spot_img
spot_img

ಆ.24 ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ

Must Read

ಬೆಂಗಳೂರು – ನಗರದ ಹೆಚ್ಎಸ್ಆರ್ ಬಡಾವಣೆಯ ಎರಡನೇ ಸೆಕ್ಟರ್ ಶಿರಡಿ ಸಾಯಿಬಾಬಾ ದೇವಸ್ಥಾನ ಎದುರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಎಚ್ಎಸ್ಆರ್ ಬಡಾವಣೆ ಸಾಂಸ್ಕೃತಿಕ ಅಕಾಡೆಮಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಆಗಸ್ಟ್ 24 ಶನಿವಾರ ಸಂಜೆ 5:00 ಯಿಂದ ಶ್ರೀ ಶ್ರೀನಿವಾಸ ಉತ್ಸವ ಬಳಗದ ಸಹಯೋಗದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದೆ.
 ಈ ಕಾರ್ಯಕ್ರಮವನ್ನು ಪ್ರತಿ ವರ್ಷದ ಶ್ರಾವಣ ಮೂರನೇ ಶನಿವಾರದಂದು ಹಮ್ಮಿಕೊಂಡು ಬರಲಾಗುತ್ತಿದೆ. ಅನೇಕ ಧಾರ್ಮಿಕ- ಸಾಂಸ್ಕೃತಿಕ -ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
 ಆಗಸ್ಟ್ 24 ರಂದು ಬೆಳಗ್ಗಿನಿಂದ ಪೂಜಾ ಕೈಂಕರ್ಯಗಳು, ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ ಸಂಜೆ 4 ರಿಂದ ಭೂದೇವಿ ಶ್ರೀದೇವಿ ಸಹಿತ ಶ್ರೀ ಶ್ರೀನಿವಾಸದೇವರ ಭವ್ಯ ಮೆರವಣಿಗೆ. ಟಿಟಿಡಿ ಅನ್ನಮಾಚಾರ್ಯ ಪ್ರಾಜೆಕ್ಟ್ ವತಿಯಿಂದ  ಅನ್ನಮಾಚಾರ್ಯರ ಸಂಕೀರ್ತನೆ ಡಾ.ರಾಮದುರ್ಗಮ್ ಶಾಮ ಕುಮಾರ್ ರವರಿಂದ,  ಶ್ರೀ ಶ್ರೀನಿವಾಸ ಉತ್ಸವ ಬಳಗದ ರೂವಾರಿ ಡಾ ವಾದಿರಾಜ ತಾಯಲೂರು ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ, ಉಡುಪಿಯ ಖ್ಯಾತ ವಿದ್ವಾಂಸ ಬಿ ಗೋಪಾಲಾಚಾರ್ಯರವರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ, ಖ್ಯಾತ ಸಂಗೀತ ವಿದುಷಿ ಶುಭ ಸಂತೋಷ್ ಮತ್ತು ವಿದ್ವಾನ್ ಗುರುರಾಜ ಕೆ ರವರಿಂದ ಭಕ್ತಿ ಸುಧಾ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಎಸ್ ಉಗ್ರಪ್ಪ, ಬೊಮ್ಮನಹಳ್ಳಿ ಶಾಸಕ ಎಂ ಸತೀಶ್ ರೆಡ್ಡಿ, ಆಂಧ್ರಪ್ರದೇಶದ ಮುಜರಾಯಿ ಸಚಿವ ಆನಂ ರಾಮನಾರಾಯಣ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಮಾಜಿ ಬಿಬಿಎಂಪಿ ಸದಸ್ಯ ಕೆ ಗುರುಮೂರ್ತಿ ರೆಡ್ಡಿ ಹಾಗೂ ಸಮಾಜಸೇವಕ ಟಿ.ವಾಸುದೇವರೆಡ್ಡಿ ಭಾಗವಹಿಸುವರು  ಎಂದು ಕಾರ್ಯಕ್ರಮದ ಆಯೋಜಕರಾದ ಪ್ರೊ. ಪಿ ಸದಾಶಿವರೆಡ್ಡಿ ತಿಳಿಸಿರುತ್ತಾರೆ.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group