spot_img
spot_img

 ಧ್ವನಿ ತಪಸ್ವಿ ಯಮುನಾ ಮೂರ್ತಿಯ ಕೊಡುಗೆ ರಂಗಭೂಮಿಗೆ ಅಪಾರ  – ಡಾ. ವಸುಂಧರಾ ಭೂಪತಿ ಅಭಿಮತ 

Must Read

    ಹಿರಿಯ ರಂಗಕರ್ಮಿ, ಕಿರುತೆರೆ ಹಾಗೂ ಹಿರಿತೆರೆಯ ಕಲಾವಿದೆ, ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಶ್ರೀಮತಿ ಯಮುನಾ ಮೂರ್ತಿಯವರ ಅಭಿನಂದನೆ  ಹಾಗೂ ಅವರ ಬದುಕು ಹಾಗೂ ಸಾಧನೆಯ ಕುರಿತಾದ ಸಾಕ್ಷ್ಯಚಿತ್ರ’ಧ್ವನಿತಪಸ್ವಿ’ ಬಿಡುಗಡೆಯು ಯಮುನಾ ಮೂರ್ತಿಯವರ ಸ್ವಗೃಹದಲ್ಲಿ ನೆರವೇರಿತು.
 ಆಪ್ತ ವಲಯದ ಒಡನಾಡಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಸಾಹಿತಿ ಡಾ|| ವಸುಂಧರಾ ಭೂಪತಿಯವರು ಮಾತನಾಡಿ “ಯಮುನಾ ಮೂರ್ತಿಯವರು ಒಂದು ದೀಪವಿದ್ದಂತೆ, ಅವರು ತಮ್ಮ ಧ್ವನಿ ಹಾಗೂ ಕಲೆಯ ಮೂಲಕ ಕನ್ನಡಿಗರೆಲ್ಲರ ಮನೆ ಮನಗಳನ್ನು ಬೆಳೆಸಿದ ಪ್ರತಿಭಾವಂತರಾಗಿದ್ದಾರೆ” ಎಂದು ಹೇಳಿದರು.
ಧಾರವಾಡಡ ಹಿರಿಯ ರಂಗಕರ್ಮಿ ಶಶಿಧರ್ ನರೇಂದ್ರ ಅವರು ಮಾತನಾಡಿ “ಯಮುನಾ ಮೂರ್ತಿ ಎಂದರೆ ಅದು ಹಲವು ಮೊದಲುಗಳ ದಾಖಲೆ. ಶಿಸ್ತು, ಅಚ್ಚುಕಟ್ಟುತನ, ಕಲೆಯ ಬಗೆಗಿರುವ ಅವರ ಆಸಕ್ತಿಯಿಂದಾಗಿ ಅವರು ಸದಾ ಕಾಲ ನೆನಪಿರುವಂಥವರು, ಅವರ ಈಗಿನ ವಯಸ್ಸು ನೂರಾಗಿ ನಮ್ಮ ಜೊತೆ ಅವರು ಆರೋಗ್ಯವಾಗಿ ಇರುವಂತಾಗಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲಾವಿದ ಬಾಬು ಹಿರಣ್ಣಯ್ಯ ಅವರು ಯಮುನಮ್ಮನವರ ಜೊತೆಗಿನ ಒಡನಾಟದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದು ವಿಶೇಷವೆನಿಸಿತ್ತು.ಸರ್ಕಾರ, ಅಕಾಡೆಮಿ ಮಾಡಬೇಕಿದ್ದ ಈ ಸಾಕ್ಷಚಿತ್ರ ವನ್ನು ಉತ್ಸಾಹಿ ಸುಮಾ ಸಂಜೀವ ನಿರ್ಮಿಸಿರುವುದು ಶ್ಲಾಘನೀಯ ಎಂದರು.
 ‘ಸಮಗ್ರ’ದ ಸಂಚಾಲಕಿ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕಿ ಡಾ. ಸುಮಾ ಸಂಜೀವ್ ಕೆ. ಹಾಗೂ ಸಂಜೀವ್ ಕೆ., ನಟಿ,ನಿರ್ದೇಶಕಿ ಅನನ್ಯ ಕಾಸರವಳ್ಳಿ, ವಿಶ್ರಾಂತ ಕುಲಪತಿ ಡಾ. ಎ. ಮುರೆಗಪ್ಪ, ಆಕಾಶವಾಣಿಯ ಬಿ. ಕೆ ಸುಮತಿ, ಅಂಕಣಕಾರ ಅಣಕು ರಾಮನಾಥ್, ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರ ಉಪಸ್ಥಿತಿಯಲ್ಲಿ ಎನ್‌.ಎಂ.ಕೆ.ಆರ್‌.ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ  ನಿರೂಪಿಸಿದರು.
- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group