spot_img
spot_img

ಬಾಗವಾನ ಜಮಾತ್ ಸಮುದಾಯದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ

Must Read

- Advertisement -

ಸಿಂದಗಿ: ಮನಗೂಳಿ ಮನೆತನಕ್ಕೂ ಹಾಗೂ ಮುಸ್ಲಿಂ ಬಾಗವಾನ ಜಮಾತ್ ಗೂ ನಮ್ಮ ತಂದೆಯವರ ಕಾಲದಿಂದಲೂ ಒಂದು ಅವಿನಾಭಾವ ಸಂಬಂಧವಿದೆ, ಪ್ರಥಮವಾಗಿ ವಿಧಾನಸಭೆ ಚುನಾವಣೆಯಲ್ಲಿ ತಂದೆಯವರಾದ ದಿ. ಎಂ ಸಿ ಮನಗೂಳಿ ಅವರ ಚುನಾವಣೆಯಲ್ಲಿ ಸೈಕಲ್ ಮೂಲಕ ಪ್ರಚಾರ ಮಾಡಿದ ಕೀರ್ತಿ ಭಾಗವಾನ ಸಮುದಾಯದ ಹಿರಿಯರಿಗೂ ಸಲ್ಲುತ್ತದೆ ತಾವೆಲ್ಲರೂ ನನ್ನನ್ನು ಶಾಸಕ ಎಂದು ನೋಡಬೇಡಿ  ನಿಮ್ಮ ಮನೆಯ ಸದಸ್ಯನೆಂದು ಭಾವಿಸಿ ನಿಮ್ಮ ಕೆಲಸಕಾರ್ಯಗಳಿಗಾಗಿ ನೇರವಾಗಿ ಸಂಪರ್ಕಿಸಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಿಂದಗಿ ಮುಸ್ಲಿಂ ಬಾಗವಾನ ಜಮಾತ್ ವತಿಯಿಂದ ಡಾ. ಎ ಪಿ ಜೆ ಅಬ್ದುಲ್ ಕಲಾಂ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡ  ನೂತನ ಶಾಸಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನತೆ ಮನಗೂಳಿ ಮನೆತನದ ಮೇಲೆ ಅಪಾರವಾದ ಅಭಿಮಾನವನ್ನು ಇಟ್ಟು ನಿರೀಕ್ಷೆಗಿಂತಲೂ ಅಧಿಕ ಮತಗಳಿಂದ ಆಯ್ಕೆ ಮಾಡಿ ವಿಧಾನಸಭಾ ಸದಸ್ಯನಾಗಿ ಆಯ್ಕೆ ಮಾಡಿ ಕಳಿಸಿ ನಿಮ್ಮ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದೀರಿ ತಮ್ಮೆಲ್ಲರಿಗೆ ಕೊಟ್ಟ ಭರವಸೆಗಳನ್ನು ಹುಸಿ ಹೋಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ ಮತ್ತು 6 ತಿಂಗಳಲ್ಲಿ ಶಾದಿ ಮಹಲ್ ಕಾಮಗಾರಿಯನ್ನು ಪೂರ್ಣಗೊಳಿಸಿ ವಿಜಯಪುರ ಮಾಜಿ ಶಾಸಕ ಮಕಬುಲ್ ಭಾಗವನ ಅವರನ್ನು ಕರೆಸಿ ಭೂಮಿ ಪೂಜೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

- Advertisement -

ನಂತರ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ  ವ್ಯಾಪಾರ ವಹಿವಾಟವೆ ದೇವರು ಎಂದು ನಂಬಿರುವ ಮುಸ್ಲಿಂ ಬಾಗವಾನ ಜಮಾತ ಜನತೆ ಅತ್ಯಂತ ಪ್ರಾಮಾಣ ಕ ಕರ್ತವ್ಯ ನಿಷ್ಠೆ ಹೊಂದಿದಂತ ಸಮಾಜ, ಜ್ಯಾತ್ಯತೀತವಾಗಿ ಇನ್ನೊಬ್ಬರೊಂದಿಗೆ ಅನ್ಯೋನ್ಯವಾಗಿದ್ದು ಇನ್ನೊಬ್ಬರಿಗೆ ಅನ್ಯಾಯ ಮಾಡದೆ ಬದುಕು ಕಟ್ಟಿಕೊಂಡು ಇನ್ನೊಬ್ಬರಿಗೆ ಮಾದರಿ ಬದುಕು ತೋರಿಸಿಕೊಡುವಂತ ಬುದ್ದಿವಂತ ಜನ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಮಧ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಲಿಂ ಪಟೇಲ್  ಮರ್ತುರ್, ಡಾಕ್ಟರ್ ಯಾಶಿನ್  ದೋಣಿವಾಲೆ, ರಜಾಕ್ ನಾಟಿಕರ್  ಜುಬೇರ್  ಅಳ್ಳೊಳ್ಳಿ, ಮೈನುದ್ದೀನ್ ನಾಗಠಾಣ್, ಹೈದರಾಲಿ ಬಾಗವಾನ, ಮುಗಳಿ, ಆಸ್ಮ ಮುಗಳಿ, ಅಬ್ದುಲ್ ಅಲ್ಮೆಲ್, ಫಯಾಜ್ ಚೌದ್ರಿ, ಮಂಜೂರ್ ಅಲಿ ಬಾಗವನ, ರಜಾಕ್ ಸಾಬ್ ಭಗವಾನ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ಮೌಲಾನ ಮೊಹಮದ್ ಹುಸೇನ್ ಉಮರಿ ದಿವ್ಯ ಸಾನ್ನಧ್ಯವಹಿಸಿದ್ದರು, ಮುಫ್ತಿ ಸೋಹೆಲ್ ಬ್ಯಾಕೋಡ ಸಾನ್ನಿಧ್ಯ ವಹಿಸಿದ್ದರು.

- Advertisement -

ವಿಜಯಪುರ ಮಾಜಿ ಶಾಸಕ ಮಕಬುಲ್ ಭಾಗವಾನ, ಅಶೋಕ ವಾರದ, ಅಬ್ದುಲ್ ಖಾದಿರ ಬಾಗವಾನ, ವರ್ತಿ, ದಿನೇಶ್ ಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ್ ಪೂಜಾರಿ, ಅಲ್ಮೆಲ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಾಧಿಕ್ ಸುಂಬಡ್, ಸೈಪನ್ ಸಾಬ್ ನಾಟಿಕಾರ್, ರಾಜ್ ಅಹ್ಮದ್ ಖಡ್ ಖಾಸಿಂ ಮುಖಂದರ್, ಮುಸ್ತಾಕ್ ಹತ್ತಾರ್, ಮುನ್ನ ಚೌದರಿ, ಅಲ್ತಾಫ್ ಭಗವಾನ್, ಬಾಬು ಸಾಬ್ ತಡುವಲ್, ವಹಿದ್ ಭಾಗವಾನ್ ಇದ್ದರು,.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group