spot_img
spot_img

ಜಡಿಸಿದ್ಧೇಶ್ವರ ಸೊಸಾಯಿಟಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

Must Read

spot_img
- Advertisement -

ಮೂಡಲಗಿ: ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ೧೩ ಜನ ನಿರ್ದೇಶಕರ ಆಯ್ಕೆಗೆ ಜ.೨೫ ರಂದು ನಡೆಯಬೇಕಿದ್ದ ಚುನಾವಣೆಯಲ್ಲಿ ಜ.೧೯ ರಂದು ಅಭ್ಯರ್ಥಿಗಳ ನಾಮ ಪತ್ರ ವಾಪಸ ಪಡೆಯುವ ಕಡೆಯ ದಿನದಂದು ೩೦ ಅಭ್ಯರ್ಥಿಗಳಲ್ಲಿ ೧೭ ಅಭ್ಯರ್ಥಿಗಳು ತಮ್ಮ ನಾಮ ವಾಪಸ ಪಡೆದಿದ್ದರಿಂದ ೧೩ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿ ಆನಂದ ಹೇರೆಕರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಬಕವಿ ಕಾರ್ಯ ನಿರ್ವಹಿಸಿದರು.

ನೂತನ ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಶಂಕರ ಕಾ.ಪತ್ತಾರ, ಚಂದ್ರಶೇಖರ ಅ.ಗಾಣಿಗೇರ, ಪ್ರಭಾಕರ ಬ.ನರಗುಂದ, ಮುರಿಗೆಪ್ಪ ಶಿ.ಪಾಟೀಲ, ಬಸವರಾಜ ಶಿ.ಮದಬಾವಿ, ಶಿವಾನಂದ ಶಿ.ವಾಲಿ, ಬಸವರಾಜ ಲಿಂ.ಪಾಟೀಲ, ಮಹಿಳಾ ಕ್ಷೇತ್ರದಿಂದ ಬಾಗವ್ವ ಮಾ.ದೇವನಗಳ, ಕೆಂಪವ್ವಾ ವಿ.ಬಾಗೋಜಿ, ಹಿದುಳಿದ ಅ ವರ್ಗದಿಂದ ರವೀಂದ್ರ ಕ.ಕಮತಿ, ಹಿದುಳಿದ ಬ ವರ್ಗದಿಂದ ಭಿಮಣ್ಣಾ ಬಾ.ಹೊಟ್ಟಿಹೊಳಿ, ಪ/ಜಾ ಕ್ಷೇತ್ರದಿಂದ ಮಾರುತಿ ಬಾ.ಭಜಂತ್ರಿ, ಪ/ಪಂ ಕ್ಷೇತ್ರದಿಂದ ನಾಗರಾಜ ಕಾ.ಮಾಳಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

- Advertisement -

ಚುನಾವಣೆಗೆ ನಾಮಪತ್ರಸಲ್ಲಿಸಿದ ಖಾನಗೌಡ ಪಾಟೀಲ, ರವಿ ಹೊಟ್ಟಿಹೊಳಿ, ಸುಲೋಚನಾ ಪತ್ತಾರ, ಮಾರುತಿ ದೇವನಗೋಳ, ವೀರಪಣ್ಣಾ ಬಾಗೋಜಿ, ಸೀಮಾ ವಾಲಿ, ಮಾರುತಿ ನಾಯಿಕ, ಮಾರುತಿ ಅರಬಿ, ನಿಂಗಪ್ಪ ಹುಂಡೇಕಾರ, ಶ್ರೀಶೈಲ ವಾಲಿ, ಶಾಂತವ್ವ ಈಟಿ, ಶಿವಲೀಲಾ ಗಾಣಿಗೇರ, ಕಲಾವತಿ ಪಾಟೀಲ, ತಾಯವ್ವ ಗುಂಡೊಳ್ಳಿ, ರೇಖಾ ಕಮತಿ, ಗದಿಗೆಪ್ಪ ಅಮಣಿ, ದ್ರಾಕ್ಷಾಯಣಿ ಚೌಗಲಾ ಇವರು ಗ್ರಾಮದ ಹಿರಿಯಾರದ ರಾಜು ವಾಲಿ, ಮಾರುತಿ ಹೊರಟ್ಟಿ, ಭೀಮಪ್ಪ ಹೂವನ್ನವರ, ಸಿದ್ಧಾರೂಡ ಕಮತಿ, ನಿಂಗಪ್ಪ ಕಮತಿ, ಗುರುರಾಜ ಪಾಟೀಲ ಮಧ್ಯಸ್ಥಿಕೆಯಲ್ಲಿ ನಾಮ ಪತ್ರವನ್ನು ಪಾಪಸ ಪಡೆದು ಕೊಂಡಿದ್ದರಿಂದ ೧೩ ನಿರ್ದೇಶಕರ ಆಯ್ಕೆ ಅವಿರೋಧವಾಗಿ ಜರುಗಿತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group