರು, ಸಾರ್ವಭೌಮ ರಾಜರ ಮನೆತನಗಳು ಯಾವುವು, ಮಾಂಡಲಿಕರ ಮನೆತನಗಳು ಯಾವುವು ಎಂಬುದನ್ನು ಹೇಳುವುದು ಆರನೆಯ ಪ್ರಕರಣದ ವಿಶೇಷ
ಎಂದು ಕರ್ನಾಟಕದ ಗತವೈಭವವನ್ನು ನಮಗೆಲ್ಲ ತಿಳಿಯುವಂತೆ ಸರಳವಾಗಿ ಬಿಡಿಸಿಟ್ಟರು.
ಡಾ. ಸುಧಾ ಕೌಜಗೇರಿ ಮೇಡಂ ನಮ್ಮ ವಚನ ಅಧ್ಯಯನ ವೇದಿಕೆಯು ಶರಣ ತತ್ವವನ್ನು ಹರಡುವುದರ ಜೊತೆಗೆ ಕನ್ನಡ ನಾಡು -ನುಡಿಗೆ ದುಡಿದವರನ್ನೂ ಸಹ ನೆನೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೆಮ್ಮೆಯಿಂದ ಹೇಳಿದರು. ಕನ್ನಡದ ಹಿರಿಮೆಯನ್ನು ಮೆರೆಯುವ, ಅದರ ಶ್ರೇಷ್ಠತೆಯನ್ನು ಒತ್ತಿ ಹೇಳುವ, ಶಿಕ್ಷಕಣಕ್ಕೆ ಮಹತ್ವ ಕೊಟ್ಟ ಆಲೂರ ವೆಂಕಟರಾಯರ ಬಗೆಗೆ ಬಹಳಷ್ಟು ವಿಷಯಗಳನ್ನು ನಮಗೆ ಹೇಳಿದರು
ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಮಾತುಗಳಲ್ಲಿ ರೋಣ ತಾಲೂಕಿನ ಇನ್ನಷ್ಟು ಮಹನೀಯರನ್ನು ನೆನಪು ಮಾಡಿಕೊಳ್ಳುತ್ತಾ, ಜಯಕರ್ನಾಟಕಪತ್ರಿಕೆಯ ಬಗೆಗೆ ಹೇಳುತ್ತಾ ಎಲ್ಲರೂ ಕರ್ನಾಟಕದ ಗತವೈಭವವನ್ನು ಓದಲೇಬೇಕು ಎನ್ನುವ ಕಿವಿಮಾತು ಹೇಳಿದರು. ಆಲೂರ ವೆಂಕಟರಾಯರ ವ್ಯಕ್ತಿತ್ವದ ಬಗೆಗೆ ಇನ್ನಷ್ಟು ಹೆಚ್ಚಿನ ವಿಷಯಗಳನ್ನು ಸ್ಮರಿಸಿಕೊಂಡರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣೆ ಲಕ್ಷ್ಮಿ ಕಾಯಕದ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯ,
ಶರಣೆ ಸುಧಾ ಪಾಟೀಲ ಅವರ ಶರಣು ಸಮರ್ಪಣೆ,ಶರಣೆ ಏoಜಲಿನಾ ಗ್ರೆಗರಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಡಾ. ದಾನಮ್ಮ ಝಳಕಿ ಅವರು ಅತ್ಯಂತ ಸಮರ್ಪಕವಾಗಿ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ